Advertisement

ಕೋಸ್ಟ್‌ಗಾರ್ಡ್‌ನಿಂದ ಎರಡು ಮೀನುಗಾರಿಕಾ ಬೋಟ್‌ ರಕ್ಷಣೆ

01:00 AM Mar 21, 2019 | Team Udayavani |

ಪಣಂಬೂರು: ತಾಂತ್ರಿಕ ಅಡಚಣೆಯಿಂದ ಸಮುದ್ರ ಮಧ್ಯೆ ಸಿಲುಕಿದ್ದ ಇಮಾನ್ಯುವೆಲ್‌ ಮೀನುಗಾರಿಕಾ ದೋಣಿಯನ್ನು ಪತ್ತೆ ಹಚ್ಚಿದ ಕೋಸ್ಟ್‌ಗಾರ್ಡ್‌ ತಂಡದವರು, ದುರಸ್ತಿಗೆ ಬೇಕಾದ ನೆರವು ನೀಡಿ ಕೊಚ್ಚಿ ಮೀನುಗಾರಿಕಾ ಬಂದರಿಗೆ ತಲುಪಿಸಿದ್ದಾರೆ. 

Advertisement

ಕಾರವಾರದಿಂದ 46 ನಾಟಿಕಲ್‌  ಮೈಲ್‌ ದೂರದಲ್ಲಿ ಈ ದೋಣಿ ಕೆಟ್ಟು ನಿಂತಿತ್ತು. ಕಣ್ಣೂರಿನ ವಿಪತ್ತು ನಿರ್ವಹಣಾ ವಿಭಾಗವು (ಡಿಡಿಎಂಎ) ನೀಡಿದ ಸುಳಿವಿನಂತೆ  ದೋಣಿ ಇದ್ದ ಸ್ಥಳವನ್ನು ಪತ್ತೆ ಹಚ್ಚಿ ಸಹಾಯ ಮಾಡಲಾಯಿತು. ಕೋಸ್ಟ್‌ ಗಾರ್ಡ್‌ನ ಸಿ 420 ಮತ್ತು ನೀಲೇಶ್ವರದ ಕೋಸ್ಟಲ್‌ ಸೆಕ್ಯೂರಿಟಿ  ಪೊಲೀಸ್‌ ದಳವೂ ನೆರವು ನೀಡಿದೆ.

ತಾಂತ್ರಿಕ ಅಡಚಣೆಗೊಳಗಾದ ದೋಣಿಯಲ್ಲಿ ಹನ್ನೊಂದು  ಮಂದಿ ಸಿಬಂದಿಯಿದ್ದರು.

ಮೀನುಗಾರರ ರಕ್ಷಣೆ  
ಇನ್ನೊಂದು ಘಟನೆಯಲ್ಲಿ ಮಂಗಳೂರಿನಿಂದ ಮೀನುಗಾರಿಕೆಗೆ ತೆರಳಿದ್ದ ಜಪಮಾಲಾ ಮಾತಾ ದೋಣಿ ಮಂಗಳೂರಿನಿಂದ 75 ನಾಟಿಕಲ್‌  ಮೈಲ್‌ ದೂರದ ಕೇರಳದ ಅಜೆಕಲ್‌ ಬಳಿ ಕೆಟ್ಟು ನಿಂತಿತ್ತು. ಇದರಿಂದ ಬಂದ ರಕ್ಷಣೆ ಕರೆ ಹಿನ್ನೆಲೆಯಲ್ಲಿ ಸಾವಿತ್ರಿ ಬಾಯಿಪುಲೆ ಕೋಸ್ಟ್‌ಗಾರ್ಡ್‌ ಕಣ್ಗಾವಲು ಹಡಗು ಸ್ಥಳಕ್ಕೆ ತೆರಳಿ ಅದರಲ್ಲಿದ್ದ ನಾಲ್ವರು ಮೀನುಗಾರರನ್ನು ರಕ್ಷಿಸಿದೆ. ಬುಧವಾರ 3.50ರ ವೇಳೆಗೆ  ಈ ಕಾರ್ಯಾಚರಣೆ ನಡೆದಿದೆ.

ತಾಂತ್ರಿಕ ಸಮಸ್ಯೆಯಿಂದ ದೋಣಿ ನಿಧಾನವಾಗಿ ಮುಳುಗಲು ಆರಂಭಿಸಿದ್ದು, ಸಕಾಲಿಕ ಕಾರ್ಯಾ ಚರಣೆಯಿಂದ ಅದನ್ನು ರಕ್ಷಿಸಲಾಗಿದೆ ಎಂದು ಡಿಐಜಿ ಎಸ್‌. ಎಸ್‌. ದಸೀಲಾ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next