Advertisement
ವಿದೇಶಿ ಪ್ರಜೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಅವಿ ವಾಹಿತ ಜೋಡಿಗಳು ಯುಎಇ ನೆಲದಲ್ಲಿ ಸಹಜೀವನ ನಡೆಸಲು ಅನುಮತಿ ಕಲ್ಪಿಸಲಾಗಿದೆ. ಆಲ್ಕೋಹಾಲ್ ನಿರ್ಬಂಧ ಸಡಿಲಗೊಳಿಸಲಾಗಿದೆ. ಮರ್ಯಾದಾ ಹತ್ಯೆ ವಿಮುಕ್ತಿಗೆ ಕಾನೂನು ಜಾರಿಗೊಳಿಸಲಾಗಿದೆ. ಇತ್ತೀಚೆ ಗಷ್ಟೇ ಯುಎಇ ಸರಕಾರವು ಕಾರ್ಮಿಕ ಸ್ನೇಹಿ ಕಾನೂನು ಘೋಷಿಸುವ ಮೂಲಕ ಕಠಿಣ ನಿರ್ಬಂಧಗಳಿಂದ ವಲಸೆ ಕಾರ್ಮಿಕರನ್ನು ಮುಕ್ತಗೊಳಿಸುವ ನಿರ್ಧಾರ ಕೈಗೊಂಡಿತ್ತು. ಅದರ ಬೆನ್ನಲ್ಲೇ ಈಗ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಗೌರವ ನೀಡುವ ಮತ್ತಷ್ಟು ಕ್ರಮಗಳನ್ನು ಕೈಗೊಂಡಿದೆ.
ಇದುವರೆಗೆ ಯುಎಇಯಲ್ಲಿ ಅವಿವಾಹಿತ ಜೋಡಿಗಳು ಒಟ್ಟಿಗೆ ಜೀವನ ನಡೆಸಲು ನಿಷಿದ್ಧವಿತ್ತು. ಮದ್ಯ ಖರೀದಿ, ಮಾರಾಟ, ಮನೆಗಳಲ್ಲಿ ಮದ್ಯ ಬಳಸಲು ಲೈಸೆನ್ಸ್ ಹೊಂದಬೇಕಿತ್ತು. ಮದ್ಯಸೇವನೆಗೆ ಈಗ ಮುಕ್ತ ಸ್ವಾತಂತ್ರ್ಯ ಕಲ್ಪಿಸಲಾಗಿದೆ. ದೇಶದ ಗ್ರಹಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದ ಕಠಿಣ ಕಾನೂನುಗಳನ್ನು ಯುಎಇ ಸರಕಾರ ಹಂತಹಂತವಾಗಿ ಕೈಬಿಡುತ್ತಿದೆ. ವಿಶೇಷವಾಗಿ ವಿದೇಶಿ ಹೂಡಿಕೆದಾರರು, ಉದ್ಯಮಿಗಳು ಮತ್ತು ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೊಸ ಕಾನೂನುಗಳನ್ನು ಅಳವಡಿಸಿಕೊಳ್ಳುತ್ತಿದೆ. ಅಲ್ಲದೆ, ಸದ್ಯದಲ್ಲೇ ಯುಎಇಯಲ್ಲಿ ವರ್ಲ್ಡ್ ಎಕ್ಸ್‌ಪೋ ನಡೆಯಲಿದ್ದು, 2.5 ಕೋಟಿ ಮಂದಿ ಭೇಟಿ ನೀಡಲಿದ್ದಾರೆ. ಈ ಕಾರ್ಯಕ್ರಮವು ಭಾರೀ ಪ್ರಮಾಣದ ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡಲಿರುವ ಹಿನ್ನೆಲೆಯಲ್ಲಿ ಸರಕಾರವು ಕಠಿಣ ನಿರ್ಬಂಧಗಳನ್ನು ಸಡಿಲಿಸುತ್ತಿರುವುದು
ಮಹತ್ವ ಪಡೆದಿದೆ.