Advertisement

Theft: ದ್ವಿಚಕ್ರ ವಾಹನ ಕಳ್ಳತನ ಆರೋಪಿ ಬಂಧನ

11:23 AM May 29, 2024 | Team Udayavani |

ಬೆಂಗಳೂರು: ರಾತ್ರಿ ಕನ್ನ ಕಳವು ಹಾಗೂ ದ್ವಿಚಕ್ರ ವಾಹನಗಳ ಕಳವು ಮಾಡುತ್ತಿದ್ದ ಆರೋಪಿಯನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ತ್ಯಾಗರಾಜನಗರ ನಿವಾಸಿ ಮಿಥುನ್‌ ಅಲಿಯಾಸ್‌ ಮಿಲ್ಕಿ (22) ಬಂಧಿತ. ಆರೋಪಿಯಿಂದ 8.70 ಲಕ್ಷ ರೂ. ಮೌಲ್ಯದ 75 ಗ್ರಾಂ ತೂಕದ ಚಿನ್ನಾಭರಣ, 4.9 ಕೆ.ಜಿ. ಬೆಳ್ಳಿ ವಸ್ತುಗಳು, 1 ಡಿಜಿಟಲ್‌ ಲಾಕರ್‌ ಹಾಗೂ 3 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಇತ್ತೀಚೆಗೆ ಠಾಣೆ ವ್ಯಾಪ್ತಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ವೊಂದನ್ನು ಕಳವು ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರೋಪಿಯನ್ನು ಬಂಧಿಸಲಾಗಿದೆ.

ಈತನ ವಿಚಾರಣೆಯಲ್ಲಿ ಬೈಕ್‌ ಕಳವು ಮಾತ್ರವಲ್ಲದೆ, ಮನೆ ಕಳ್ಳತನ ಮಾಡುತ್ತಿದ್ದಾಗಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಲ್ಲದೆ, ಬಸವನಗುಡಿ, ಹಲಸೂರು, ಮೈಸೂರು, ಅಲನಹಳ್ಳಿ, ಹಾಸನ ಜಿಲ್ಲೆಯ ಪೆನÒನ್‌ ಮೋಹಲ್ಲ ಹಾಗೂ ಆಂಧ್ರಪ್ರದೇಶದ ಅಲಿಪಿರಿ ಸೇರಿ ರಾಜ್ಯ ಮತ್ತು ನೆರೆ ರಾಜ್ಯಗಳ 11 ಠಾಣೆಗಳಲ್ಲಿ ದಾಖಲಾಗಿದ್ದ 17 ಕಳವು, ಡಕಾಯಿತಿ, ಸರಕಳವು ಸೇರಿದಂತೆ ಮತ್ತಿತರ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next