Advertisement
ಬಂಧಿತ ಆರೋಪಿ ಹತ್ಯೆಗೀಡಾದ ಮುಕೇಶ್ ಅವರ ಸ್ವಂತ ಸೋದರ ಸಂಬಂಧಿ ರಿತೇಶ್ ಚಂದ್ರಾಕರ್ ಎಂಬಾತನಾಗಿದ್ದಾನೆ. ಕಠಿನ ತನಿಖಾ ವರದಿಗಳಿಗೆ ಹೆಸರಾದ 28 ವರ್ಷದ ಪತ್ರಕರ್ತ ಮುಖೇಶ್ ಚಂದ್ರಾಕರ್ ಅವರ ಹತ್ಯೆಗೆ ಸಂಬಂಧಿಸಿದಂತೆಮೂವರನ್ನು ಬಂಧಿಸಲಾಗಿದೆ. ಶವ ಆರೋಪಿ ಗುತ್ತಿಗೆದಾರ ಸುರೇಶ್ ಚಂದ್ರಾಕರ್ ಗೆ ಸೇರಿದ್ದ ನೀರಿನ ಟ್ಯಾಂಕ್ ನೊಳಗೆ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Related Articles
Advertisement
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪತ್ರಕರ್ತನ ಹ*ತ್ಯೆಯನ್ನು ಖಂಡಿಸಿ, ಸಾವಿಗೆ ಸಂತಾಪ ಸೂಚಿಸಿದ್ದಾರೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಮತ್ತು ತತ್ ಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಹಲವು ಕಾಂಗ್ರೆಸ್ ನಾಯಕರು ಛತ್ತೀಸ್ ಗಢದ ಬಿಜೆಪಿ ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಏತನ್ಮಧ್ಯೆ, ಮುಖೇಶ್ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದೆ. ಗುತ್ತಿಗೆದಾರ ಸುರೇಶ್ ಚಂದ್ರಾಕರ್ ಅವರ ಮೂರು ಬ್ಯಾಂಕ್ ಖಾತೆಗಳನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ.
ಹ*ತ್ಯೆ ಖಂಡಿಸಿ ರಾಯಪುರದಲ್ಲಿ ಪತ್ರಕರ್ತರು ರಾಯ್ಪುರ ಪ್ರೆಸ್ ಕ್ಲಬ್ನ ಬ್ಯಾನರ್ನಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.