Advertisement

ಕನ್ನಡಿಗಾಸ್ ಹೆಲ್ಪ್ ಲೈನ್ ಪ್ರಯತ್ನದ ಫಲ: ಕರ್ನಾಟಕಕ್ಕೂ ಬರಲಿದೆ ಯುಎಈ ವಿಮಾನ

08:12 AM May 07, 2020 | keerthan |

ಬೆಂಗಳೂರು: ಕೋವಿಡ್-19 ಸಂಕಷ್ಟದ ಕಾರಣ ವಿದೇಶದಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಸರಕಾರ ಮುಂದಾಗಿದ್ದು, ವಿಮಾನಗಳ ಪಟ್ಟಿ ಮಾಡಿದೆ. ನಾಳೆಯಿಂದ ಒಂದು ವಾರಗಳ ಕಾಲ ಈ ಏರ್ ಲಿಫ್ಟ್ ನಡೆಯಲಿದೆ.

Advertisement

ಆದರೆ ಈ ಪಟ್ಟಿಯಲ್ಲಿ ಕರ್ನಾಟಕಕ್ಕೆ ಕೇವಲ ಮೂರು ವಿಮಾನ ಸೌಕರ್ಯ ನೀಡಲಾಗಿತ್ತು. ಕರ್ನಾಟಕದ ಮೂಲದವರು ಹೆಚ್ಚಾಗಿರುವ ಗಲ್ಫ್ ದೇಶದಿಂದ ಬರುವ ಯಾವ ವಿಮಾನವೂ ಕರ್ನಾಟಕದಲ್ಲಿ ಇಳಿಯುವ ಅವಕಾಶ ನೀಡಿರಲಿಲ್ಲ. ಬಹುತೇಕ ವಿಮಾನಗಳು ಕೇರಳದಲ್ಲಿ ಇಳಿಯುವಂತೆ ಯೋಜನೆ ರೂಪಿತವಾಗಿತ್ತು.

ಇದರಿಂದ ಅಸಮಾಧಾನಗೊಂಡಿದ್ದ ದುಬೈ ಅನಿವಾಸಿ ಕನ್ನಡಿಗರ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡವು ಕರ್ನಾಟಕ ಎನ್ಆರೈ ಫೋರಂ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರ ನೇತೃತ್ವದಲ್ಲಿ ಸತತವಾಗಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ದುಬೈ ಕಾನ್ಸುಲೇಟ್ ಜನರಲ್ ರನ್ನು ಸಂಪರ್ಕಿಸಿ ಪರಿಸ್ಥಿತಿಯ ತೀವ್ರತೆಯನ್ನು ಅರ್ಥಮಾಡಿಸಿತ್ತು.

ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಮತ್ತು ಕನ್ನಡಿಗಾಸ್ ಹೆಲ್ಪ್ ಲೈನ್ ತಂಡದ ನಡುವೆ ನಡೆದ ಸತತ ಮಾತುಕತೆ ಫಲಶ್ರುತಿ ಯುಎಈಯಿಂದ ಹೊರಡಲಿರುವ ವಿಮಾನದ ಪಟ್ಟಿಯಲ್ಲಿ ಕರ್ನಾಟಕಕ್ಕೂ ಒಂದು ವಿಮಾನ ಸೇರ್ಪಡೆಯಾಗಿದ್ದು, ದುಬೈನಿಂದ ಮಂಗಳೂರಿಗೆ ಅಥವಾ ಬೆಂಗಳೂರಿಗೆ ಅನಿವಾಸಿ ಕನ್ನಡಿಗರೊಂದಿಗೆ ಏರ್ ಇಂಡಿಯಾ ಹಾರಲಿದೆ ಎಂದು ಅಧಿಕೃತ ಮಾಹಿತಿ ಹೊರಬಂದಿದೆ.

ಉಪಮುಖ್ಯಮಂತ್ರಿ ಡಾ| ಅಶ್ವಥನಾರಾಯಣ, ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿಯವರೊಂದಿಗೂ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿ ಕೇಂದ್ರ ವಿದೇಶಾಂಗ ಇಲಾಖೆಗೆ ಒತ್ತಡ ಹೇರಲು ಬೇಡಿಕೆ ಇಡಲಾಯಿತು. ಆದರೆ ಇದೇ ಸಂದರ್ಭದಲ್ಲಿ ಅನಿವಾಸಿ ಕನ್ನಡಿಗರ ಸಹಾಯಕ್ಕೆ ಬಂದಂತಹ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ತಕ್ಷಣವೇ ಸ್ಪಂದಿಸಿ ವಿದೇಶಾಂಗ ಇಲಾಖೆಯ ಸೆಕ್ರೆಟರಿ ಜೊತೆ ಮಾತನಾಡಿ ಯುಎಈಯಿಂದ ಹಾರಲಿರುವ ವಿಮಾನಗಳ ಮೊದಲ ಪಟ್ಟಿಯಲ್ಲಿ ಕರ್ನಾಟಕವನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next