ಕೋಸ್ಟಲ್ ಫಿಲ್ಮ್ ಅವಾರ್ಡ್ಸ್ ಮತ್ತು ಯುವ ದಸರಾ ಮುಂತಾದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ಸ್ಯಾಂಡೀಸ್ ಕಂಪನಿಯ 3ನೇ ತುಳು ಚಲನಚಿತ್ರ ʼಪೆಟ್ಟಿಸ್ಟ್ʼ ಪ್ರಪ್ರಥಮ ಬಾರಿಗೆ ವಿಭಿನ್ನ ಶೈಲಿಯ ಮೋಶನ್ ಟೈಟಲ್ ಪೋಸ್ಟರ್ ಇದೀಗ ಬಿಡುಗಡೆಗೊಂಡಿದೆ.
ಕನ್ನಡ ಚಿತ್ರರಂಗದಲ್ಲಿ ಡಿಸೈನರ್ ಆಗಿ ತನ್ನ ಚಾಪನ್ನು ಮೂಡಿಸಿರುವ ಜೊತೆಗೆ ಹಲವಾರು ಕನ್ನಡ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ದೇವಿ ರೈ ಅವರು ಈ ಚಿತ್ರಕ್ಕೆ ನಿರ್ದೇಶಕರಾಗಿರುತ್ತಾರೆ.
ಕನ್ನಡ ತುಳು ಮಲಯಾಳಂ ಚಿತ್ರರಂಗದಲ್ಲಿ ಕ್ಯಾಮರಾ ಕೈಚಳಕ ತೋರಿಸಿರುವ ಉದಯ್ ಬಳ್ಳಾಲ್ ಕ್ಯಾಮರಾ ಮ್ಯಾನ್ ಆಗಿದ್ದಾರೆ. ಸಂದೇಶ್ ರಾಜ್ ಬಂಗೇರ, ಸೂರಜ್ ಕುಮಾರ್ ಕಲ್ಯ, ಸದಾನಂದ ಪೂಜಾರಿ, ಶಶಿಕಾಂತ್ ಕರ್ಕೇರಾ, ಸಂತೋಷ್ ಪೂಜಾರಿ ಬಂಡವಾಳ ಹಾಕಲಿದ್ದಾರೆ. ಲಾಯ್ ವ್ಯಾಲೆಂಟೈನ್ ಸಲ್ದಾನ ಇವರ ಸಂಗೀತ ಈ ಚಿತ್ರಕ್ಕಿದೆ.
ಈಗಾಗಲೇ ನಟ-ನಟಿಯರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಡಿಸೆಂಬರ್ ನಲ್ಲಿ ಚಿತ್ರೀಕರಣ ಆರಂಭಗೊಳ್ಳಲಿದೆ.
2025 ಮೇ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ತುಳು ಚಿತ್ರರಂಗದಲ್ಲಿ ಒಂದು ವಿಭಿನ್ನ ಬಗೆಯ ಚಿತ್ರವಾಗಿ ಪೆಟ್ಟಿಸ್ಟ್ ಮೂಡಿ ಬರಲಿದೆ.