Advertisement

ಕೊರಟಗೆರೆ : ಜ್ಞಾನ ದೇಗುಲದಲ್ಲೇ ರಾಷ್ಟ್ರೀಯ ಪಕ್ಷಗಳ ಸಂಘರ್ಷ

07:59 PM Dec 09, 2022 | Team Udayavani |

ಕೊರಟಗೆರೆ: ತಾಲೂಕಿನ ನೇಗಲಾಲದ ಇಂದಿರಾ ಗಾಂಧಿ ವಸತಿಶಾಲೆಯ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.

Advertisement

ನರಸಾಪುರ ವಸತಿಶಾಲೆಯ ವೇದಿಕೆ ಕಾರ್ಯಕ್ರಮದ ವೇಳೆ ಕೇಸರಿ ಶಾಲಿನ ವಿಚಾರಕ್ಕೆ ಬಿಜೆಪಿ ಮುಖಂಡ ಅನಿಲ್‌ಕುಮಾರ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ದಾದ ಪ್ರಾರಂಭ. ಅಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಾಮಫಲಕದ ವಿಚಾರಕ್ಕೂ ಗಲಾಟೆ ಆಗಿದೆ. ನಂತರವು ನೇಗಲಾಲದ ವಸತಿ ಶಾಲೆಯಲ್ಲಿ ಕಾಂಗ್ರೇಸ್-ಬಿಜೆಪಿ ಕಾರ್ಯಕರ್ತರು ಪರಸ್ಪರ ಶಕ್ತಿ ಪ್ರದರ್ಶನಕ್ಕೆ ತಮ್ಮ ನಾಯಕರ ಪರವಾಗಿ ಜೈಕಾರ ಕೂಗಿದ್ದಾರೆ.

ಮಕ್ಕಳ ಮುಂದೆ ರಾಜಕೀಯ ಪೌರುಷ..
ಹಾಲಿ ಮತ್ತು ಮಾಜಿ ಗೃಹ ಸಚಿವರ ಸ್ವಾಗತಕ್ಕಾಗಿ ಕಾದು ಕುಳಿತ್ತಿದ್ದ ನೂರಾರು ಜನ ಪುಟಾಣಿ ಮಕ್ಕಳನ್ನು ಲೆಕ್ಕಿಸದ ಕೈ-ಕಮಲ ಕಾರ್ಯಕರ್ತರು ತಮ್ಮ ನಾಯಕರ ಪರವಾಗಿ ಏರಿದ ಧ್ವನಿಯಲ್ಲಿ ಜೈಕಾರ ಹಾಕಿದರು. ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷದ ಬಾವುಟಗಳನ್ನು ಶಾಲೆಯ ಆವರಣದಲ್ಲಿ ಹಾರಿಸುವ ಮೂಲಕ ಜ್ಞಾನ ದೇಗುಲದಲ್ಲೂ ತಮ್ಮ ರಾಜಕೀಯ ಶಕ್ತಿ ಪ್ರದರ್ಶನವನ್ನು ಮಾಡಿದ ಘಟನೆಯು ನಡೆಯಿತು. ಪುಟಾಣಿ ಮಕ್ಕಳನ್ನು ರಕ್ಷಿಸಿಕೊಳ್ಳಲು ಶಿಕ್ಷಕರು ಮತ್ತು ಪೊಲೀಸರು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು.

ಸ್ವಾಮೀಜಿಗಳ ಮುಂದೆ ಶಕ್ತಿ ಪ್ರದರ್ಶನ..

