Advertisement

ರಾಜ್ಯದಲ್ಲಿ ಮತ್ತೆ ಇಬ್ಬರಿಗೆ ಸೋಂಕು ದೃಢ: 534ಕ್ಕೆ ಏರಿಕೆಯಾದ ಸಂಖ್ಯೆ

08:08 AM Apr 30, 2020 | keerthan |

ಬೆಂಗಳೂರು: ಕೋವಿಡ್-19 ಸೋಂಕು ರಾಜ್ಯದ ಮತ್ತೆ ಇಬ್ಬರಿಗೆ ತಾಗಿರುವುದು ದೃಢವಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 534ಕ್ಕೆ ಏರಿಕೆಯಾಗಿದೆ.

Advertisement

ದಾವಣಗೆರೆಯ ಮಹಿಳೆ ಮತ್ತು ನಂಜನಗೂಡಿನ ವ್ಯಕ್ತಿಯೋರ್ವನಿಗೆ ಸೋಂಕು ತಾಗಿರುವುದು ಪರೀಕ್ಷೆಯಲ್ಲಿ ದೃಢವಾಗಿದೆ.

ದಾವಣಗೆರೆಯ 35 ವರ್ಷದ ಮಹಿಳೆಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಈಕೆಗೆ ದಾವಣಗೆರೆಯ ನಿಯೋಜಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೈಸೂರಿನ ನಂಜನಗೂಡಿನಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಿದ್ದು, 26 ವರ್ಷದ ವ್ಯಕ್ತಿಗೆ ಸೋಂಕು ದೃಢವಾಗಿದೆ. ಸೋಂಕಿತ ಸಂಖ್ಯೆ 346ರ ಸಂಪರ್ಕದಿಂದ ಸೋಂಕು ಈತನಿಗೆ ಸೋಂಕು ತಾಗಿದೆ.

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಒಟ್ಟು 11 ಜನರಿಗೆ ಸೋಂಕು ತಾಗಿದೆ. ಕಲಬುರಗಿಯಲ್ಲಿ ಎಂಟು ಜನರಿಗೆ ಮತ್ತು ಬೆಳಗಾವಿಯ ಹುಕ್ಕೇರಿಯ ಓರ್ವನಿಗೆ ಸೋಂಕು ತಾಗಿದೆ.

Advertisement

ರಾಜ್ಯದದಲ್ಲಿ ಸದ್ಯ ಕೋವಿಡ್-19 ಸೋಂಕಿತರ ಸಂಖ್ಯೆ 534ಕ್ಕೆ ಏರಿಕೆಯಾಗಿದೆ. ಇದರಲ್ಲಿ 216 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 20 ಜನರು ಸೋಂಕಿತರು ಸಾವನ್ನಪ್ಪಿದರೆ, ಓರ್ವ ಸೋಂಕು ಅಲ್ಲದ ಕಾರಣದಿಂದ ಮರಣ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next