Advertisement

ಇಪ್ಪತ್ತರವರಲ್ಲಿ ಮುಂದಿನ ಐವತ್ತರ ಕನಸು

01:10 AM Oct 26, 2022 | Team Udayavani |

ಬೆಂಗಳೂರು: ಭವಿಷ್ಯದ ನಾಯಕತ್ವ ಸೃಷ್ಟಿಗಾಗಿ ಬೃಹತ್‌ ಪ್ರಮಾಣದಲ್ಲಿ ಯುವ ಸಮೂಹವನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಮುಂದಾಗಿದೆ.

Advertisement

ಇಪ್ಪತ್ತರಿಂದ ಮೂವತ್ತರೊಳಗಿನ ಎಲ್ಲ ಜಾತಿ ಸಮುದಾಯದ ಯುವಜನರನ್ನು ಬೂತ್‌ ಮಟ್ಟ ದಲ್ಲಿ ಪಕ್ಷಕ್ಕೆ ಸೆಳೆದು ಮುಂದಿನ 50 ವರ್ಷದ ರಾಜಕಾರಣಕ್ಕೆ ಅಣಿಗೊಳಿಸುವುದು ಇದರ ಉದ್ದೇಶ.

ಈ ಯುವಜನರ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಮುದಾಯ ಆಧಾರಿತ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಅವುಗಳ ಫ‌ಲಾನುಭವಿಗಳ ಅಂಕಿ ಅಂಶಗಳನ್ನು ಮತದಾರರ ಮನೆ ಮನೆಗೆ ತಲುಪಿಸುವ ಗುರಿ ಹೊಂದಲಾಗಿದೆ. ಮುಂದಿನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ 2 ವರ್ಷಗಳಲ್ಲಿ ಇದನ್ನು ಸಾಧಿಸುವ ಉದ್ದೇಶವಿದೆ. ಪ್ರತೀ ವಿಧಾನಸಭೆ ಕ್ಷೇತ್ರವಾರು ಬೂತ್‌ ಮಟ್ಟದಲ್ಲಿ ಸೇರಿಸಿಕೊಳ್ಳುವ ಯುವಜನರ ಸಂಖ್ಯೆ, ಹಿನ್ನೆಲೆ, ವಿದ್ಯಾಭ್ಯಾಸ ವಿವರವನ್ನು ಕಲೆ ಹಾಕಲಾಗುತ್ತಿದೆ. ನಾಯಕರಿಗೆ ಗುರಿ
ಈ ಮಧ್ಯೆ, ಸಚಿವರು ಹಾಗೂ ಪಕ್ಷದ ಪದಾಧಿ ಕಾರಿ ಗಳಿಗೆ ವಿದ್ಯಾನಿಧಿ ಯೋಜನೆ, ಎಸ್‌ಸಿ-ಎಸ್‌ಟಿ ಮೀಸಲು ಪ್ರಮಾಣ ಹೆಚ್ಚಳ ಸೇರಿ ದಂತೆ ಸರಕಾರದ ವಿವಿಧ ಯೋಜನೆಗಳ ಬಗ್ಗೆ ಸಭೆಗಳಲ್ಲಿ ಹೆಚ್ಚು ಪ್ರಸ್ತಾವಿಸುವಂತೆ ಸೂಚಿಸ ಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್‌ಗಾಂಧಿ ಹಾಗೂ ಕಾಂಗ್ರೆಸ್‌ ನಾಯಕರು ಪದೇ ಪದೆ ಪ್ರಸ್ತಾವಿಸಿದ 40 ಪರ್ಸೆಂಟ್‌ ಆರೋಪಗಳ ಬಗ್ಗೆ ಸರಕಾರ ಹಾಗೂ ಪಕ್ಷದ ಮಟ್ಟದಲ್ಲಿ ಸೂಕ್ತ ರೀತಿಯಲ್ಲಿ ತಿರುಗೇಟು ನೀಡಲಿಲ್ಲ ಎಂಬ ಅಸಮಾಧಾನ ಕೇಂದ್ರ ನಾಯಕರಲ್ಲಿದೆ ಎನ್ನಲಾ ಗಿದೆ. ಜತೆಗೆ ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರದ ತಂಡವೂ ವರಿಷ್ಠರಿಗೆ, ಸರಕಾರಗಳ ಸಾಧನೆಯ ಕುರಿತು ಜನರಿಗೆ ಸಚಿವರು ಮಾಹಿತಿ ತಲುಪಿಸುತ್ತಿಲ್ಲ ಎಂದು ವರದಿ ನೀಡಿತ್ತೆನ್ನಲಾಗಿದೆ.

ಪ್ರಚಾರ ಪ್ರಮುಖ್‌ ನೇಮಕ?
ವಿಧಾನಸಭೆ ಚುನಾವಣೆ ಹತ್ತಿರವಾಗು ತ್ತಿದ್ದಂತೆ ರಾಜ್ಯ ಬಿಜೆಪಿಗೆ ಪ್ರಚಾರ ಪ್ರಮುಖ್‌ ನೇಮಕ ಗೊಳ್ಳುವ ಸಾಧ್ಯತೆಯಿದೆ. ನಾಯಕರ ಪ್ರಚಾರ, ಯಾವ ಭಾಗಕ್ಕೆ ಯಾವ ನಾಯಕರು, ಅಲ್ಲಿ ಪ್ರಸ್ತಾವಿಸ ಬೇಕಾದ ವಿಷಯ ಗಳನ್ನು ಈ ಪ್ರಚಾರ ಪ್ರಮುಖ್‌ ಸಿದ್ಧ ಪಡಿಸುವರು. ಆರ್‌ಎಸ್‌ಎಸ್‌ ಹಿನ್ನೆಲೆಯುಳ್ಳ ಯುವ ನಾಯಕ ರೊಬ್ಬರು ನೇಮಕದ ಕುರಿತೂ ಚರ್ಚೆ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next