Advertisement

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

12:37 AM Nov 29, 2024 | Team Udayavani |

ಉಡುಪಿ: ರಾಜ್ಯದ ಮೀನುಗಾರರ ಬೇಡಿಕೆ ಹಾಗೂ ಸಮಸ್ಯೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಆದ್ಯತೆ ಮೇರೆಗೆ ಪರಿಹರಿಸಲು ಬದ್ಧನಿದ್ದೇನೆ. ಶೀಘ್ರದಲ್ಲಿ ಮಲ್ಪೆ ಬಂದರಿಗೆ ಭೇಟಿ ನೀಡಿ ಮೀನುಗಾರಿಕೆಗೆ ಪೂರಕವಾದ ಯೋಜನೆಗಳ ಅನುಷ್ಠಾನ, ಬಂದರಿನ ಸಂಪೂರ್ಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರು ಹೇಳಿದರು.

Advertisement

ಅವರು ಶಾಸಕ ಯಶ್‌ಪಾಲ್‌ ಸುವರ್ಣ ನೇತೃತ್ವದಲ್ಲಿ ಮಲ್ಪೆ ಮೀನು ಗಾರ ಸಂಘದ ನಿಯೋಗ ಸಭೆ ನಡೆಸಿ ಮಲ್ಪೆ ಮೀನುಗಾರಿಕೆ ಬಂದರಿನ ಹಲವು ಸಮಸ್ಯೆ ಹಾಗೂ ಮೀನುಗಾರಿಕೆ ಸಂಬಂ ಧಿಸಿದ ಹಲವು ತುರ್ತು ಬೇಡಿಕೆಗಳ ಬಗ್ಗೆ ಸಮಾಲೋಚನೆ ನಡೆಸಿ ಮೀನುಗಾರರ ನಿಯೋಗಕ್ಕೆ ಭರವಸೆ ನೀಡಿದರು.

ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಮಲ್ಪೆ ಮೀನುಗಾರಿಕೆ ಬಂದರಿನ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾವಿಸಿದರು.

ಬೇಡಿಕೆಗಳೇನು?
ಮಲ್ಪೆ ಮಹಿಳಾ ಮೀನುಗಾರರ ಸಂಘದ ಒಣ ಮೀನು ವ್ಯಾಪಾರಕ್ಕೆ ನಿವೇಶನ ಮಂಜೂರು, ಬಂದರಿನಲ್ಲಿ ಸುಗಮ ಮೀನುಗಾರಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರಂತರವಾಗಿ ಡ್ರಜ್ಜಿಂಗ್‌ ನಡೆಸಿ ಹೂಳು ತೆರವು ಮಾಡುವುದು, ಮೀನುಗಾರಿಕೆ ಅವಘಡ ಸಂದರ್ಭದಲ್ಲಿ ವಿಮೆ ಪರಿಹಾರ ಮೊತ್ತ ಬಿಡುಗಡೆ ಪ್ರಕ್ರಿಯೆ ನಿಯಮಾವಳಿ ಸರಳಗೊಳಿಸುವುದು, ನಾಡದೋಣಿ ಹಾಗೂ ಯಾಂತ್ರೀಕೃತ ಬೋಟ್‌ಗಳಿಗೆ ಸ್ಥಳದ ಕೊರತೆ ಹಿನ್ನೆಲೆ ಪ್ರಸ್ತಾವಿತ ನೂತನ ಜೆಟ್ಟಿ ನಿರ್ಮಾಣಕ್ಕೆ ಆದ್ಯತೆ, ಗೋವಾ, ಮಹಾರಾಷ್ಟ್ರ, ಕೇರಳ ಸಹಿತ ನೆರೆ ರಾಜ್ಯಗಳೊಂದಿಗೆ ಸಮನ್ವಯ ಮೂಲಕ ಸುಗಮ ಮೀನುಗಾರಿಕೆ ಚಟುವಟಿಕೆ ನಡೆಸುವ ನಿಟ್ಟಿನಲ್ಲಿ ಏಕರೂಪ ಮೀನುಗಾರಿಕೆ ನೀತಿ ಜಾರಿ, 4ನೇ ಹಂತದ ಬಂದರು ಅಭಿವೃದ್ಧಿಗಾಗಿ ಟೆಬಾ¾ ಶಿಪ್‌ ಯಾರ್ಡ್‌ ಬಳಿಯ ಸ್ಥಳವನ್ನು ಮೀನುಗಾರಿಕೆ ಉದ್ದೇಶಕ್ಕೆ ಮೀಸಲಿರಿಸುವ ಬಗ್ಗೆ ಸಚಿವರಿಗೆ ಮನವಿ ಮಾಡಲಾಯಿತು.

ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ್‌ ಕಲ್ಲೇರ್‌, ಕೂಳೂರು ಮೊಗವೀರ ಸಂಘದ ಅಧ್ಯಕ್ಷ ಭರತ್‌, ಮಲ್ಪೆ ಯಾಂತ್ರಿಕ ಟ್ರಾಲ್‌ ಬೋಟ್‌ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ರಾಮಚಂದ್ರ ಕುಂದರ್‌, ಪಸೀìನ್‌ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ ಸುವರ್ಣ, ಡೀಪ್‌ ಸೀ ಟ್ರಾಲ್‌ ಬೋಟ್‌ ಸಂಘದ ಅಧ್ಯಕ್ಷ ಸುಭಾಷ್‌ ಮೆಂಡನ್‌, ಮಹಿಳಾ ಮೀನುಗಾರರ ಸಂಘದ ಅಧ್ಯಕ್ಷೆ ಸುಮಿತ್ರಾ, ಮೀನುಗಾರರ ಸಂಘದ ಕಾರ್ಯದರ್ಶಿ ಜಗನ್ನಾಥ, ಮೀನುಗಾರ ಪ್ರಕೋಷ್ಠದ ಅಧ್ಯಕ್ಷ ಮಂಜುನಾಥ ಸಾಲ್ಯಾನ್‌, ಯಾಂತ್ರಿಕ ಟ್ರಾಲ್‌ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರಕಾಶ್‌ ಬಂಗೇರ ಹಾಗೂ ಮೀನುಗಾರ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next