Advertisement
ಬೆಳಗ್ಗೆ 10.00 ಗಂಟೆಗೆ ರಾಕ್ ಕರ್ನಾಟಕ ಸಂಘ ರಾಸ್ ಅಲ್ ಖೈಮಾ ದ ಅಧ್ಯಕ್ಷರಾದ ಸಂತೋಷ್ ಹೆಗ್ಡೆ, ಮುಖ್ಯ ಅತಿಥಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸಮ್ಮುಖದಲ್ಲಿ ಯುಎಇ ಮತ್ತು ಭಾರತ ರಾಷ್ಟ್ರ ಗೀತೆ ಹಾಗೂ ಕರ್ನಾಟಕ ನಾಡ ಗೀತೆಯೊಂದಿಗೆ ಜ್ಯೋತಿ ಬೆಳಗಿಸಿ ಉದ್ಘಾಟಿಸಲಾಯಿತು.
Related Articles
Advertisement
ಗಾಯನ ಸ್ಪರ್ಧೆಯಲ್ಲಿ ಹಲವು ಮಕ್ಕಳು ಭಾಗವಹಿಸಿದ್ದರು. ಸುಕನ್ಯಾ ಶರತ್ ಮತ್ತು ಡಾ| ರವಿ ಶಂಕರ್ ತಾಳಿತ್ತಾಯ ತೀರ್ಪುಗಾರರಗಿದ್ದರು. ನೃತ್ಯ ಸ್ಪರ್ಧೆಯಲ್ಲಿ ಸ್ಪರ್ಧಿಗಳು ತಮ್ಮ ತಮ್ಮ ಆಕರ್ಷಕ ನೃತ್ಯ ಪ್ರದರ್ಶನಗಳ ಮೂಲಕ ಪ್ರೇಕ್ಷಕರ ಮನ ಸೆಳೆದರು ತೀರ್ಪುಗಾರರಾಗಿ ಸೋನಿಯಾ ಲೋಬೊ ಮತ್ತು ಶ್ರೀಲತಾ ತೀರ್ಪು ನೀಡಿದರು.
ಸಮಾರೋಪ ಸಮಾರಂಭದಲ್ಲಿ ಸರ್ವೋತ್ತಮ ಶೆಟ್ಟಿಯವರು ರಾಕ್ ಕರ್ನಾಟಕ ಸಂಘದ ಕನ್ನಡ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದರು. ತೀರ್ಪುಗಾರರ ಪರವಾಗಿ ಬಿ. ಕೆ. ಗಣೇಶ್ ರೈಯವರು ಮಕ್ಕಳ ಪ್ರತಿಭೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ರಾಕ್ ಸಂಘಟನೆಯ ಕಾರ್ಯ ಯೋಜನೆಗಳನ್ನು ಶ್ಲಾಘಿಸಿದರು.
ಚಿತ್ರ ರಚನೆ ಮಾಡಿರುವ ಮಕ್ಕಳ ಚಿತ್ರಗಳ ಪ್ರದರ್ಶನ ಮಾಡಲಾಗಿತ್ತು. ವಿವಿಧ ವಿಭಾಗಳಲ್ಲಿ ಭಾಗವಹಿಸಿರುವ ಎಲ್ಲ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಎಲ್ಲ ಪ್ರಾಯೋಜಕರುಗಳನ್ನು ಹಾಗೂ ರಾಕ್ ಸಿರೆಮಿಕ್ಸ್ ಸಂಸ್ಥೆಯ ಎಲ್. ಎಸ್. ಪಾಟೀಲ್ ಮತ್ತು ಕನ್ನಡಿಗರ ತಂಡವನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ದಿನಪೂರ್ತಿ ನಡೆದ ವಿವಿಧ ಕಾರ್ಯಕ್ರಮಗಳ ನಿರೂಪಣೆಯನ್ನು ಡಾ| ಕವಿತಾ ರಾವ್, ಸಿ. ಹರ್ಷ ಬಸವರಾಜ್, ಸವಿತಾ ಪ್ರಕಾಶ್, ಅಕ್ಷತಾ ಕಿಶೋರ್, ಅನುಪಮ ಕಲುºರ್ಗಿ, ಇಂದು ಆನಂದ್ ಅವರು ನೆರವೇರಿಸಿಕೊಟ್ಟರು. ರಾಕ್ ಕರ್ನಾಟಕ ಸಂಘದ ಅಧ್ಯಕ್ಷರ ಜತೆಗೆ ಉಪಾಧ್ಯಕ್ಷರಾದ ರಮೇಶ್ ರಂಗಪ್ಪ, ಕಾರ್ಯದರ್ಶಿ ಆಶಾ ಹೇಮಾದ್ರಿ, ಗೃಹಪಾಠ ಅಧ್ಯಕ್ಷರು ಡಾ| ಲೇಕಾ, ಸಾಂಸ್ಕೃತಿಕ ಕಾರ್ಯದರ್ಶಿ ಜಾನ್ ಇಮ್ಯಾನುವಲ್ ಹಾಗೂ ದೀಪಾ ಮತ್ತು ಇಂದೂ ಅವರ ಹಲವು ದಿನಗಳ ಪೂರ್ವಭಾವಿ ತಯಾರಿಯೊಂದಿಗೆ ನಡೆದ ಪ್ರತಿಭಾನೆಷಣೆ ಸ್ಪರ್ಧೆ ಅತ್ಯಂತ ಯಶಸ್ವಿಯಾಯಿತು.
ವರದಿ: ಬಿ. ಕೆ. ಗಣೇಶ್ ರೈ, ದುಬೈ