Advertisement
ಮೊದಲು ಎಲೆಕ್ಟ್ರೀಶಿಯನ್ ಆಗಿದ್ದ ಅವರು ಬೆಂಗಳೂರಿನಲ್ಲಿ ಹೊಟೇಲ್ ಉದ್ಯೋಗಿಯಾಗಿ ಪತ್ರಿಕೋದ್ಯಮ ಕೋರ್ಸ್ ಓದಿದ್ದರು. ಕೆಲ ಕಾಲ ಬೆಂಗಳೂರಿನ ಸ್ಥಳೀಯ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದ ಅವರು ಬಳಿಕ ರಾಜ್ಯ ಮಟ್ಟದ ಪತ್ರಿ ಕೆ ಯಲ್ಲಿ ವರದಿಗಾರರಾಗಿದ್ದರು. ನಾಟಕ ರಚನೆ, ನಿರ್ದೇಶನದಲ್ಲಿಯೂ ಪ್ರತಿಭೆ ಹೊಂದಿದ್ದರು. ಸ್ಥಳೀಯವಾಗಿ ನಡೆಯುತ್ತಿದ್ದ ಗಣೇಶೋತ್ಸವ ಮೊದಲಾದ ಕಾರ್ಯಕ್ರಮಗಳಲ್ಲಿ ತಾನೇ ನಾಟಕ ರಚಿಸಿ ನಿರ್ದೇಶನ ನೀಡುತ್ತಿದ್ದರು. ಯಕ್ಷಗಾನ ರಂಗ ದಲ್ಲೂ ಆಸ ಕ್ತಿ ಹೊಂದಿದ್ದ ಅವರು, ಪ್ರಸಂಗ ರಚಿಸಿ ನಿರ್ದೇಶನ ನೀಡುತ್ತಿದ್ದರು. ಯಕ್ಷಗಾನದ ಪಾತ್ರಗಳನ್ನೂ ನಿರ್ವಹಿಸಿದ್ದರು.
ಗುರುವಾರ ಕೆದೂರಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ಉಡುಪಿ, ಕುಂದಾಪುರ, ಬ್ರಹ್ಮಾವರ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸಂತಾಪ ಸೂಚಿಸಿದರು.