Advertisement

ಕೇರಳಕ್ಕೆ ವಿದ್ಯುತ್‌ ಸಾಗಾಟಕ್ಕೆ ಟವರ್‌ ನಿರ್ಮಾಣ; ಇನ್ನಾದಲ್ಲಿ ಭಾರೀ ಪ್ರತಿಭಟನೆ

11:55 PM May 28, 2024 | Team Udayavani |

ಬೆಳ್ಮಣ್‌: ನಂದಿಕೂರಿನಿಂದ ಕೇರಳದ ಕಾಸರಗೋಡಿಗೆ ವಿದ್ಯುತ್‌ ಪೂರೈಕೆಗೆ ಟವರ್‌ ನಿರ್ಮಾಣದ ಕಾಮಗಾರಿ ಇನ್ನಾ ಗ್ರಾಮದಲ್ಲಿ ಜನವಿರೋಧದ ಮಧ್ಯೆ ಆರಂಭಗೊಂಡಿದೆ. ಮಂಗಳವಾರ ಯಾವುದೇ ಪೂರ್ವ ಸೂಚನೆ ಇಲ್ಲದೆ ಟವರ್‌ ನಿರ್ಮಿಸಲು ಗುತ್ತಿಗೆದಾರರು ಖಾಸಗಿ ಕೃಷಿ ಜಮೀನಿಗೆ ಜೆಸಿಬಿ ನುಗ್ಗಿಸಿದ್ದು ಸ್ಥಳೀಯರ ಭಾರೀ ಆಕ್ರೋಶಕ್ಕೆ ಕಾರಣವಾಯಿತು.

Advertisement

300 ಕ್ಕೂ ಅಧಿಕ ಮಂದಿ ಸ್ಥಳದಲ್ಲಿ ಸೇರಿದ್ದರಲ್ಲದೇ, “ಕೃಷಿ ಭೂಮಿಯಲ್ಲಿ ಟವರ್‌ ನಿರ್ಮಾ ಣಕ್ಕೆ ಅವಕಾಶ ನೀಡಿದ್ದುಯಾರು’ ಎಂದು ಪ್ರಶ್ನಿಸಿದರಲ್ಲದೆ ಯಾವುದೇ ಕಾರಣಕ್ಕೂ ಟವರ್‌ ನಿರ್ಮಾಣಕ್ಕೆ ಬಿಡೆವು ಎಂದರು. ಜಿಲ್ಲಾಧಿಕಾರಿ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಆದೇಶ ಹೊರಡಿಸುವುದಲ್ಲ. ಖುದ್ದಾಗಿ ಸ್ಥಳಕ್ಕೆ ಬಂದು ನೋಡಲಿ. ಜನರ ವಿರೋ ಧದ ಮಧ್ಯೆ ಕಾಮ ಗಾರಿಯನ್ನು ಮುಂದು ವರಿಸಿದರೆ ಜಿಲ್ಲಾಧಿಕಾರಿಗಳ ವಿರುದ್ಧವೇ ಹೋರಾಟ ಅನಿವಾರ್ಯ ಎಂದರು.

ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ನಮಗೆ ಪರಿಹಾರದ ಮೊತ್ತ ದುಪ್ಪಟ್ಟು ಕೊಡಿ ಎಂದು ಕೇಳುತ್ತಿಲ್ಲ. ಬಡಪಾಯಿ ರೈತರ ಜಮೀನನ್ನು ಹೊರತುಪಡಿಸಿ ಬೇರೆಡೆ ಟವರ್‌ ನಿರ್ಮಿಸಿ ಎಂದು ಮಾಡಿದ ಮನವಿಗೆ ಸ್ಪಂದಿಸದೇ ಈಗ ಟವರ್‌ ನಿರ್ಮಾಣಕ್ಕೆ ಅವಕಾಶ ಕೊಟ್ಟ ದ್ದು ಸರಿಯೇ ಎಂದು ಪ್ರಶ್ನಿಸಿದರು.

ಹಲವು ಕುಟುಂಬಗಳಿಗೆತೊಂದರೆ
ಇನ್ನಾ ಗ್ರಾಮದ 8 ಕಡೆ ಟವರ್‌ ನಿರ್ಮಾಣಕ್ಕೆ ಸರಕಾರಿ ಮತ್ತು ಖಾಸಗಿ ಜಾಗದಲ್ಲಿ ಸ್ಥಳ ಗುರುತಿಸಲಾಗಿದೆ. ಖಾಸಗಿ ಜಾಗದ ಮಾಲಕರಿಗೆ ನೋಟಿಸ್‌ ನೀಡದೆ ಕಾಮಗಾರಿ ನಡೆಸಲಾಗುತ್ತಿದೆ. ವಿದ್ಯುತ್‌ ಲೈನ್‌ ಹಾದು ಹೋಗುವ ಪ್ರದೇಶದ 250 ಕ್ಕೂ ಅಧಿಕ ಕೃಷಿಕ ಕುಟುಂಬಗಳಿಗೆ ತೊಂದರೆಯಾಗಲಿದೆ ಎಂದು ಜಿ.ಪಂ. ಮಾಜಿ ಸದಸ್ಯೆ ರೇಷ್ಮಾ ಉದಯ ಶೆಟ್ಟಿ ಆರೋಪಿಸಿದರು.ಇನ್ನಾ ಗ್ರಾ.ಪಂ. ಸದಸ್ಯ ದೀಪಕ್‌ ಕೋಟ್ಯಾನ್‌, ಜಿಲ್ಲಾ ಧಿಕಾರಿಗಳಿಗೆ ಮನವಿ ಮಾಡಿದ‌ರೂ ಪದೇ ಪದೇ ಟವರ್‌ ನಿರ್ಮಾಣಕ್ಕೆ ಆದೇಶಿ ಸುತ್ತಿದ್ದಾರೆ. ಉಗ್ರ ಹೋರಾಟ ಅನಿವಾರ್ಯ ಎಂದರು. ಪಡುಬಿದ್ರಿ ಪೊಲೀಸ್‌ ಠಾಣಾಧಿಕಾರಿ ಪ್ರಸನ್ನ, ಗ್ರಾಮಕರಣಿಕ ಹನುಮಂತಪ್ಪ, ಗ್ರಾಮಸ್ಥರಾದ ಅಮರನಾಥ್‌ ಶೆಟ್ಟಿ, ಗ್ರಾ.ಪಂ. ಸದಸ್ಯ ಚಂದ್ರಹಾಸ ಶೆಟ್ಟಿ ಮತ್ತಿತರರು ಸ್ಥಳದಲ್ಲಿದ್ದರು.

ನೋಟಿಸ್‌ ನೀಡಿ 7 ದಿನ ಗಳ ಕಾಲಾ ವಕಾಶ ನೀಡಲು ಕಂಪೆನಿಗೆ ತಿಳಿಸಿದ್ದೇವೆ. ಬಳಿಕ ಕಾಮಗಾರಿ ಮುಂದುವರಿಯಲಿದೆ.
– ನರಸಪ್ಪ, ಕಾರ್ಕಳ ತಹಶೀಲ್ದಾರ್‌

Advertisement

 

Advertisement

Udayavani is now on Telegram. Click here to join our channel and stay updated with the latest news.

Next