Advertisement

Tulu ಸಿನಿಮಾ ‘ಪುಳಿಮುಂಚಿ’ ಪೋಸ್ಟರ್, ಟ್ರೇಲರ್ ಬಿಡುಗಡೆ; ಶೀಘ್ರ ತೆರೆಗೆ

04:15 PM Jul 26, 2023 | Team Udayavani |

ಮಂಗಳೂರು: ಕೋಸ್ಟಲ್‌ವುಡ್‌ನಲ್ಲಿ ಮತ್ತೊಂದು ವಿಭಿನ್ನ ರೀತಿಯ ‘ಪುಳಿ ಮುಂಚಿ’ ತುಳು ಸಿನಿಮಾ ಸೆಟ್ಟೇರಿದ್ದು, ಇದರ ಪೋಸ್ಟರ್, ಟ್ರೇಲರ್ ಬಿಡುಗಡೆ ನಗರದ ಭಾರತ್ ಮಾಲ್‌ನ ಬಿಗ್ ಸಿನಿಮಾದಲ್ಲಿ ಶುಕ್ರವಾರ ನಡೆಯಿತು.

Advertisement

ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ ಅವರು ಪುಳಿಮುಂಚಿ ಟೀಸರ್, ಪೋಸ್ಟರ್‌ನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., ದ.ಕ. ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಪಮ್ಮಿ ಕೊಡಿಯಾಲ್‌ಬೈಲ್, ಸಿನಿಮಾದ ನಿರ್ದೇಶಕ ಹರಿಪ್ರಸಾದ್ ರೈ, ಸಹನಿರ್ಮಾಪಕ ದೇವಿಪ್ರಸಾದ್ ಜಿ.ಎಸ್., ಪೂರ್ಣಿಮಾ, ಮೇಘನಾಥ್ ಶೆಟ್ಟಿ, ಕಿಶೋರ್ ಕುಮಾರ್ ಶೆಟ್ಟಿ ಮತ್ತಿತರರು ಇದ್ದರು.

ಅ.27ರಂದು ತೆರೆಗೆ
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ತ್ರಿಶೂಲ್ ಶೆಟ್ಟಿ, ನಾನು ಕನ್ನಡ, ತುಳು ಭಾಷೆಗಳಲ್ಲಿ ಹಲವು ವರ್ಷಗಳಿಂದ ಸಹನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದು, ತುಳುವಿನಲ್ಲಿ ಬಿಡುಗಡೆಯಾಗುತ್ತಿರುವ ನನ್ನ ಮೊದಲ ಚಿತ್ರ. ಈ ಸಿನಿಮಾ ಹಾಸ್ಯದ ಜತೆಗೆ ಹೆಸರಿಗೆ ತಕ್ಕಂತೆ ಪ್ರೇಕ್ಷಕರಿಗೆ ಹೊಸತನ, ವೈವಿಧ್ಯತೆಯನ್ನು ನೀಡಲಿದೆ ಎಂದರು.

ಸಹನಿರ್ದೇಶಕರಾಗಿ ತ್ರಿಜಾತ್ ಪ್ರೊಟಕ್ಷನ್, ತಾನ್ಯ ಕ್ರಿಯೇಷನ್, ಸಂಗೀತ ಕಿಶೋರ್ ಕುಮಾರ್ ಶೆಟ್ಟಿ, ಮಯೂರ್ ಆರ್. ಶೆಟ್ಟಿ ಸಾಹಿತ್ಯ ಮತ್ತು ಚಿತ್ರೀಕರಣ ಸೇರಿದಂತೆ ಹಲವು ಪ್ರತಿಭಾನ್ವಿತ ಕಲಾವಿದರು ಈ ಚಿತ್ರಕ್ಕೆ ದುಡಿದಿದ್ದಾರೆ. ವಿನೀತ್ ಕುಮಾರ್ ನಾಯಕ ನಟನಾಗಿ, ಸಮತಾ ಅಮೀನ್ ನಾಯಕಿಯಾಗಿ ನಟಿಸಿದ್ದಾರೆ.

Advertisement

ಉಳಿದಂತೆ ತಾರಾಗಣದಲ್ಲಿ ರಾಹುಲ್ ಅಮೀನ್, ಆರಾಧ್ಯ ಶೆಟ್ಟಿ, ಸ್ವರಾಜ್ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಬೋಜರಾಜ್ ವಾಮಂಜೂರು, ಸಾಯಿಕಿರಣ್ ಕುಡ್ಲ, ರವಿ ರಾಮಕುಂಜ, ಸಂದೀಪ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಉಮೇಶ್ ಮಿಜಾರು, ಪಿಂಕಿ ರಾಣಿ, ಸಂತೋಷ್ ಶೆಟ್ಟಿ ಅದ್ವಿಕಾ ಶೆಟ್ಟಿ ಸೇರಿದಂತೆ ಹಲವರು ನಟಿಸಿದ್ದಾರೆ ಎಂದರು. ಚಿತ್ರನಟ ವಿನೀತ್ ಕುಮಾರ್, ನಟಿ ಸಮತಾ ಅಮೀನ್, ನಟ ಸ್ವರಾಜ್ ಶೆಟ್ಟಿ ಚಿತ್ರದ ಕುರಿತು ವಿವರಣೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next