Advertisement

ತುಮಕೂರು: ಲಾಕ್‌ಡೌನ್‌ಗೆ ಸ್ಪಂದನೆ

06:57 AM Jul 06, 2020 | Lakshmi GovindaRaj |

ತುಮಕೂರು: ಕೋವಿಡ್‌ 19 ಮಹಾಮಾರಿ ನಿಯಂತ್ರಣಕ್ಕೆ ಸರ್ಕಾರ ನೀಡಿರುವ ಭಾನುವಾರದ ಲಾಕ್‌ಡೌನ್‌ ಆದೇಶಕ್ಕೆ ಇಡೀ ಜಿಲ್ಲೆಯಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದ್ದು, ಎಲ್ಲಾ ಕಡೆ ಜನರು ಮನೆಯಿಂದ ಹೊರ  ಬರದೇ ಕೋವಿಡ್‌ 19 ವೈರಸ್‌ ಹರಡದಂತೆ ಜಾಗೃತಿ ವಹಿಸಿದ್ದಾರೆ.

Advertisement

ಸಂಪೂರ್ಣ ಸ್ತಬ್ಧ: ಕೋವಿಡ್‌ 19 ಸೋಂಕು ಈಗ ಗ್ರಾಮಗಳಿಗೆ ವ್ಯಾಪಿಸುತ್ತಿರುವಂತೆಯೇ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಕಡೆ ಭಾನುವಾರ ಲಾಕ್‌ಡೌನ್‌ಗೆ ಆದೇಶ ಮಾಡಿದ ಹಿನ್ನೆಲೆಯಲ್ಲಿ ಕಲ್ಪತರು ನಾಡಿನಲ್ಲಿ ಲಾಕ್‌ಡೌನ್‌ಗೆ ಉತ್ತಮ  ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅಗತ್ಯ ವಸ್ತುಗಳ ಅಂಗಡಿ ಬಿಟ್ಟು ಎಲ್ಲಾ ಅಂಗಡಿ ಮುಂಗಟ್ಟು ಮುಚ್ಚಿ ಜನ ಸಂಚಾರ ಸಂಪೂರ್ಣ ಸ್ತಬ್ಧಗೊಂಡ ಪರಿಣಾಮ ಭಾನು ವಾರ ಇಡೀ ತುಮಕೂರು ಬಿಕೋ ಎನ್ನುತ್ತಿತ್ತು.

ಸರ್ಕಾರಕ್ಕೆ ಬೆಂಬಲ: ಲಾಕ್‌ಡೌನ್‌ ಸಡಿಲಿಕೆ ಗೊಂಡ ನಂತರ ಎಲ್ಲಾ ಕಡೆ ಜನಸಂಚಾರ ಹೆಚ್ಚಿ ಇಡೀ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಕೋವಿಡ್‌ 19 ಸೋಂಕಿತರು ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಪರಿಣಾಮ ಜೊತೆಗೆ ರಕ್ಕಸ ಕೋವಿಡ್‌ 19  ದಿಂದ ಬಲಿಯಾಗುತ್ತಿರುವವರ ಸಂಖ್ಯೆಯೂ ತೀವ್ರವಾಗುತ್ತಿರುವಾಗ ಸರ್ಕಾರ ಕರೆ ನೀಡಿರುವ ಭಾನುವಾರದ ಲಾಕ್‌ಡೌನ್‌ಗೆ ಕಲ್ಪತರು ನಾಡಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಸ್ತೆಗಿಳಿಯದ ವಾಹನಗಳು: ದಿನಸಿ, ಮಟನ್‌ – ಚಿಕನ್‌, ತರಕಾರಿ, ಔಷಧಿ ಅಂಗಡಿಗಳನ್ನು ಬಿಟ್ಟು ಮಿಕ್ಕೆಲ್ಲ ಅಂಗಡಿಗಳು ಮುಚ್ಚಿದ್ದವು. ಆಟೋ, ಬಸ್‌ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು ಎಲ್ಲಾ ಕಡೆ ಪೊಲೀಸ್‌ ಭದ್ರತೆ ಇದ್ದ  ಕಾರಣದಿಂದ ದ್ವಿಚಕ್ರ ವಾಹನ ಸವಾರರು ರಸ್ತೆಗಿಳಿಯಲಿಲ್ಲ ಅನಾವಶ್ಯಕ ವಾಗಿ ಓಡಾಡಿ ದರೆ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಡಳಿತ ಸೂಚನೆ ನೀಡಿದ್ದರ ಹಿನ್ನೆಲೆಯಲ್ಲಿ ಮನೆ ಬಿಟ್ಟು ಯಾರೂ ಹೊರಗಡೆ ಬರದ  ಹಿನ್ನೆಲೆಯಲ್ಲಿ ಜನರಿಂದ ತುಂಬಿರುತ್ತಿದ್ದ ಎಂ.ಜಿ.ರಸ್ತೆ, ಬಿ.ಎಚ್‌.ರಸ್ತೆ, ಟೌನ್‌ ಹಾಲ್‌ ಸರ್ಕಲ್‌, ಬಸ್‌ ನಿಲ್ದಾಣ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ ಗೊಂಡಿತ್ತು. ಕಾರಣ ವಿಲ್ಲದೇ ರಸ್ತೆಗಿಳಿದವಗೆ ಪೊಲೀಸರು ಲಾಠಿ ರುಚಿ  ತೋರಿಸಿದ್ದಾರೆ.

ಉತ್ತಮ ಬೆಂಬಲ: ಕೋವಿಡ್‌ 19 ನಿಯಂತ್ರಣಕ್ಕೆ ಸರ್ಕಾರ ಮೊದಲು ಇಡೀ ದೇಶವನ್ನು ಲಾಕ್‌ಡೌನ್‌ ಮಾಡಿತ್ತು. ಆಗ ಇನ್ನೂ ಕೋವಿಡ್‌ 19 ಹರಡುವ ಆರಂಭದ ದಿನಗಳು, ಈಗ ಎಲ್ಲಾ ಕಡೆ ಕೋವಿಡ್‌ 19 ಮಹಾಮಾರಿಯ ಅಟ್ಟಹಾಸ  ತೀವ್ರವಾಗುತ್ತಿದೆ. ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ, ಇಂತಹ ಸಂದರ್ಭದಲ್ಲಿ ಲಾಕ್‌ಡೌನ್‌ ತೆರವು ಮಾಡಲಾಗಿದೆ. ಇದು ಸೋಂಕು ಹೆಚ್ಚಲು ಕಾರಣ ಎನ್ನುವ ಆರೋಪ ಕೇಳಿ ಬರುತ್ತಿರುವ ವೇಳೆಯಲ್ಲಿ ರಾಜ್ಯ ಸರ್ಕಾರ ಆದೇಶಿ ಸಿರುವ  ಭಾನುವಾರದ ಲಾಕ್‌ಡೌನ್‌ ಗೆ ಉತ್ತಮ ಜನಸ್ಪಂದನೆ ಸಿಕ್ಕಿದೆ. ಹಳ್ಳಿಗಳಲ್ಲಿ ಹರಡುತ್ತಿರುವ ಈ ಕೋವಿಡ್‌ 19 ನಿಯಂತ್ರಣಕ್ಕೆ ಸರ್ಕಾರ ಮತ್ತೆ ಲಾಕ್‌ ಡೌನ್‌ ಮಾಡಿ ಸೋಂಕು ಹೆಚ್ಚು ಹರಡದಂತೆ ತಡೆಗಟ್ಟಲಿ ಎನ್ನುವ ಒತ್ತಾಯ ಕೇಳಿಬರುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next