Advertisement

ಯುಎಇ ಇಂಟರ್‌ನ್ಯಾಶನಲ್‌ ಕ್ರಿಕೆಟ್‌ ಲೀಗ್‌: ಮೈ ಎಮಿರೇಟ್ಸ್‌ ಟಿ 20 ತಂಡ ಘೋಷಣೆ

11:08 PM Aug 12, 2022 | Team Udayavani |

ಮುಂಬಯಿ: ಮುಂಬೈ ಇಂಡಿಯನ್ಸ್‌ ಒಡೆತನದ, ಯುಎಇ ಇಂಟರ್‌ನ್ಯಾಶನಲ್‌ ಕ್ರಿಕೆಟ್‌ ಲೀಗ್‌ನಲ್ಲಿ ಭಾಗವಹಿಸಲಿರುವ “ಮೈ ಎಮಿರೇಟ್ಸ್‌’ ತಂಡದ ಸದಸ್ಯರ ಹೆಸರು ಪ್ರಕಟಗೊಂಡಿದೆ.

Advertisement

ವೆಸ್ಟ್‌ ಇಂಡೀಸ್‌ನ ತಾರಾ ಆಟಗಾರರಾದ ಕೈರನ್‌ ಪೊಲಾರ್ಡ್‌, ಡ್ವೇನ್‌ ಬ್ರಾವೊ ನಿಕೋಲಸ್‌ ಪೂರಣ್‌; ನ್ಯೂಜಿಲ್ಯಾಂಡ್‌ ವೇಗಿ ಟ್ರೆಂಟ್‌ ಬೌಲ್ಟ್ ಈ ತಂಡದ ಪ್ರಮುಖರು.

“ಮೈ ಎಮಿರೇಟ್ಸ್‌ ಕುಟುಂಬದ 14 ಆಟಗಾರರಿಗೆ ಸ್ವಾಗತ. ಪ್ರಮುಖ ಆಧಾರಸ್ತಂಭಗಳಲ್ಲಿ ಒಬ್ಬರಾಗಿರುವ ಕೈರನ್‌ ಪೊಲಾರ್ಡ್‌ ಅವರನ್ನು ಹೊಂದಿರುವುದು ಖುಷಿಯ ಸಂಗತಿ.

ಬ್ರಾವೊ, ಬೌಲ್ಟ್, ಪೂರಣ್‌ ಕೂಡ ಇದ್ದಾರೆ. ಅನುಭವಿ ಹಾಗೂ ಯುವ ಆಟಗಾರರನ್ನು ಒಳಗೊಂಡ ಸಂತುಲಿತ ತಂಡ ಇದಾಗಿದೆ’ ಎಂಬುದಾಗಿ ರಿಲಯನ್ಸ್‌ ಜಿಯೋದ ಚೇರ್ಮನ್‌ ಆಕಾಶ್‌ ಎಂ. ಅಂಬಾನಿ ಹೇಳಿದರು.

ಮೈ ಎಮಿರೇಟ್ಸ್‌ ತಂಡ: ಕೈರನ್‌ ಪೊಲಾರ್ಡ್‌, ಡ್ವೇನ್‌ ಬ್ರಾವೊ, ನಿಕೋಲಸ್‌ ಪೂರಣ್‌, ಟ್ರೆಂಟ್‌ ಬೌಲ್ಟ್, ಆ್ಯಂಡ್ರೆ ಫ್ಲೆಚರ್‌, ಇಮ್ರಾನ್‌ ತಾಹಿರ್‌, ಸಮಿತ್‌ ಪಟೇಲ್‌, ವಿಲ್‌ ಸ್ಮಿಡ್‌, ಜೋರ್ಡನ್‌ ಥಾಮ್ಸನ್‌, ನಜೀಬುಲ್ಲ ಜದ್ರಾನ್‌, ಜಹೀರ್‌ ಖಾನ್‌, ಫ‌ಜಲ್‌ ಹಕ್‌ ಫಾರೂಖೀ, ಬ್ರಾಡ್ಲಿ ವೀಲ್‌, ಬಾಸ್‌ ಡೆ ಲೀಡ್‌.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next