Advertisement

Mudbidri; ಎಂಟು ತಿಂಗಳ ಹಿಂದೆ ಬ್ಯಾಟರಿ ಕಳವು: ಇಬ್ಬರು ಆರೋಪಿಗಳ ಬಂಧನ

12:11 AM Jan 06, 2025 | Team Udayavani |

ಮೂಡುಬಿದಿರೆ: ಎಂಟು ತಿಂಗಳ ಹಿಂದೆ ಮೂಡುಬಿದಿರೆಯ ಮಚಲಿ ಹೊಟೇಲ್‌ ಪಕ್ಕ ನಿಲ್ಲಿಸಿದ್ದ ಹಿಟಾಚಿಗಳ ಸುಮಾರು 2.80 ಲಕ್ಷ ರೂ. ಬೆಲೆಬಾಳುವ 4 ಬ್ಯಾಟರಿಗಳ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂಡುಬಿದಿರೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

2024ರ ಎ. 25ರಂದು ಸಂಜೆ ರೋಹನ್‌ ಕಡೋìಜಾ ಮತ್ತು ಪಂಚಶಕ್ತಿಯ ರಂಜಿತ್‌ ಅವರ ಹಿಟಾಚಿಗಳನ್ನು ಸಂಜೆ ಸುಮಾರು 7 ಗಂಟೆಗೆ ಕೆಲಸದ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಮರುದಿನ ಬೆಳಗ್ಗೆ ನೋಡುವಾಗ ಈ ಹಿಟಾಚಿಗಳ ಬ್ಯಾಟರಿಗಳನ್ನು ಯಾರೋ ಕಳವು ಮಾಡಿರುವುದು ಕಂಡುಬಂದಿತ್ತು. ಪ್ರಕರಣದ ಆರೋಪಿಗಳ ಮತ್ತು ಸೊತ್ತು ಪತ್ತೆಯ ಬಗ್ಗೆ ಮೂಡುಬಿದಿರೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಂಗಳೂರು ಪಡೀಲ್‌ ಅಳಪೆ ಗ್ರಾಮದ ಮಂಜಳಿಕೆ ಹೌಸ್‌ನ ಧನುಷ್‌ ಸನಿಲ್‌ (31) ಮತ್ತು ಮಂಗಳೂರು ನಂತೂರ್‌ ಫೈಝಲ್‌ ನಗರದ ಅಜ್ಮಲ್‌(30)ನನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಕಾರು, 4 ಬ್ಯಾಟರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next