Advertisement

ಭಾರತಕ್ಕೆ ಅಮೆರಿಕ 15 ಲಕ್ಷ ಕೋಟಿ ರೂ. ಸಾಲ ಬಾಕಿ

11:44 PM Feb 27, 2021 | Team Udayavani |

ವಾಷಿಂಗ್ಟನ್‌: ಜಗತ್ತಿನ ಅತೀ ದೊಡ್ಡ ಆರ್ಥಿಕತೆಯಾದ ಅಮೆರಿಕವು ಭಾರತಕ್ಕೆ ನೀಡಲು ಬಾಕಿಯಿರುವ ಸಾಲದ ಮೊತ್ತವೆಷ್ಟು ಗೊತ್ತಾ? ಬರೋಬ್ಬರಿ 15.89 ಲಕ್ಷ ಕೋಟಿ ರೂಪಾಯಿ! ಈ ವಿಚಾರವನ್ನು ಸ್ವತಃ ಅಮೆರಿಕದ ಸಂಸದ ಅಲೆಕ್ಸ್‌ ಮೂನಿ ಬಹಿರಂಗ ಪಡಿಸಿದ್ದಾರೆ.

Advertisement

ಅಮೆರಿಕದ ಒಟ್ಟಾರೆ ಸಾಲದ ಮೊತ್ತವು 29 ಲಕ್ಷ ಕೋಟಿ ಡಾಲರ್‌(2,134 ಲಕ್ಷ ಕೋಟಿ ರೂ.)ಗೆ ತಲುಪಿದ್ದು, ವಿದೇಶಿ ಸಾಲದ ಮೊತ್ತವು ಗಣನೀಯವಾಗಿ ಏರಿಕೆಯಾಗಿದೆ. ಈ ಪೈಕಿ ಅತೀ ಹೆಚ್ಚು ಸಾಲ ಬಾಕಿಯಿರುವುದು ಚೀನ ಮತ್ತು ಜಪಾನ್‌ಗೆ ಎಂದೂ ಅವರು ತಿಳಿಸಿದ್ದಾರೆ.

2020ರಲ್ಲಿ ಅಮೆರಿಕದ ರಾಷ್ಟ್ರೀಯ ಸಾಲದ ಮೊತ್ತವು 23.4 ಲಕ್ಷ ಕೋಟಿ ಡಾಲರ್‌(1714 ಲಕ್ಷ ಕೋಟಿ ರೂ.) ಆಗಿತ್ತು. ಅಂದರೆ ಅಲ್ಲಿನ ಪ್ರತೀ ನಾಗರಿಕನ ಮೇಲೆ 53.21 ಲಕ್ಷ ರೂ.ಗಳಷ್ಟು ಸಾಲದ ಬಾಧ್ಯತೆಯಿದೆ. ಈಗ ದೇಶದ ಒಟ್ಟಾರೆ ಸಾಲದ ಹೊರೆಯು  2,134 ಲಕ್ಷ ಕೋಟಿ ರೂ.ಗೆ ತಲುಪಿದ್ದು, ಪ್ರತೀ ನಾಗರಿಕನ ಮೇಲಿನ ಹೊರೆಯೂ ಹೆಚ್ಚಳವಾಗಿದೆ. ನಾವು ಚೀನದೊಂದಿಗೆ ಸ್ಪರ್ಧೆಗಿಳಿದಿದ್ದೇವೆ. ಆದರೂ ಅದೇ ದೇಶಕ್ಕೆ 73 ಲಕ್ಷ ಕೋಟಿ ರೂ. ನೀಡಲು ಬಾಕಿಯಿದೆ ಎಂದೂ ಅಲೆಕ್ಸ್‌ ಹೇಳಿದ್ದಾರೆ.

ಇದನ್ನೂ ಓದಿ:ಭಾರತದಲ್ಲಿ ಉದ್ಯೋಗಿಗಳಿಗೆ ಗರಿಷ್ಠ ದುಡಿಮೆ,ಕನಿಷ್ಠ ವೇತನ! 2020-21ರ ILO ವರದಿಯಲ್ಲಿ ಮಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next