Advertisement
ಮೈಸೂರು ಮಹಾರಾಜಾ ಕಾಲೇಜಿನ ವಿದೇಶೀ ಪ್ರಾಂಶುಪಾಲರಾಗಿದ್ದ ಜೆ.ಸಿ.ರಾಲೊ ( 1928- 43), ಎ.ಬಿ. ಮ್ಯಾಕಿಂಟಾಷ್ (1943-44) ಅವರ ಭಿನ್ನ ವ್ಯಕ್ತಿತ್ವ ಕುತೂಹಲ ತರಿಸುತ್ತದೆ.
Related Articles
Advertisement
ಬರಬರುತ್ತ ರಾಲೊ ಬಗೆಗಿನ ನಿಲುವು ಭಾರತೀಯರಲ್ಲಿ ಬದಲಾಯಿತು. ಅಸಹಕಾರ ಚಳವಳಿ ಕುರಿತ ಚರ್ಚೆಯೊಂದರಲ್ಲಿ ಮೊಹಮದ್ ವಲೀ ಉಲ್ಲ ಕಟು ಮಾತುಗಳಿಂದ ಬ್ರಿಟಿಷರನ್ನು ಖಂಡಿಸಿದಾಗ ಅಧ್ಯಕ್ಷತೆ ವಹಿಸಿದ್ದ ರಾಲೊ ‘Perhaps there have been mistakes on the part of the British Government. India’s desire for independence is natural. but it is perhaps better for India, in her own interests that she should accept the tuition of England in the art of government for some time longer. Apart from all this, it hurts me that with me in the chair my students used such harsh language about England’ ಉದ್ಗರಿಸಿದರು.
To encourage khadi is to act against England’ ಎಂದು ಹೇಳಿದ್ದರು. 19402ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ನಡೆದಾಗ ರಾಲೊ ಭಾರತೀಯ ಸಹೋದ್ಯೋಗಿಗಳ ಜತೆ ದರ್ಪದಿಂದ ವರ್ತಿಸಿದರಂತೆ. ಅವರು ಮೈಸೂರು ಬಿಟ್ಟು ಇಂಗ್ಲೆಂಡ್‌ಗೆ ಹೊರಡುವಾಗ ನೋಡಲು ಹೋಗದ ಎ.ಎನ್. ಮೂರ್ತಿರಾಯರು (ಹಿರಿಯ ಸಾಹಿತಿ), ಕಾಲು ಶತಮಾನ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿ, ದಕ್ಷತೆಯಿಂದ ಕಾಲೇಜನ್ನು ಆಳಿ, ಎಲ್ಲರ ವಿಶ್ವಾಸವನ್ನೂ ಕಳೆದುಕೊಂಡರಲ್ಲ ಎಂಬ ನೋವು ಬಾಧಿಸಿದೆ. ನೋಡದಿದ್ದುದು ತಪ್ಪು ಎಂದು 1978ರಲ್ಲಿ “ಚಿತ್ರಗಳು- ಪತ್ರಗಳು’ ಕೃತಿಯಲ್ಲಿ ಬರೆದರು.
ಮ್ಯಾಕಿಂಟಾಷ್‌ರಲ್ಲಿ “ಭಾರತೀಯರು ನಮ್ಮ ಆಜ್ಞಾನುವರ್ತಿಗಳು, ನಮಗಿಂತ ಕೀಳು’ ಎಂಬ ಭಾವನೆ ಎಳ್ಳಷ್ಟೂ ಇರಲಿಲ್ಲ. ಮ್ಯಾಕಿಂಟಾಷ್ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಸಂದರ್ಭ “ಕ್ವಿಟ್ ಇಂಡಿಯಾ, ಕ್ವಿಟ್ ಇಂಡಿಯಾ’ ಎಂದು ಗುಂಪು ಕೂಗಿದಾಗ ‘I s’pose we’ ll ha’t’ do it. Pch. yes, we must do’t, Pch’ ಎಂದರು. ಇದು ಹೀಗೆ: ‘I suppose we all have to do it. yes, we must do it Pch. =”ಶ್…!.
ಕಿರಿಯರಾದ ರಾಲೊಗೆ ಹೆಚ್ಚಿನ ವೇತನ, ಪ್ರಾಂಶುಪಾಲತ್ವ ಸಿಕ್ಕಿದಾಗ ಮ್ಯಾಕಿಂಟಾಷ್ ಸ್ವಲ್ಪವೂ ಹಚ್ಚಿ ಕೊಂಡಿರಲಿಲ್ಲ. ಯಾರಿಂದಲೂ ಹೆಚ್ಚಿನ ಮರ್ಯಾದೆ ಬಯಸದೆ ಎಲ್ಲರಿಂದಲೂ ಪಡೆದರು. ಅವರ ಪಾಠ ಸೊಗಸಲ್ಲ ಎಂದವರು ಕಡಿಮೆ ಸಂಖ್ಯೆಯವರು, ಮೆಚ್ಚಿದವರು ನೂರಾರು. ರಾಲೊ ಹೇಳಿದಂತೆ ಭಾರತೀಯರಿಗೆ ಆಡಳಿತ ತರಬೇತಿ ಅಗತ್ಯವೆನ್ನುವುದು ಇದುವರೆಗೂ ಕಂಡುಬಂದ ಸತ್ಯವೆ ಎಂದೆನಿಸುತ್ತದೆ.
1833ರಲ್ಲಿ ರಾಜಾಸ್ ಫ್ರೀ ಸ್ಕೂಲ್ ಆಗಿ ಮೊಳಕೆಯೊಡೆದ ಸಂಸ್ಥೆ ಬೆಳೆದು ಬ್ರಿಟಿಷ್ ಅಧಿಪತ್ಯದ ಹೊರಗಿನ ರಾಜ್ಯಗಳಲ್ಲಿ ಮೊದಲ ವಿ.ವಿ.ಯಾಗಿ 1916ರಲ್ಲಿ ರೂಪುಗೊಂಡಿತು. ಆಗ ವಿ.ವಿ., ಕಾಲೇಜು ಬೇರ್ಪಡೆಯಾಯಿತು. ಈಗ 31ನೆಯ ಪ್ರಾಂಶುಪಾಲರಾಗಿ ಮಂಗಳೂರು ಮೂಲದ ಪ್ರೊ| ಅನಿತಾ ವಿಮ್ಲಾ ಬ್ರ್ಯಾಗ್ಸ್ ಕರ್ತವ್ಯದಲ್ಲಿದ್ದಾರೆ.
– ಮಟಪಾಡಿ ಕುಮಾರಸ್ವಾಮಿ