ಬೆಂಗಳೂರು: ಬ್ರಿಗೇಡ್ ರಸ್ತೆಯ ನೀಲಗಿರೀಸ್ ಕಟ್ಟಡ ಖರೀದಿಗೆ ನಕಲಿ ದಾಖಲೆ ಸೃಷ್ಟಿಸಿ ಬೆದರಿಕೆ ಹಾಕಿದ ಆರೋಪದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ರಿಯಲ್ ಎಸ್ಟೇಟ್ ಉದ್ಯಮಿ, ಗುತ್ತಿಗೆದಾರ ಉದಯ್ ಗೌಡ ಶ್ರೀಲಂಕಾಗೆ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
2017ರ ಪ್ರಕರಣಕ್ಕೆ ಮರುಜೀವ ನೀಡಿರುವ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು, ಮಂಗಳವಾರ ಮಲ್ಲೇಶ್ವರದ ಉದಯ್ ಗೌಡ ನಿವಾಸದಲ್ಲಿ ಶೋಧ ನಡೆಸಿದ್ದರು. ಈ ವೇಳೆ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ ಆರೋಪಿ, ರಾತ್ರಿ ಶ್ರೀಲಂಕಾಗೆ ತೆರಳಿದ್ದಾನೆ. ಆತನ ಮೊಬೈಲ್ ಟವರ್ ಲೋಕೇಶನ್ ಕೊಲಂಬೋದಲ್ಲಿ ತೋರಿಸುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಪ್ರಕರಣದ ಇತರ ಆರೋಪಿಗಳಾದ ಕೆ.ವಿ ನಾಯ್ಡು, ಬಂಟ್ವಾಳದ ಸಂತೋಷ್ ರೈ, ಗೋಪಾಲ್.ವಿ.ಕೆ ಕೂಡ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಮಂಗಳವಾರ ಡಾಲರ್ಕಾ ಲೋನಿಯಲ್ಲಿರುವ ನಾಯ್ಡು ನಿವಾಸದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳು ಲಭ್ಯವಾಗಿದ್ದು, ಪರಿಶೀಲಿಸಲಾಗುತ್ತಿದೆ. ಅವರು ಹೊಂದಿದ್ದ ಆಸ್ತಿ, ಹಣಕಾಸು ವಹಿವಾಟಿನ ಬಗ್ಗೆಯೂ ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಕಳೆದ ವರ್ಷ ದಾಖಲಾದ ದೂರಿನ ಸಂಬಂಧ ಕಾನೂನು ಪ್ರಕ್ರಿಯೆಗಳ ಅನುಸರಿಸಿ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಪತ್ತೆಗೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ತಿಳಿಸಿದರು.
ಹೋಟೆಲ್‌ಗಳ ಸಿಸಿ ಕ್ಯಾಮೆರಾ ಫೂಟೇಜ್ ವಶಕ್ಕೆ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿ ಸಲು ನಾಲ್ವರು ಕಿಂಗ್‌ಪಿನ್‌ಗಳು ಪ್ರಯತ್ನ ನಡೆಸಿದ್ದು, ಖಾಸಗಿ ಹೋಟೆಲ್‌ಗಳಲ್ಲಿ ಚರ್ಚೆ ನಡೆಸಿದ್ದಾರೆ ಎಂಬ ಆರೋಪಗಳ ನಡುವೆಯೇ ಪೊಲೀಸರು ನಗರದ ಹಲವು ಖಾಸಗಿ ಹೋಟೆಲ್‌ಗಳ ಸಿಸಿ ಕ್ಯಾಮೆರಾ ಫೂಟೇಜ್ ವಶಕ್ಕೆ ಪಡೆದಿದ್ದಾರೆ. ಕ್ರಿಮಿನಲ್ ಪ್ರಕರಣವೊಂದರಲ್ಲಿ ಭಾಗಿಯಾದ ಆರೋಪಿಗಳ ಪತ್ತೆಗೆ ಸಂಬಂಧಿ ಸಿದಂತೆ ದೃಶ್ಯಾವಳಿ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದ ಹಿರಿಯ ಪೊಲೀಸ್ ಅಧಿಕಾರಿ ಯೊಬ್ಬರು, ಆ ಪ್ರಕರಣ ಕುರಿತು ತನಿಖೆ ಮುಂದುವರಿದಿದೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದರು.