Advertisement

Udupi: ತಿರುಚಿದ ಛಾಯಾಚಿತ್ರ ಪ್ರಸಾರದ ವಿರುದ್ಧ ಕ್ರಮ: ಪ್ರಸಾದ್‌ರಾಜ್‌ ಕಾಂಚನ್‌

02:31 AM Oct 17, 2024 | Team Udayavani |

ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ನನ್ನ ಫೋಟೋವನ್ನು ಎಡಿಟ್‌ ಮಾಡಿ ಕೋಮು ಗಲಭೆಗೆ ಪ್ರಚೋದನೆ ನೀಡುವಂತೆ ಬಿಂಬಿಸಲಾಗಿದ್ದು, ಸಂಬಂಧಪಟ್ಟವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್‌ ಮುಖಂಡ ಪ್ರಸಾದ್‌ರಾಜ್‌ ಕಾಂಚನ್‌ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

Advertisement

ಸಾಮಾಜಿಕ ಜಾಲತಾಣದಲ್ಲಿ ನನ್ನ ಫೋಟೋವನ್ನು ಎಡಿಟ್‌ ಮಾಡಿ ಬೇರೆ ಧರ್ಮದವರೊಂದಿಗೆ ಸೇರಿಕೊಂಡು ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜರಗಿದ ನವರಾತ್ರಿ ಉತ್ಸವದ ವೇದಿಕೆಯಲ್ಲಿ ಇತರ ಸಮುದಾಯದ ವ್ಯಕ್ತಿಗೆ ಸಮ್ಮಾನ ಮಾಡಿ, ಹಿಂದೂ ಧರ್ಮದ ನೀತಿಗೆ ವಿರುದ್ಧವಾಗಿ ವರ್ತಿಸಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಪ್ರಚಾರಕ್ಕಾಗಿ ಉಡುಪಿಯ ಮಸೀದಿಗೆ ಹೋಗಿದ್ದು, ಆ ಸಮಯದಲ್ಲಿ ಕೆಲವು ದುಷ್ಕರ್ಮಿಗಳು ನನ್ನ ಫೋಟೋವನ್ನು ಎಡಿಟ್‌ ಮಾಡಿ ಮುಸ್ಲಿಮರ ಟೋಪಿಯನ್ನು ನನ್ನ ತಲೆಗೆ ಇರಿಸಿ ಸಾಮಾಜಿಕ ಜಾಲತಾಣದಲ್ಲಿ ನಾನು ಹಿಂದೂ ವಿರೋಧಿ ಎಂದು ಪ್ರಚಾರ ಮಾಡಿ ನನ್ನ ಸೋಲಿಗೆ ಕಾರಣರಾಗಿದ್ದಾರೆ. ಅದೇ ಎಡಿಟ್‌ ಫೋಟೋವನ್ನು ದುಷ್ಕರ್ಮಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿ ನನ್ನನ್ನು ರಾಜಕೀಯವಾಗಿ ಕುಗ್ಗಿಸಲು ಸಂಚು ನಡೆಸಿದ್ದಾರೆ. ಈ ಬಗ್ಗೆ ಸೆನ್‌ ಠಾಣೆಗೂ ದೂರು ನೀಡಲಾಗುವುದು ಎಂದರು.

ಮಲ್ಪೆ ಆಳಸಮುದ್ರ ಮೀನುಗಾರರ ಸಂಘದ ಕಾರ್ಯದರ್ಶಿ ಮನೋಜ್‌ ಎಸ್‌.ಕರ್ಕೇರ, ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಮೀನುಗಾರಿಕೆ ವಿಭಾಗದ ಅಧ್ಯಕ್ಷ ನವೀನ್‌ ಬಂಗೇರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next