Advertisement

ಮಲ್ಪೆ: ಸಮುದ್ರದಲ್ಲಿ ಮುಳುಗುತ್ತಿದ್ದ ಯುವತಿಯ ರಕ್ಷಿಸಲು ಹೋದ ಯುವಕನೂ ನೀರುಪಾಲು; ರಕ್ಷಣೆ

05:13 PM Nov 09, 2020 | keerthan |

ಮಲ್ಪೆ: ಇಲ್ಲಿನ ಸಮುದ್ರ ತೀರದಲ್ಲಿ ಆಟವಾಡುತ್ತಿದ್ದ ವೇಳೆ ಇಬ್ಬರು ಅಲೆಗಳ ಅಬ್ಬರಕ್ಕೆ ಕೊಚ್ಚಿಹೋಗಿದ್ದು, ತ್ವರಿತ ಕಾರ್ಯಾಚರಣೆಯ ಮೂಲಕ ಇಬ್ಬರನ್ನೂ ರಕ್ಷಿಸಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

Advertisement

ಮಂಡ್ಯ ಮೂಲದ ರಮ್ಯ ಮುರುಳೀಧರ್ (28 ವ) ಮತ್ತು ದೊಡ್ಡಬಳ್ಳಾಪುರದ ಮಾರುತಿ ಸುಹಾಸ್ (20 ವ) ನೀರಿನಲ್ಲಿ ಕೊಚ್ಚಿಹೋದವರು. ಆದರೆ ಲೈಫ್ ಗಾರ್ಡ್ ಮತ್ತು ಜೆಸ್ಕಿ ಬೋಟ್ ಸಿಬ್ಬಂದಿಯ ತಕ್ಷಣದ ಕಾರ್ಯಾಚರಣೆಯಿಂದ ಇಬ್ಬರನ್ನೂ ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಯಿತು.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ರಮ್ಯ ಮುರುಳೀಧರ್ ಅವರು ಕುಟುಂಬ ಸದಸ್ಯರೊಂದಿಗೆ ಮಲ್ಪೆ ಸಮುದ್ರ ತೀರಕ್ಕೆ ಬಂದಿದ್ದರು. ನೀರಿನಲ್ಲಿ ಆಟವಾಡುವ ವೇಳೆ ರಮ್ಯಾ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ್ದನ್ನು ಕಂಡು ಮತ್ತೊಂದು ಗುಂಪಿನಲ್ಲಿದ್ದ ಮಾರುತಿ ಸುಹಾಸ್ ಆಕೆಯನ್ನು ರಕ್ಷಿಸಲು ಧಾವಿಸಿದ್ದಾನೆ. ಆದರೆ ಆತನೂ ನೀರಿನ ಹೊಡೆತಕ್ಕೆ ಸಿಲುಕಿದ್ದ.

ಇದನ್ನು ಕಂಡ ಲೈಫ್ ಗಾರ್ಡ್ ಮಧುಕರ್ ಸಾಲ್ಯಾನ್ ಮತ್ತು ಜೆಸ್ಕಿ ಬೋಟ್ ಡ್ರೈವರ್ ರವಿ ಅವರು ತಕ್ಷಣ ಧಾವಿಸಿ ಇಬ್ಬರನ್ನೂ ರಕ್ಷಿಸುವಲ್ಲಿ ಸಪಲರಾಗಿದ್ದಾರೆ. ಕೂಡಲೇ ಇಬ್ಬರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next