Advertisement

ಅಬುಧಾಬಿಯಲ್ಲಿ ಇನ್ನು ನಿಮ್ಮ ಮುಖವೇ ಬೋರ್ಡಿಂಗ್‌ ಪಾಸ್‌!

11:10 PM Dec 20, 2022 | Team Udayavani |

ಅಬುಧಾಬಿ: ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನು ಮುಂದೆ ನೀವು ಪಾಸ್‌ಪೋರ್ಟ್‌ ಅಥವಾ ಟಿಕೆಟ್‌ ತೋರಿಸಬೇಕಾಗಿಲ್ಲ. ನಿಮ್ಮ ಮುಖವೇ ನಿಮ್ಮ ಬೋರ್ಡಿಂಗ್‌ ಪಾಸ್‌ ಆಗಿರಲಿದೆ!

Advertisement

ಏರ್‌ಪೋರ್ಟ್‌ನಲ್ಲಿ ಅತ್ಯಾಧುನಿಕ ಬಯೋಮೆಟ್ರಿಕ್‌ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಪ್ರಯಾಣಿಕರ ಮುಖವನ್ನು ಸ್ಕ್ಯಾನ್‌ ಮಾಡಿ, ಬೋರ್ಡಿಂಗ್‌ ಪಾಸ್‌ ನೀಡಲಾಗುತ್ತದೆ ಎಂದು ಖಲೀಜ್‌ ಟೈಮ್ಸ್‌ ವರದಿ ಮಾಡಿದೆ.

ಆಯ್ದ ಸ್ವಯಂಸೇವಾ ಬ್ಯಾಗೇಜ್‌ ಟಚ್‌ಪಾಯಿಂಟ್‌ಗಳು, ವಲಸೆ ಇ-ಗೇಟ್‌ಗಳು, ಬೋರ್ಡಿಂಗ್‌ ಗೇಟ್‌ಗಳು ಹಾಗೂ ಎಲ್ಲ ಪ್ರಯಾಣಿಕ ಟಚ್‌ಪಾಯಿಂಟ್‌ಗಳಲ್ಲಿ ಮುಖ ಗುರುತಿಸುವ ಸೇವೆಗಳನ್ನು ಆರಂಭಿಸಲಾಗಿದೆ. ಅಬುಧಾಬಿ ಮೂಲದ ಟೆಕ್‌ ಕಂಪನಿ ನೆಕ್ಸ್ಟ್50 ಈ ಸುಧಾರಿತ ಕೃತಕ ಬುದ್ಧಿಮತ್ತೆ ಆಧರಿಸಿದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

ಅದರಂತೆ, ಹೈಟೆಕ್‌ ಬಯೋಮೆಟ್ರಿಕ್‌ ಕ್ಯಾಮೆರಾ ಮೂಲಕ ಪ್ರಯಾಣಿಕರ ಎಲ್ಲ ವಿವರಗಳನ್ನೂ ಗ್ರಹಿಸಿಕೊಂಡು ಈ ಯಂತ್ರವು ಎಲ್ಲ ದಾಖಲೆಗಳನ್ನು ದೃಢೀಕರಿಸುತ್ತದೆ.

ಇದರಿಂದಾಗಿ ಪ್ರಯಾಣಿಕರಿಗೆ ಸರಳ, ಆರಾಮದಾಯಕ, ಸಂಪರ್ಕರಹಿತ ಸೇವೆ ಲಭ್ಯವಾಗಲಿದ್ದು, ಸರತಿಯಲ್ಲಿ ನಿಂತು ಕಾಯಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಗುವುದಿಲ್ಲ ಎಂದು ಅಬುಧಾಬಿ ಏರ್‌ಪೋರ್ಟ್‌ನ ಸಿಇಒ ಜಮಾಲ್‌ ಸಲೇಂ ಅಲ್‌ ಧಹೇರಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next