ನರಸಾಪುರದಲ್ಲಿ ಎಲೆರಾಂಪುರದ ಡಾ.ಹನುಮಂತನಾಥ ಸ್ವಾಮೀಜಿ ಮತ್ತು ನೇಗಲಾಲದ ಸಮಾರಂಭದಲ್ಲಿ ಸಿದ್ದರಬೆಟ್ಟದ ವೀರಭದ್ರ ಶಿವಚಾರ್ಯ ಸ್ವಾಮೀಜಿಗಳ ದಿವ್ಯಸಾನಿಧ್ಯ ಇದ್ರು ಸಹ ಕೈ-ಕಮಲ ಕಾರ್ಯಕರ್ತರು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ. ಸ್ವಾಮೀಜಿಗಳು ಇದ್ರು ಗೌರವ ನೀಡದೇ ಎರಡು ಪಕ್ಷದ ಮುಖಂಡರು ತಮ್ಮ ನಾಯಕರ ಪರವಾಗಿ ಜೈಕಾರ ಕೂಗುತ್ತಾ ತಳ್ಳಾಟ-ನೋಕಾಟ ನಡೆಸಿರುವ ಘಟನೆಯು ಜ್ಞಾನ ದೇಗುಲಕ್ಕೆ ಅಗೌರವ ತೋರಿದಂತಿತ್ತು.

Advertisement

ಇನ್ನೂ ಯಾರಿಗೆ ಯಾವ ಪಕ್ಷದಿಂದ ಟಿಕೆಟ್ ಕೋಡ್ತಾರೋ ಇಲ್ವೋ ನನಗೇ ಗೋತ್ತಿಲ್ಲ. ನನ್ನದೇ ಇನ್ನೂ ಗ್ಯಾರಂಟಿ ಆಗಿಲ್ಲ. ಚುನಾವಣೆ ಬಂದಾಗ ರಾಜಕೀಯ ಮಾಡೋಣ ಈಗ ದಯವಿಟ್ಟು ಯಾರು ಕಿತ್ತಾಡಬೇಡಿ. ಮತದಾರ ಯಾರಿಗೆ ಮತ ಹಾಕುತ್ತಾನೋ ಅದು ಇನ್ನೂ ಗೌಪ್ಯ. ದಯವಿಟ್ಟು ಎಲ್ಲರೂ ನಿಮ್ಮನಿರಿ ಈಗ ಕಾರ್ಯಕ್ರಮ ಮುಗಿಸೋಣ ಎಂದು ಡಾ.ಜಿ.ಪರಮೇಶ್ವರ ಶಾಸಕ ಪ್ರತಿಕ್ರಿಯಿಸಿದ್ದಾರೆ.

ವಿಧಾನಸಭೆ ಚುನಾವಣೆಗೆ ಇನ್ನೂ ಐದಾರು ತಿಂಗಳು ಬಾಕಿಯಿದೆ. ಚುನಾವಣೆ ಬಂದಾಗ ನಾವೇಲ್ಲರೂ ರಾಜಕೀಯ ಮಾಡೋಣ. ಕಾರ್ಯಕ್ರಮ ನಡೆಸಲು ಗದ್ದಲ ನಡೆಸದೇ ಎರಡು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅವಕಾಶ ಮಾಡಿಕೋಡಿ. ವಸತಿ ಶಾಲೆಯಲ್ಲಿ ಪುಟಾಣಿ ಮಕ್ಕಳು ಇದಾರೇ ದಯವಿಟ್ಟು ಪಕ್ಷದ ಬಾವುಟಗಳ ಪ್ರದರ್ಶನ ಬೇಡ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಕೊರಟಗೆರೆ ತಾಲೂಕು ಕೋಳಾಲ ಹೋಬಳಿಯ ನರಸಾಪುರದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಮತ್ತು ಸಿ.ಎನ್.ದುರ್ಗ ಹೋಬಳಿಯ ನೇಗಲಾಲದ ಇಂದಿರಾ ಗಾಂಧಿ ವಸತಿಶಾಲೆಯ ನೂತನ ಕಟ್ಟಡದ ಉದ್ಘಾಟನೆ ನೇರವೇರಿಸಲಾಯಿತು.

