Advertisement

ISRO Missions: “ಗಗನಯಾನ’ಕ್ಕೆ ಮಹಿಳೆಯರಿಗೆ ಆದ್ಯತೆ: ಇಸ್ರೋ

11:00 PM Oct 22, 2023 | Team Udayavani |

ತಿರುವನಂತಪುರ: ಭಾರತದ ಬಹು ನಿರೀಕ್ಷಿತ ಮಾನವಸಹಿತ ಬಾಹ್ಯಾಕಾಶ ಯೋಜನೆ “ಗಗನಯಾನ’ ಅಡಿಯಲ್ಲಿ ಕಾರ್ಯನಿರ್ವಹಿಸಲು ಯುದ್ಧ ವಿಮಾನಗಳ ಮಹಿಳಾ ಪೈಲಟ್‌ಗಳು ಹಾಗೂ ಮಹಿಳಾ ವಿಜ್ಞಾನಿಗಳಿಗೆ ಇಸ್ರೋ ಆದ್ಯತೆ ನೀಡಲಿದೆ. ಜತೆಗೆ ಭವಿಷ್ಯದಲ್ಲಿ ಅವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಸಾಧ್ಯತೆ ಇದೆ ಎಂದು ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ಹೇಳಿದ್ದಾರೆ.

Advertisement

“ಮುಂದಿನ ವರ್ಷ ಮಾನವರಹಿತ ಗಗನಯಾನ ಬಾಹ್ಯಾಕಾಶ ನೌಕೆಯಲ್ಲಿ ಮಹಿಳಾ ರೊಬೋಟ್‌ ಅನ್ನು ಕಳುಹಿಸಲಾಗುವುದು’ ಎಂದ ಅವರು, “ಮಾನವಸಹಿತ ಬಾಹ್ಯಾಕಾಶ ಯಾನವು 2025ಕ್ಕೆ ನಡೆಯುವ ನಿರೀಕ್ಷೆ ಇದೆ. ಮೊದಲ ಹಂತದಲ್ಲಿ ಯುದ್ಧ ವಿಮಾನಗಳನ್ನು ಪರೀಕ್ಷಾರ್ಥವಾಗಿ ಹಾರಿಸುವ ಮಹಿಳಾ ಪೈಲಟ್‌ಗಳನ್ನು ಗುರುತಿಸಬೇಕು. ಎರಡನೆಯ ಹಂತದಲ್ಲಿ ಮಹಿಳಾ ವಿಜ್ಞಾನಿಗಳನ್ನು ಗಗನಯಾತ್ರಿಗಳನ್ನಾಗಿ ಕಳುಹಿಸಲಾಗುತ್ತದೆ’ ಎಂದು ತಿಳಿಸಿದ್ದಾರೆ.

“ಗಗನಯಾನ’ ಯೋಜನೆಯಡಿ ಭೂಮಿಯ ಮೇಲ್ಮೈನಿಂದ 400 ಕಿ.ಮೀ. ಎತ್ತರದ ಕಕ್ಷೆಗೆ ಮಾನವರನ್ನು ಕಳುಹಿಸಲಾಗುವುದು. 3 ದಿನಗಳ ನಂತರ ಅವರನ್ನು ಸುರಕ್ಷಿತವಾಗಿ ಭೂಮಿಗೆ ಮರಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next