Advertisement

Thalassery: ಸಿಪಿಎಂ ನಾಯಕನ ಹತ್ಯೆ ಪ್ರಕರಣ: ಆರೆಸ್ಸೆಸ್‌ನ 9 ಸದಸ್ಯರಿಗೆ ಜೀವಾವಧಿ ಶಿಕ್ಷೆ

08:56 PM Jan 07, 2025 | Team Udayavani |

ತಿರುವನಂತಪುರ: 19 ವರ್ಷಗಳ ಹಿಂದೆ ನಡೆದ ಸಿಪಿಎಂ ನಾಯಕರೊಬ್ಬರ ಹತ್ಯೆ ಪ್ರಕರಣದಲ್ಲಿ 9 ಮಂದಿ ಆರ್‌ಎಸ್‌ಎಸ್‌ ಕಾರ್ಯಕರ್ತರಿಗೆ ತಲಶೇರಿಯ ಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿದೆ.

Advertisement

ರಾಜಕೀಯ ವೈಷಮ್ಯದ ಕಾರಣಕ್ಕಾಗಿ ಆರೆಸ್ಸೆಸ್‌ ಕಾರ್ಯಕರ್ತರು 2005ರ ಅ.3ರಂದು ಸಿಪಿಎಂ ಮುಖಂಡ ರಿಜಿತ್‌ ಶಂಕರನ್‌ (25) ಮೇಲೆ ದಾಳಿ ನಡೆಸಿ ಹತ್ಯೆಗೈದಿದ್ದರು. ರಿಜಿತ್‌ ಹಾಗೂ ಅವರ ಸ್ನೇಹಿತರು ಮನೆಗೆ ತೆರಳುತ್ತಿದ್ದ ವೇಳೆ ದೇವಸ್ಥಾನವೊಂದರ ಬಳಿ ಮಾರಕಾಸ್ತ್ರಗಳೊಂದಿಗೆ ದಾಳಿ ನಡೆಸಲಾಗಿತ್ತು. ಈ ವೇಳೆ ರಿಜಿತ್‌ ಮೃತಪಟ್ಟರೆ, ಅವರ 3 ಸ್ನೇಹಿತರು ಗಾಯಗೊಂಡಿದ್ದರು.

ಜ.4ರಂದು ತಲಶೇರಿಯ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ಕೋರ್ಟ್‌ ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ಪ್ರಕರಣದಲ್ಲಿ 10 ಮಂದಿಯನ್ನು ಆರೋಪಿಗಳೆಂದು ಪಟ್ಟಿ ಮಾಡಲಾಗಿದ್ದು, ಒಬ್ಬ ಆರೋಪಿ ರಸ್ತೆ ಅಪಘಾತದಲ್ಲಿ ಈ ಹಿಂದೆಯೇ ಮೃತಪಟ್ಟಿದ್ದ.

Advertisement

Udayavani is now on Telegram. Click here to join our channel and stay updated with the latest news.

Next