ಕಲ್ಪತರು ನಾಡಿಗೆ ಅಕ್ಷರ ಜ್ಞಾನ ನೀಡಿದ ಶ್ರೀಮಠ ನಮ್ಮ ಹೆಮ್ಮೆಯ ಸಿದ್ದಗಂಗಾ ಕ್ಷೇತ್ರ.. ಟೀ ಅಂಗಡಿಯಲ್ಲಿ ಚಹಾ ಮಾರುತ್ತಿದ್ದ ಸಾಮಾನ್ಯ ಮನುಷ್ಯ ಇಂದು ದೇಶದ ಪ್ರಧಾನಿ.. ನಮ್ಮ ಮಕ್ಕಳು ಸರಕಾರಿ ಕೆಲಸ ಪಡೆಯದಿದ್ದರೂ ಪರವಾಗಿಲ್ಲ ಭಾರತದೇಶ ಪೂಜಿಸುವ ಉತ್ತಮ ಪ್ರಜೆಯಾದರೆ ಸಾಕು ಎಂದು ಗೃಹ ಸಚಿವ ಅರಗಜ್ಞಾನೇಂದ್ರ ತಿಳಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಭಾರತ ದೇಶದ ಪವಾಡ ಪುರುಷ. ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ಕೋಟಿಗಟ್ಟಲೇ ಸುರಿದು ಸರಕಾರ ಹೈಟೇಕ್ ಶಾಲೆ ನಿರ್ಮಾಣ ಮಾಡಿದೆ. ವಿಶ್ವಕ್ಕೆ ಮಾನವ ಸಂಪನ್ಮೂಲ ನೀಡುವ ದೇಶ ನಮ್ಮದು. ಶೈಕ್ಷಣಿಕ ಅಭಿವೃದ್ದಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ವಿಶೇಷ ಆಧ್ಯತೆ ನೀಡಿದೆ. ನಮ್ಮೂರಲ್ಲೆ ವ್ಯವಸಾಯಕ್ಕೆ ಜನರೇ ಸಿಗುತ್ತೀಲ್ಲ. ತಂತ್ರಜ್ಞಾನ ಹೆಚ್ಚಾಗಿದೆ ಆದರೇ ಶ್ರಮ ಇಲ್ಲದಿದ್ದರೇ ಆಗೋದಿಲ್ಲ ಎಂದರು.

ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ, ಭಾರತ ದೇಶದ ಉಕ್ಕಿನ ಮಹಿಳೆ ಇಂದಿರಾಗಾಂಧಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅಂತಹ ಹತ್ತಾರು ಪ್ರಧಾನಿಗಳ ಶ್ರಮವೇ ಇಂದು ನರೇಂದ್ರಮೋದಿ ವಿಶ್ವ ಶೃಂಗಸಭೆಯ ಅಧ್ಯಕ್ಷರಾಗಲು ಕಾರಣ. ಅಂಬೇಡ್ಕರ್ ಹೇಳಿದ ಹಾಗೇ ಶಿಕ್ಷಣವು ನಮಗೆ ಆತ್ಮಬಲ ನೀಡಲಿದೆ. ಪ್ರಪಂಚದ ಯಾವುದೇ ಮೂಲೆಗೆ ಹೋದ್ರು ನಮ್ಮ ದೇಶದ ಅಧಿಕಾರಿಗಳೇ ಸೀಗ್ತಾರೇ. ಪ್ರಪಂಚದ ಯಾವುದೇ ಬದಲಾವಣೆಗೆ ಭಾರತವೇ ಪ್ರಮುಖ ಕಾರಣ ಆಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತುಮಕೂರು ಜಿಪಂ ಸಿಇಓ ಡಾ.ವಿದ್ಯಾಕುಮಾರಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಉದೇಶ್, ಕೊರಟಗೆರೆ ತಹಶೀಲ್ದಾರ್ ನಾಹೀದಾ, ತಾಪಂ ಇಓ ದೊಡ್ಡಸಿದ್ದಯ್ಯ, ಬಿಇಓ ಸುಧಾಕರ್, ಕೃಷಿ ಇಲಾಖೆ ನಾಗರಾಜು, ಅರಣ್ಯ ಇಲಾಖೆ ಸುರೇಶ್, ಸಿಡಿಪಿಓ ಅಂಬಿಕಾ, ಸಿಪಿಐ ಸುರೇಶ್, ಪಿಎಸೈ ಚೇತನ್, ಮಹಾಲಕ್ಷ್ಮಮ್ಮ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next