Advertisement

Mahakumbh Mela: ಪ್ರಯಾಗ್ ರಾಜ್‌ ಚಲೋ-ಮಹಾಕುಂಭ ಮೇಳಕ್ಕೆ ಅಡ್ಡಿ: ಉ*ಗ್ರ ಪನ್ನು‌ ಬೆದರಿಕೆ

05:22 PM Jan 06, 2025 | Team Udayavani |

ಲಕ್ನೋ: ಉತ್ತರಪ್ರದೇಶದ ಪ್ರಯಾಗ್‌ ರಾಜ್‌ (Prayagaraj) ನಲ್ಲಿ ಜನವರಿ 13ರಿಂದ ಫೆಬ್ರುವರಿ 26ರವರೆಗೆ ನಡೆಯಲಿರುವ ಮಹಾಕುಂಭಮೇಳಕ್ಕೆ ಅಡ್ಡಿಪಡಿಸುವುದಾಗಿ ಖಲಿ*ಸ್ತಾನಿ ಭಯೋ*ತ್ಪಾದಕ, ನಿಷೇಧಿತ ಸಿಖ್ಸ್‌ ಫಾರ್‌ ಜಸ್ಟೀಸ್‌ ಮುಖಂಡ ಗುರು ಪತ್ವಂತ್‌ ಸಿಂಗ್‌ ಪನ್ನು  ಮತ್ತೆ ಬೆದರಿಕೆಯೊಡ್ಡಿರುವುದಾಗಿ ವರದಿ ತಿಳಿಸಿದೆ.

Advertisement

ಪನ್ನು ಬೆದರಿಕೆಯೊಡ್ಡಿರುವ ವಿಡಿಯೋದಲ್ಲಿ, ಪ್ರಯಾಗ್‌ ರಾಜ್‌ ಚಲೋಗೆ ಕರೆ ನೀಡಿರುವ ಪನ್ನು, ಹಿಂದುತ್ವ ಸಿದ್ದಾಂತವನ್ನು ಅಂತ್ಯಗೊಳಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲ ಲಕ್ನೋ ಮತ್ತು ಪ್ರಯಾಗ್‌ ರಾಜ್‌ ನಲ್ಲಿ ಖಲಿಸ್ತಾನಿ ಮತ್ತು ಕಾಶ್ಮೀರಿ ಬಾವುಟವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರದರ್ಶನಗೊಳಿಸಿ ಎಂದು ತನ್ನ ಬೆಂಬಲಿಗರಲ್ಲಿ ಮನವಿ ಮಾಡಿಕೊಂಡಿದ್ದಾನೆ.  ಪ್ರಯಾಗ್‌ ರಾಜ್‌ ನಲ್ಲಿ 2025ರ ಮಹಾಕುಂಭ ಯುದ್ಧಭೂಮಿಯಾಗಲಿದೆ ಎಂದು ಘೋಷಿಸಿದ್ದಾನೆ.

ಕಳೆದ ಹತ್ತು ದಿನಗಳಲ್ಲಿ ಪನ್ನು ಮಹಾಕುಂಭಮೇಳ ಗುರಿಯಾಗಿರಿಸಿ ನೀಡಿರುವ ಎರಡನೇ ಬೆದರಿಕೆ ಇದಾಗಿದೆ. ಮಕರ ಸಂಕ್ರಾಂತಿ (ಜ.14), ಮೌನಿ ಅಮಾವಾಸೆ (ಜ.29) ಹಾಗೂ ಬಸಂತ್‌ ಪಂಚಮಿ (ಫೆ.03)ಯಂದು ಕುಂಭಮೇಳದಲ್ಲಿ ನಡೆಯಲಿರುವ ಪವಿತ್ರ ಶಾಹಿ ಸ್ನಾನದ ದಿನ ಅಡ್ಡಿಪಡಿಸುವುದಾಗಿ ಪನ್ನು ಈ ಮೊದಲು ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಬೆದರಿಕೆಯೊಡ್ಡಿದ್ದ.

ಪನ್ನು ಮೊದಲು ಬಿಡುಗಡೆಗೊಳಿಸಿದ್ದ ವಿಡಿಯೋ ವಿರುದ್ಧ ಅಖಿಲ ಭಾರತೀಯ ಅಖಾರ ಪರಿಷತ್‌ ನ ಮಹಾಂತ್‌ ರವೀಂದ್ರ ಪುರಿ, ಪನ್ನು ಬೆದರಿಕೆ ಹುಚ್ಚುತನದ್ದು, ಆತನೊಬ್ಬ ಮೂರ್ಖ ಎಂದು ತಿರುಗೇಟು ನೀಡಿದ್ದರು.

Advertisement

“ಒಂದು ವೇಳೆ ಪನ್ನು ಎಂಬ ಹೆಸರಿನ ವ್ಯಕ್ತಿ ಮಹಾಕುಂಭ ಪ್ರವೇಶಿಸಿದರೆ, ಹೊಡೆದು ಹೊರಗಟ್ಟುತ್ತೇವೆ. ನಾವು ಇಂತಹ ನೂರಾರು ಹುಚ್ಚರನ್ನು ನೋಡಿದ್ದೇವೆ” ಎಂದು ಮಹಾಂತ್‌ ರವೀಂದ್ರ ಪುರಿ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಉತ್ತರಪ್ರದೇಶ ಮತ್ತು ಪಂಜಾಬ್‌ ಪೊಲೀಸರ ಎನ್‌ ಕೌಂಟರ್‌ ನಲ್ಲಿ ಖಲಿ*ಸ್ತಾನಿ ಜಿಂದಾಬಾದ್‌ ಪಡೆಯ ಮೂವರು ಉ*ಗ್ರರು ಕೊನೆಯುಸಿರೆಳೆದಿದ್ದ ನಂತರ ಪನ್ನು ಈ ಬೆದರಿಕೆ ಹಾಕಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next