Advertisement

Paris 2024; ಟಿಟಿ ಭಾರತ ಪುರುಷರ ತಂಡ ಕೂಟದಿಂದ ನಿರ್ಗಮನ

10:19 PM Aug 06, 2024 | Team Udayavani |

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ ಪುರುಷರ ಟೇಬಲ್‌ ಟೆನಿಸ್‌ ತಂಡ ಸ್ಪರ್ಧೆಯ ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ಚೀನಾ ವಿರುದ್ಧ 0-3 ಅಂತರದಿಂದ ಸೋತ ಭಾರತ ಕೂಟದಿಂದ ನಿರ್ಗಮಿಸಿದೆ.

Advertisement

ಮೊದಲು ನಡೆದ ಡಬಲ್ಸ್‌ನಲ್ಲಿ ಹರ್ಮೀತ್‌ ದೇಸಾಯಿ-ಮಾನವ್‌ ಠಕ್ಕರ್‌ ಜೋಡಿಯನ್ನು ಮಾ ಲಾಂಗ್‌-ಚುಕ್ವಿನ್‌ ವಾಂಗ್‌ ಸೇರಿಕೊಂಡು 11-2, 11-3, 11-7 ಅಂತರದಿಂದ ಮಣಿಸಿದರು.

ಸಿಂಗಲ್ಸ್‌ನಲ್ಲಿ ಒಲಿಂಪಿಕ್‌ ಚಾಂಪಿಯನ್‌ ಫಾನ್‌ ಝೆಂದಾಂಗ್‌ ವಿರುದ್ಧ ಸೆಣಸಿದ ಅಚಂತ ಶರತ್‌ ಕಮಲ್‌, ಮೊದಲ ಗೇಮ್‌ನಲ್ಲೇನೋ 11-9ರ ಮೇಲುಗೈ ಸಾಧಿಸಿದರು. ಬಳಿಕ 7-11, 7-11, 5-11ರಿಂದ ಪರಾಭವಗೊಂಡರು. ದ್ವಿತೀಯ ಸಿಂಗಲ್ಸ್‌ನಲ್ಲಿ ಮಾನವ್‌ ಠಕ್ಕರ್‌ ಕೂಡ ಎಡವಿದರು. ಅವರನ್ನು ಚುಕ್ವಿನ್‌ ವಾಂಗ್‌ 11-9, 11-6, 11-9ರಿಂದ ಮಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next