Advertisement

ಟವರ್‌ ನಿರ್ಮಾಣ ಸ್ಥಗಿತಕ್ಕೆ ಉಸ್ತುವಾರಿ ಸಚಿವೆ ಆದೇಶ

12:48 AM Jun 13, 2024 | Team Udayavani |

ಬೆಳ್ಮಣ್‌: ನಂದಿಕೂರಿನಿಂದ ಇನ್ನಾ ಮೂಲಕ ಕೇರಳಕ್ಕೆ ಹಾದು ಹೋಗುವ 400 ಕೆ.ವಿ. ಸಾಮರ್ಥ್ಯದ ವಿದ್ಯುತ್‌ ಲೈನ್‌ ಆಳವಡಿಕೆಯಿಂದ ಕೃಷಿ ಭೂಮಿ ನಾಶವಾಗುತ್ತದೆ ಎಂದು ಆರೋಪಿಸಿ ಬೃಹತ್‌ ಪ್ರತಿಭಟನೆ ಬುಧವಾರ ಇನ್ನಾ ಗ್ರಾಮ ಪಂಚಾಯತ್‌ ವಠಾರದಲ್ಲಿ ನಡೆಯಿತು.

Advertisement

ಸಂಜೆ ಸ್ಥಳಕ್ಕಾಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪ್ರತಿಭಟನಕಾರರ ಮನವಿ ಸ್ವೀಕರಿಸಿ ಮುಂದಿನ ಆದೇಶದವರೆಗೆ ಕಾಮಗಾರಿ ಸ್ಥಗಿತಕ್ಕೆ ಜಿಲ್ಲಾಧಿಕಾರಿ ಹಾಗೂ ಕಾರ್ಕಳ ತಹಶೀಲ್ದಾರರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ವಿದ್ಯಾಕುಮಾರಿ, ತಹಶೀಲ್ದಾರ್‌ ನರಸಪ್ಪ ಅವರಿಗೂ ಮನವಿ ನೀಡಲಾಯಿತು. ಸಾವಿರಕ್ಕೂ ಮಿಕ್ಕಿ ಪ್ರತಿಭಟನಕಾರರು ಇದ್ದ ಸಭೆಯಲ್ಲಿ ದ.ಕ., ಉಡುಪಿ ಜಿಲ್ಲೆಗಳ ಭಾರತೀಯ ಕಿಸಾನ್‌ ಸಂಘದ ನಾಯಕರು, ಹಸುರು ಸೇನೆಯ ನಾಯಕರು, ಶಾಸಕ, ಸಂಸದ ರಾದಿಯಾಗಿ ಮಾಜಿ ಸಚಿವರು, ವಿವಿಧ ಜನಪ್ರತಿನಿಧಿಗಳು, ವಿವಿಧ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು.

ಶಾಸಕ ವಿ. ಸುನಿಲ್‌ ಕುಮಾರ್‌ ಮಾತನಾಡಿ, ಜನರ ಪರವಾಗಿರುವೆ ಎಂದರು. ಮಾಜಿ ಸಚಿವ ವಿನಯ ಕುಮಾರ ಸೊರಕೆ ಮಾತನಾಡಿ, ಜನವಿ ರೋಧಿ ಯೋಜನೆಗಳಿಗೆ ಬೆಂಬಲವಿಲ್ಲ; ಕೃಷಿಕರ ಪರ ಇರುವೆ ಎಂದರು.

ನಂದಳಿಕೆ ಟೋಲ್‌ಗೇಟ್‌ ಹೋರಾಟ ಸಮಿತಿಯ ಆಧ್ಯಕ್ಷ ಸುಹಾಸ್‌ ಹೆಗ್ಡೆ ಮಾತನಾಡಿ, ರಾಜಕೀಯ ಹೊರತಾಗಿ ಒಗ್ಗಟ್ಟಿ ನಿಂದ ಈ ಪ್ರತಿಭಟನೆ ನಡೆಯಲಿ ಎಂದರು.

