Advertisement
ಜಿಲ್ಲಾಧಿಕಾರಿಗಳು ಮತ್ತು ವಿವಿಧ ಇಲಾಖೆ ಗಳ ಅಧಿಕಾರಿಗಳು, ಜನ ಪ್ರತಿನಿಧಿಗಳು ಭಾಗ ವಹಿಸುವರು. ನೀರಿನ ಸಮಸ್ಯೆಯ ಜತೆಗೆ ಸಂಭಾವ್ಯ ಅತಿವೃಷ್ಟಿ, ಅನಾವೃಷ್ಟಿ, ಕಡಲು ಕೊರೆತ ಸಮಸ್ಯೆ ಕುರಿತಾಗಿಯೂ ಚರ್ಚೆ ನಡೆಯಲಿದೆ ಎಂದವರು ರವಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತುಂಬೆ ವೆಂಟೆಡ್ ಡ್ಯಾಮ್‌ನಿಂದ ಹೂಳೆತ್ತುವ ಕಾಮಗಾರಿಗೆ 3 ಕೋಟಿ ರೂ. ಮೊತ್ತಕ್ಕೆ ಟೆಂಡರ್ ವಹಿಸ ಲಾಗಿದ್ದು, ನಾಲ್ಕು ದಿನಗಳಲ್ಲಿ ಕೆಲಸ ಆರಂಭವಾಗಲಿದೆ ಎಂದು ಖಾದರ್ ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಹೆಗ್ಗಡೆ ದೂರದೃಷ್ಟಿ ಇರಿಸಿಕೊಂಡು ಕ್ಷೇತ್ರ ಸಂದರ್ಶನವನ್ನು ಮುಂದೂಡುವ ಬಗ್ಗೆ ಭಕ್ತರಿಗೆ ಮನವಿ ಮಾಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಖಾದರ್ ಉತ್ತರಿಸಿದರು.
Related Articles
ಈ ವರ್ಷ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಬೇಸಗೆ ಮಳೆ ಬಾರದಿರುವುದು ನೇತ್ರಾವತಿಯಲ್ಲಿ ನೀರು ಬತ್ತಲು ಕಾರಣ ಎಂದು ಸಚಿವರು ಅಭಿಪ್ರಾಯ ಪಟ್ಟರು. ಮಳೆ ಬಾರದಿರಲು ಮತ್ತು ನೀರಿನ ಸಮಸ್ಯೆಗೆ ಎತ್ತಿನಹೊಳೆ ಯೋಜನೆ ಕಾರಣ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಜಲ ತಜ್ಞರು ಮತ್ತು ಅಧಿಕಾರಿಗಳು ಚರ್ಚೆ ನಡೆಸಬೇಕಾಗುತ್ತದೆ. ಪಶ್ಚಿಮ ವಾಹಿನಿ ಮತ್ತು ಚೆಕ್ ಡ್ಯಾಂ ನಿರ್ಮಾಣ ಕಾಮ ಗಾರಿಗಳು ಟೆಂಡರ್ ಹಂತದಲ್ಲಿವೆ. ಉಪ್ಪು ನೀರು ಶುದ್ಧೀಕರಿಸುವ ಯೋಜನೆ ದುಬಾರಿ ಆಗಿರುವುದರಿಂದ ಸದ್ಯಕ್ಕೆ ಬಾಕಿ ಇರಿಸಲಾಗಿದೆ. ಬರ ಪೀಡಿತ ತಾಲೂಕುಗಳ ಘೋಷಣೆಯಂತೆ ಈಗಾಗಲೇ 5 ಕೋಟಿ ರೂ. ಒದಗಿಸಲಾಗಿದ್ದು, ಹೆಚ್ಚುವರಿ ಅನುದಾನದ ಬಗ್ಗೆ ಚರ್ಚಿಸಿ ವರದಿ ಸಲ್ಲಿಸಲಾಗುವುದು ಎಂದರು.
ತುಂಬೆ ಡ್ಯಾಂನಲ್ಲಿ 7 ಮೀ. ನೀರು ನಿಲ್ಲಿಸಿದರೆ ಮುಳುಗ ಬಹುದಾದ ಪ್ರದೇಶಗಳ ಬಗ್ಗೆ ಚರ್ಚೆ ಆಗಬೇಕಾಗಿದೆ. ಮುಳುಗಡೆ ಪ್ರದೇಶಗಳ ಜನರಿಗೆ ಪರಿಹಾರ ವಿತರಿಸಲು15 ಕೋಟಿ ರೂ. ಬಿಡುಗಡೆ ಆಗಿದೆ ಎಂದು ವಿವರಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮತ್ತು ಇತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
Advertisement