Advertisement

ಅವಳಿ ಕರುಗಳಿಗೆ ಜನ್ಮ ನೀಡಿದ ಗೋಮಾತೆ

02:40 AM May 22, 2018 | |

ಸಿದ್ದಾಪುರ: ಹಸುವೊಂದು ಅವಳಿ ಕರುವಿಗೆ ಜನ್ಮ ನೀಡಿದ ಅಪರೂಪದ ಘಟನೆಯು ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾ. ಪಂ. ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ತೊಂಬಟ್ಟು ಎಂಬಲ್ಲಿ ನಡೆದಿದೆ.

Advertisement

ತೊಂಬಟ್ಟು ಸ್ವಾಮಿಪಾಲು ಶ್ಯಾಮಲ ಹಾಗೂ ಲಕ್ಷ್ಮಣ ಕುಲಾಲ್‌ ದಂಪತಿಯು ಹೈನುಗಾರಿಕೆಯಲ್ಲಿ ಯಶಸ್ಸು ಕಾಣುತ್ತಿದ್ದು, ಹತ್ತಾರು ದನಗಳನ್ನು ಸಾಕಿ ಸಲಹುತ್ತಿದ್ದಾರೆ. ಅವರ ಮನೆಯಲ್ಲಿರುವ ಎಚ್‌.ಎಫ್‌. ತಳಿಯ ದನವು ರವಿವಾರ ಬೆಳಗ್ಗೆ ಅವಳಿ ಕರುಗಳಿಗೆ ಜನ್ಮ ನೀಡಿದೆ. ಎರಡು ಕೂಡ ಹೆಣ್ಣು ಕರುವಾಗಿದ್ದು, ಆರೋಗ್ಯವಾಗಿವೆ. ಎರಡು ಕರುಗಳು ಐದು ನಿಮಿಷದ ಅಂತರದಲ್ಲಿ ಜನಿಸಿವೆ. ಕಳೆದ ಬಾರಿ ಚೊಚ್ಚಲ ಗರ್ಭಧಾರಣೆಯಲ್ಲಿ ಒಂದು ಕರುವಿಗೆ ಜನ್ಮ ನೀಡಿದ್ದು, ಈ ಬಾರಿ ಅವಳಿ ಕರುವಿಗೆ ಜನ್ಮ ನೀಡಿದೆ. 

ಅವಳಿ ಕರುವನ್ನು ನೋಡಲು ಗ್ರಾಮದ ಜನರು ಆಗಮಿಸುತ್ತಿದ್ದು ಮನೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next