Advertisement

Panambur ಫಿನಾಯಿಲ್‌ ಸೇವಿಸಿ ಇಬ್ಬರು ಕಾರ್ಮಿಕರ ಆತ್ಮಹತ್ಯೆ ಯತ್ನ

12:42 AM May 23, 2024 | Team Udayavani |

ಪಣಂಬೂರು: ನವಮಂಗಳೂರು ಬಂದರಿನ ಒಳಗೆ ಖಾಸಗಿ ಕಂಪೆನಿಯಲ್ಲಿ 6 ವರ್ಷಗಳಿಂದ ಲಾರಿಗಳಿಗೆ ಟರ್ಪಾಲ್‌ ಅಳವಡಿಸುವ ಕೆಲಸ ಮಾಡುತ್ತಿದ್ದ 42 ಕಾರ್ಮಿಕರನ್ನು ದಿಢೀರ್‌ ಕೆಲಸದಿಂದ ತೆಗೆದು ಹಾಕಿದ್ದು, ಹತಾಶೆಗೊಂಡ ಇಬ್ಬರು ಫಿನಾಯಿಲ್‌ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಂಭವಿಸಿದೆ.

Advertisement

ಬುಧವಾರ ಬೆಳಗ್ಗೆ ಕಾರ್ಮಿಕರು ಹಾಗೂ ಅವರ ಕುಟುಂಬ ಹಾಗೂ ಮಕ್ಕಳು ಬಂದರಿನ ಕೆ.ಕೆ. ಗೇಟ್‌ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದರು. ಮೂರ್‍ನಾಲ್ಕು ತಾಸಾದರೂ ಸಂಬಂಧಿತ ಕಂಪೆನಿಯ ಅಧಿಕಾರಿಗಳು ಬಾರದೇ ಇದ್ದಾಗ ಹತಾಶೆಗೊಂಡ ಇಬ್ಬರು ಫಿನಾಯಿಲ್‌ ಸೇವಿಸಿದರು. ತತ್‌ಕ್ಷಣ ಮಾಜಿ ಮನಪಾ ಸದಸ್ಯ ರಘುವೀರ್‌ ಪಣಂಬೂರು, ಬಿಜೆಪಿ ಮುಖಂಡ ರಣ್‌ದೀಪ್‌ ಕಾಂಚನ್‌ ಮತ್ತಿತರರು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಸಹಕರಿಸಿದರು.

ಕನ್ನಡಿಗರಿಗೆ ಅನ್ಯಾಯ: ಈ ಸಂದರ್ಭ ರಣ್‌ದೀಪ್‌ ಕಾಂಚನ್‌ ಮಾತನಾಡಿ, ದಿನಕ್ಕೆ 500-600 ರೂ. ದುಡಿಯುವ ಕಾರ್ಮಿಕರನ್ನು ಏಕಾಏಕಿ ಕೆಲಸಕ್ಕೆ ಬೇಕಾದ ಪಾಸ್‌ ನೀಡದೆ ಬಂದರು ಒಳಗೆ ಹೋಗಲು ಬಿಡಲಿಲ್ಲ. ಅವರೆಲ್ಲ ಕನ್ನಡಿಗರಾಗಿದ್ದು ಇವರ ಬದಲಿಗೆ ಹಿಂದಿ ಭಾಷಿಕರನ್ನು ನಿಯೋಜಿಸಿದ್ದಾರೆ. ಇದು ರಾಜ್ಯದ ಮಂದಿಗೆ ಮಾಡಿರುವ ಅನ್ಯಾಯವಾಗಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next