Advertisement
ಬಹುಪಯೋಗೀ ತುಳಸಿಯು ಮನುಷ್ಯನ ಪಾರಮಾರ್ಥಿಕ ಹಾಗೂ ಲೌಕಿಕ ಬದುಕಿನಲ್ಲಿ ಅತೀ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪವಿತ್ರ ತುಳಸಿ ಎಂದೇ ಅದಕ್ಕೆ ವಿಶೇಷಣ. ಇಂಗ್ಲಿಷ್‌ನಲ್ಲಿ ಅದು ಹೋಲಿ ಬೇಸಿಲ್, ಸಂಸ್ಕೃತದಲ್ಲಿ ತುಳಸಿ. ತುಳಸಿಗೆ ಇತರ ಹೆಸರುಗಳು ಮಂಜರಿ, ಕೃಷ್ಣತುಳಸಿ, ತ್ರಿತ್ತವು ಇತ್ಯಾದಿ. ವೃಂದ, ವೃಂದಾವನೀ, ವಿಶ್ವಪಾವನಿ, ವಿಶ್ವಪೂಜಿತ, ತುಳಸಿ, ಪುಷ್ಪಸಾರ, ನಂದಿನಿ, ಕೃಷ್ಣಜೀವನಿ ಎಂಬ ಅಷ್ಟ ನಾಮಗಳೊಂದಿಗೆ ತುಳಸೀ ಸಂಕೀರ್ತನೆ ಅತೀ ಪ್ರಸಿದ್ಧ. ರಾಮತುಳಸಿ, ಕೃಷ್ಣ ತುಳಸಿ ಅಥವಾ ಶ್ಯಾಮ ತುಳಸಿ, ವನ ತುಳಸಿ, ಕಾಳಿ ತುಳಸಿ ಇತರ ಪ್ರಭೇದಗಳು.
Related Articles
Advertisement
ಪ್ರಸೀದ ತುಳಸೀ ದೇವೀ ಪ್ರಸೀದ ಹರಿವಲ್ಲಭೇ.. .. ತುಳಸೀ ತ್ವಾಂ ನಮಾಮ್ಯಹಮ್ || ತುಳಸಿಯ ಔಷಧೀಯ ಲಾಭಗಳು: ತುಳಸಿ ಒಂದು ವಿಶಿಷ್ಟ ಗಿಡಮೂಲಿಕೆ. ವಿಶೇಷವಾಗಿ ಶ್ವಾಸೋಚ್ಛಾಸ, ಜೀರ್ಣಕ್ರಿಯೆ ಮತ್ತು ಚರ್ಮದ ವ್ಯಾಧಿಗಳಿಗೆ ಉಪ ಶಮನಕಾರೀ ಔಷಧ. ಅದು ಟ್ಯೂಮರ್ ನಿವಾರಕ ಔಷಧವೆಂದು ಆಯುರ್ವೇದವು ಗುರುತಿಸಿದೆ. ತುಳಸಿಯು ಇಮ್ಯುನೋ ಮೋಡ್ಯುಲೇಟರ್, ಸೈಟೋ ಪ್ರೊಟೆಕ್ಟಿವ್ ಮತ್ತು ಕ್ಯಾನ್ಸರ್ ನಿವಾರಕ ಪದಾರ್ಥವೆಂದು ಪ್ರಯೋಗಗಳು ದೃಢಪಡಿಸಿವೆ. ತುಳಸಿ ಯಲ್ಲಿ ವಿಟಮಿನ್ ಸಿ ಇರುವುದರಿಂದ ಹೃದಯ ಸಂಬಂಧೀ ವ್ಯಾಧಿಗಳು ದೂರ ವಾಗುತ್ತವೆ. ರಕ್ತದಲ್ಲಿ ಕೊಬ್ಬಿನಂಶವನ್ನು ಹತೋಟಿಯಲ್ಲಿಡುತ್ತದೆ.
ತುಳಸಿಯಲ್ಲಿ ಅಸೆಟಿಕ್ ಆಮ್ಲವಿರುವುದರಿಂದ ಶರೀರ ದಲ್ಲಿನ ಯೂರಿಕ್ ಆಮ್ಲ ಮಟ್ಟವನ್ನು ಕಡಿಮೆಗೊಳಿಸಿ ಕಿಡ್ನಿ ಸ್ಟೋನ್‌ಗೆ ಉತ್ತಮ ಔಷಧ. ತಲೆನೋವು, ಜ್ವರ, ಕಣ್ಣಿನ ಆರೋಗ್ಯ, ಮೌಖೀಕ ಆರೋಗ್ಯ ಸಮಸ್ಯೆಗಳನ್ನೂ ನಿವಾರಿಸುತ್ತದೆ. ತುಳಸಿ ಯಲ್ಲಿರುವ ವಿಟಮಿನ್ ಕೆ ಯಿಂದ ಎಲುಬಿನ ಮತ್ತು ಹೃದಯದ ಆರೋಗ್ಯವು ಕಾಪಾಡಲ್ಪಡುತ್ತವೆ. ತುಳಸಿ ಬಳಕೆಯಿಂದ ಅಸ್ತಮಾ, ಬ್ರೋಂಕೈಟಿಸ್, ಶೀತ, ಕೆಮ್ಮು, ಸೈನಸೈಟಿಸ್, ರಕ್ತದೊತ್ತಡ, ಕೊಬ್ಬು, ಅಜೀರ್ಣ, ಅಲ್ಸರ್, ಸಕ್ಕರೆ ಕಾಯಿಲೆ, ಸಂಧಿನೋವು, ಅರ್ಥರೈಟಿಸ್, ಮಲೇರಿಯಾ ಮುಂತಾದ ಕಾಯಿಲೆಗಳನ್ನು ಗುಣಪಡಿಸಬಹುದು. ಮಾನಸಿಕ ಒತ್ತಡ ಮತ್ತು ನರಮಂಡಲ ಸಂಬಂಧೀ ಸಮಸ್ಯೆಗಳನ್ನು ಗುಣಪಡಿಸುತ್ತದೆ ಎಂದು ಚೀನದ ಸಂಶೋಧನೆ ತಿಳಿಸುತ್ತದೆ. ಅಲ್ಲದೆ ಅನೇಕ ಮನೆಮದ್ದುಗಳಲ್ಲಿ ತುಳಸಿಯನ್ನು ಬಳಸುತ್ತಾರೆ.
- ಜಲಂಚಾರು ರಘುಪತಿ ತಂತ್ರಿ, ಉಡುಪಿ