Advertisement

ದ.ಕ. ಜಿಲ್ಲೆಯ ವಿಟ್ಲ ಮತ್ತಿತರ ಕಡೆಗಳಿಂದ ರೈತ ಸಂಘಗಳ ಪ್ರಮುಖರು, ಪ್ರತಿಭಟನಕಾರರನ್ನು ಬೆಂಬಲಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಕಿಸಾನ್‌ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ, ಮನೋಹರ್‌ ಶೆಟ್ಟಿ, ರಾಜು ಗೌಡ ಮಾತನಾಡಿದರು.

ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಎಸಿ ರಶ್ಮಿ, ಇನ್ನಾ ಗ್ರಾ.ಪಂ. ಅಧ್ಯಕ್ಷೆ ಸರಿತಾ ಶೆಟ್ಟಿ, ರೇಷ್ಮಾ ಶೆಟ್ಟಿ, ಹೋರಾಟ ಸಮಿತಿಯ ಅಧ್ಯಕ್ಷ ಅಮರನಾಥ ಶೆಟ್ಟಿ ಮತ್ತಿತರರಿದ್ದರು. ಚಂದ್ರಹಾಸ ಶೆಟ್ಟಿ ಪ್ರಸ್ತಾವನೆಗೈದರು.

ಬಿಗು ಬಂದೋಬಸ್ತು: ಅಹಿತಕರ ಘಟನೆ ನಡೆಯದಂತೆ ಪೊಲೀಸರ ದಂಡು ಇನ್ನಾವನ್ನು ಸುತ್ತುವ ರಿದಿತ್ತು. ಉಡುಪಿ ಎಸ್‌ಪಿ ಅರುಣ್‌, ಡಿವೈಎಸ್‌ಪಿ ಆರವಿಂದ ಕುಲಗಚ್ಚಿ, ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಪಡುಬಿದ್ರಿ ಎಸ್‌ಐ ಪ್ರಸನ್ನ ಸಹಿತ ನೂರಾರು ಪೊಲೀಸರಿದ್ದರು.

ಮೇ 22ರಂದು ಟವರ್‌ ನಿರ್ಮಾಣಕ್ಕೆ ಬಂದಿದ್ದ ಕಂಪೆನಿಯವರನ್ನು ನೋಟಿಸ್‌ ನೀಡಿಲ್ಲ ಎಂಬ ಕಾರಣಕ್ಕೆ ಗ್ರಾಮಸ್ಥರು ಹಿಂದೆ ಕಳುಹಿಸಿದ್ದು 29ರಂದು ನೊಟೀಸ್‌ ನೀಡಿ ಪೊಲೀಸ್‌ ಬಂದೋಬಸ್ತ್ನಲ್ಲಿ ತಹಶೀಲ್ದಾರರ ನೇತೃತ್ವದಲ್ಲಿ ಕಾಮಗಾರಿ ಪ್ರಾರಂಭಿಸಲಾಗಿತ್ತು. ಗ್ರಾಮಸ್ಥರು ಕಾರ್ಕಳ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದಿದ್ದರು.

ಕೃಷಿಕರ ಜತೆ ಚೆಲ್ಲಾಟ ಬೇಡ
ಈ ದೇಶದ ಜನರು ರೈತರನ್ನು ನಂಬಿ ಬದುಕುವವರು. ಹೀಗಾಗಿ ಅವರನ್ನು ಬದುಕಲು ಬಿಡಿ, ಜನ ವಿರೋಧಿ ಯೋಜನೆಗಳಿಗೆ ಯಾವತ್ತೂ ಬೆಂಬಲ ಇಲ್ಲ ಎಂದ ಸಚಿವರು, ಶೀಘ್ರ ರಾಜ್ಯದ ಇಂಧನ ಸಚಿವ ಕೆ.ಜೆ. ಜಾರ್ಜ್‌ ಜತೆ ಮಾತುಕತೆ ನಡೆಸಿ ಪರಿಸ್ಥಿತಿ ಪರಿಶೀಲಿಸಿ ಕೃಷಿಕರಿಗೆ ತೊಂದರೆಯಾಗುವುದಿದ್ದರೆ ಖಂಡಿತಾ ಕೃಷಿಕರ ಪರವಾಗಿ ನಿಲ್ಲುವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next