Advertisement

ಹಕ್ಕು ಪಡೆಯಲು ಹೋರಾಟ ಅನಿವಾರ್ಯ: ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಮ್ಮೇಳನ

03:47 PM Jun 03, 2024 | Team Udayavani |

ಉದಯವಾಣಿ ಸಮಾಚಾರ
ಕೊಪ್ಪಳ: ದಿನದ 24 ಗಂಟೆಗಳಲ್ಲಿ ಎಂಟು ತಾಸು ದುಡಿಸಿ ಕೊಳ್ಳಬೇಕೆಂದು ಮಾಲೀಕ ವರ್ಗವನ್ನು ಕಾರ್ಮಿಕ ನಾಯಕರು ಆಗ್ರಹಿಸಿದ್ದರು. ಅದಕ್ಕೆ ಮಾಲೀಕರು ಒಪ್ಪದಿದ್ದಾಗ ಕಾರ್ಮಿಕರ ಮತ್ತು ಮಾಲೀಕರ ನಡುವೆ ನಡೆದ ಸಂಘರ್ಷದಲ್ಲಿ ಹಲವು ಕಾರ್ಮಿಕರು ಹುತಾತ್ಮರಾಗಿ ಕಾರ್ಮಿಕರ ಗೆಲುವು ಸಾಧಿಸುತ್ತಾರೆ. ಆ ದಿನ ನೆನಪಿಸುವ ದಿನವೇ ಕಾರ್ಮಿಕ ದಿನಾಚರಣೆ ಎಂದು ಎಂದು ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟ (ಎಐಟಿಯುಸಿ) ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್‌ ವಿಜಯ ಭಾಸ್ಕರ್‌ ಡಿ. ಹೇಳಿದರು.

Advertisement

ನಗರದ ಸಾಹಿತ್ಯ ಭವನದಲ್ಲಿ 138ನೇ ವಿಶ್ವ ಕಾರ್ಮಿಕ ದಿನಾಚರಣೆ ಹಾಗೂ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ (ಎಐಟಿಯುಸಿ ಸಂಯೋಜಿತ)ದ ಜಿಲ್ಲಾ ಘಟಕದ ಪ್ರಥಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಎಐಟಿಯುಸಿಯ ಹೋರಾಟದ ಮೂಲಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸುವಲ್ಲಿ ಸಂಘಟನೆ ಶ್ರಮಿಸಿದೆ. ಆದರೆ ಈಚೆಗೆ ಕಲ್ಯಾಣ ಮಂಡಳಿಯ ಅಧಿಕಾರಿಗಳಿಂದ ಕಾರ್ಮಿಕ ವರ್ಗಕ್ಕೆ ಅನ್ಯಾಯವಾಗುತ್ತಿದೆ. ನಮ್ಮ ಹಕ್ಕುಗಳನ್ನು ಪಡೆಯಬೇಕಾದರೆ ಹೋರಾಟದ ಮೂಲಕವೇ ಪಡೆಯಬೇಕು ಎಂದರು.

ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಚ್‌. ಜಿ. ಉಮೇಶ್‌ ಮಾತನಾಡಿ, ಕಲ್ಯಾಣ ಮಂಡಳಿಯ ದುಡ್ಡನ್ನು ಬೇರೆ ಬೇರೆ ಕಾರಣಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಅದನ್ನು ತಡೆಯಲು ನಮ್ಮ ಸಂಘಟನೆ ಸತತ ಪ್ರಯತ್ನ ಮಾಡುತ್ತಿದೆ ಎಂದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ| ಕೆ.ಎಸ್‌. ಜನಾರ್ದನ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮೊದಲು ನಗರದ ಕಾರ್ಮಿಕ ವೃತ್ತದಿಂದ ಅಶೋಕ ವೃತ್ತದವರೆಗೆ ಕಟ್ಟಡ ಕಾರ್ಮಿಕರು ಬೃಹತ್‌ ಮೆರವಣಿಗೆ ನಡೆಸಿ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಖಂಡರಾದ ಹುಲುಗಪ್ಪ ಅಕ್ಕಿ ರೊಟ್ಟಿ, ಗಿರೀಶ್‌ ತುಮಕೂರು, ಯು.ಎಸ್‌.ಸೊಪ್ಪಿಮಠ,
ಎ.ಬಿ.ದಿಂಡೂರ್‌, ಅಡಿವೆಪ್ಪ ಚಲವಾದಿ, ಹೊನ್ನಪ್ಪ ಮರೆಮ್ಮನವರ್‌, ಮುಮ್ತಾಜ್‌ ಬೇಗಂ, ಪ್ರಭುದೇವ್‌ ಯಳಸಂಗಿ, ನೂರ್‌ಸಾಬ್‌ ಹೊಸಮನಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Advertisement

ಸಂಘದ ತಾಲೂಕು ಘಟಕದ ಕಾರ್ಯದರ್ಶಿ ರಾಜಾಸಾಬ್‌ ತಹಶೀಲ್ದಾರ್‌ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ಎಸ್‌.ಎ.ಗಫಾರ್‌ ನಿರೂಪಿಸಿದರು. ಕೊನೆಯಲ್ಲಿ ಸೆಬಾಸ್ಟಿನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next