Advertisement

ಹೆಚ್ಚು ಅನುದಾನ ತರಲು ಯತ್ನ

01:15 AM Jun 09, 2019 | Team Udayavani |

ಬೆಂಗಳೂರು: ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಬೋವಿ ಸಮಾಜದ ಅಭಿವೃದ್ಧಿಗಾಗಿ ನಿಗಮ ಮಂಡಳಿಗೆ ಹೆಚ್ಚು ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕಾರ್ಮಿಕ ಸಚಿವ ವೆಂಕಟರಮಣಪ್ಪ ಭರವಸೆ ನೀಡಿದರು.

Advertisement

ಅಖೀಲ ಕರ್ನಾಟಕ ಬೋವಿ (ವಡ್ಡರ) ಯುವ ವೇದಿಕೆ ನಗರದ ಹೋಟೆಲ್‌ ಒಂದರಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಬೋವಿ ಯುವಜನ, ಮಹಿಳಾ ಮತ್ತು ಕಾರ್ಮಿಕ ಪ್ರತಿನಿಧಿಗಳ ಚಿಂತನ-ಮಂಥನ ಹಾಗೂ ವಕೀಲ ಶಂಕರಪ್ಪ ಅವರ “ವಿದೇಶಿ ಪ್ರವಾಸ ಕಥನ’ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.

ಸರ್ಕಾರ ನೀಡುವ ಸೌಲಭ್ಯಗಳನ್ನು ಪಡೆಯಲು ಸಮುದಾಯದಲ್ಲಿನ ಒಳಜಗಳಗಳೇ ಅಡ್ಡಿಯಾಗುತ್ತಿವೆ. ಜಗಳ ಬಿಟ್ಟು ಸರ್ಕಾರದ ಯೋಜನೆಗಳು, ಮೀಸಲಾತಿ ಸೌಲಭ್ಯಗಳ ಸದುಪಯೋಗ ಪಡೆದರೆ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿದೆ. ಇದಕ್ಕಾಗಿ ಬೋವಿ ಸಮುದಾಯದ ಪ್ರತಿಯೊಬ್ಬರೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಸಲಹೆ ನೀಡಿದರು.

ಹೈಕೋರ್ಟ್‌ ವಕೀಲ ಹಾಗೂ ಲೇಖಕ ಶಂಕರಪ್ಪ ಮಾತನಾಡಿ, ಕಟ್ಟಡ ಕಾರ್ಮಿಕರನ್ನು ಒಂದು ಸಂಘಟನೆಯೊಳಗೆ ತರವ ಮೂಲಕ ಬೋವಿ ಸಮುದಾಯದ ಪ್ರಗತಿಗೆ ಶ್ರಮಿಸಬೇಕು. ರಾಜಕೀಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಮುದಾಯದ ಪ್ರಾತಿನಿಧ್ಯ ಹೆಚ್ಚಬೇಕು. ರಾಜಕೀಯ ಶಕ್ತಿ ಹೆಚ್ಚಿದರೆ ಸರ್ಕಾರದಿಂದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ರಾಜಕೀಯ ವಿಶ್ಲೇಷಕ ಮಹದೇವ್‌ ಪ್ರಕಾಶ್‌ ಮಾತನಾಡಿ, ಬೋವಿ ಸಮಾಜಕ್ಕೆ 1931ರಲ್ಲಿಯೇ ನಾಲ್ವಡಿ ಕೃಷ್ಣರಾಜ ಒಡೆಯರು ಮೀಸಲಾತಿ ಕಲ್ಪಿಸಿದರು. ನಂತರ ದೇವರಾಜ ಅರಸು ಅದನ್ನು ವಿಸ್ತರಿಸಿದರು. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಐದು ಮೀಸಲು ಕ್ಷೇತ್ರಗಳ ಪೈಕಿ ಬೋವಿ ಸಮುದಾಯದಿಂದ ಒಬ್ಬ ಅಭ್ಯರ್ಥಿಗೂ ಸ್ಪರ್ಧೆಗೆ ಅವಕಾಶ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಮಾಜಿ ಸಚಿವ ಶಿವರಾಜ್‌ ಎಸ್‌.ತಂಗಡಗಿ, ಚಿತ್ರ ನಿರ್ದೇಶಕ ಎಸ್‌.ನಾರಾಯಣ್‌, ಗಾಯಕ ಶಶಿಧರ್‌ ಕೋಟೆ, ಸಂಘದ ರಾಜ್ಯಾಧ್ಯಕ್ಷ ವೈ.ಕೊಟ್ರೇಶ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next