Advertisement
ತನಿಷ್ ಅಖೀಲ ಭಾರತ ಮಟ್ಟದಲ್ಲಿ 22 ಹಾಗೂ ರಿಧಿ ಅಖೀಲ 23ನೇ ರ್‍ಯಾಂಕ್ ಪಡೆದಿದ್ದಾರೆ. ನಿವೇದ್ ಎ. ನಂಬಿಯಾರ್ 35ನೇ ರ್‍ಯಾಂಕ್ ಪಡೆದು, ಕರ್ನಾಟಕದ ಮೂರನೇ ಟಾಪರ್ ಆಗಿದ್ದಾರೆ. ನಿರಾಲ್ ಚರಣ್ 54ನೇ ರ್‍ಯಾಂಕ್, ರಿಶಿತ್ ಗುಪ್ತಾ 93ನೇ ರ್‍ಯಾಂಕ್ ಪಡೆದಿದ್ದಾರೆ. ಎ.ಲೇಖಶ್ರೀ 51ನೇ ರ್‍ಯಾಂಕ್, ಮರುಮಾಮೂಲ ವೆಂಕಟ ಪ್ರಣಯ್ 71ನೇ ರ್‍ಯಾಂಕ್, ಅಚಿಂತ್ಯಾ ಮಾಥುರ್ 85ನೇ ರ್‍ಯಾಂಕ್, ಬಿ.ಶಶಾಂಕ್ ವಿಶೇಷ ಚೇತನ ವಿಭಾಗದಲ್ಲಿ 2ನೇ ರ್‍ಯಾಂಕ್, ಸೂರಜ್ ಗುರುನಾಥ್ ಕಾಗಲ್ಕರ್ 7ನೇ ರ್‍ಯಾಂಕ್ ಪಡೆದಿದ್ದಾರೆ.ರಾಜ್ಯದ ಹಲವಾರು ವಿದ್ಯಾರ್ಥಿಗಳು ಜೆಇಇ ಮೈನ್ಸ್‌ನಲ್ಲಿ ಅಖೀಲ ಭಾರತ ಮಟ್ಟದ ಟಾಟ್ 100 ರ್‍ಯಾಂಕ್‌ನಲ್ಲಿ ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಎಕ್ಸ್‌ಪರ್ಟ್ ಪಿಯು ಕಾಲೇಜಿನ 21 ವಿದ್ಯಾರ್ಥಿಗಳು ಟಾಪ್ 200 ರ್‍ಯಾಂಕ್‌ನಲ್ಲಿ ವಿವಿಧ ಸ್ಥಾನ ಪಡೆದಿದ್ದಾರೆ. ಐಐಟಿ ಸೇರಿದಂತೆ ದೇಶದ ಪ್ರತಿಷ್ಠಿತ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಜೆಇಇ ಮೈನ್ಸ್ ನಡೆಸುತ್ತದೆ.
ಪ್ರಾಧ್ಯಾಪಕರು ಕಾಲೇಜು ಹಾಗೂ ಕೋಚಿಂಗ್ ಕೇಂದ್ರದಲ್ಲಿ ನೀಡಿದ ತರಬೇತಿ, ಮಾರ್ಗದರ್ಶನ ಪ್ರೋತ್ಸಾಹ ದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಕಠಿನ ಪರಿಶ್ರಮದಿಂದ ಅಧ್ಯಯನ ಮಾಡಿದ್ದು, ತಮಗೆ ಬೋಧಿಸಿದ ಶಿಕ್ಷಕರು, ಪ್ರೋತ್ಸಾಹ ನೀಡಿದ ಪಾಲಕರಿಗೆ ಋಣಿಯಾಗಿದ್ದೇವೆ ಎಂದು ರಾಜ್ಯಕ್ಕೆ ಪ್ರಥಮ ಹಾಗೂ ದ್ವಿತೀಯ ಟಾಪರ್‌ಗಳಾಗಿರುವ ಬೆಂಗಳೂರಿನ ತನಿಷ್.ಎಸ್.ಖುರಾನಾ ಹಾಗೂ ರಿಧಿ ಮಹೇಶ್ವರಿ ಹೇಳಿದ್ದಾರೆ.