Advertisement

ಚೀನದ ಎಲ್ಲ ಉತ್ಪನ್ನಗಳ ಮೇಲೆ ಆಮದು ಸುಂಕ: ಟ್ರಂಪ್‌ ಖಡಕ್‌ ನುಡಿ

05:22 PM Jul 20, 2018 | udayavani editorial |

ವಾಷಿಂಗ್ಟನ್‌ : ಅಮೆರಿಕ – ಚೀನ ನಡುವಿನ ವಾಣಿಜ್ಯ ಸಮರ ತಾರಕಕ್ಕೇರುವ ಎಲ್ಲ ಲಕ್ಷಣಗಳೂ ತೋರಿ ಬರುತ್ತಿವೆ. ಅಮೆರಿಕ ಆಮದಿಸಿಕೊಳ್ಳುವ 505 ಬಿಲಿಯ ಡಾಲರ್‌ ಮೌಲ್ಯದ ಚೀನದ ಎಲ್ಲ ಉತ್ಪನ್ನಗಳ ಮೇಲೆ ಸುಂಕ ಹೇರಲು ತಾನು ಬಯಸಿರುವುದಾಗಿ ಅಮೆರಿಕ ಅಧ್ಯಕ್ಷ  ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

Advertisement

2017ರಲ್ಲಿ  ಆಮೆರಿಕ ಚೀನದಿಂದ 505.50 ಬಿಲಿಯ ಡಾಲರ್‌ಗಳ ಉತ್ಪನ್ನಗಳನ್ನು ಆಮದಿಸಿಕೊಂಡಿತ್ತು. “ನಾನು 500 ಬಿಲಿಯ ಡಾಲರ್‌ ವರೆಗೂ ಹೋಗಲು ಸಿದ್ದನಿದ್ದೇನೆ’ ಎಂದು ಸಿಎನ್‌ಬಿಸಿ ಗೆ ನೀಡಿದ ಸಂದರ್ಶನದಲ್ಲಿ ರಿಪಬ್ಲಿಕನ್‌ ನಾಯಕ ಟ್ರಂಪ್‌ ಹೇಳಿದರು. 

“ನಾನಿದನ್ನು ರಾಜಕಾರಣಕ್ಕಾಗಿ ಮಾಡುತ್ತಿಲ್ಲ; ನನ್ನ ದೇಶಕ್ಕೆ ಸರಿಯಾದುದನ್ನೇ ಮಾಡುವ ಸಲುವಾಗಿ ನಾನಿದನ್ನು ಮಾಡುತ್ತಿದ್ದೇನೆ; ಬಹಳ ದೀರ್ಘ‌ಕಾಲದಿಂದಲೂ ಚೀನ ನಮ್ಮನ್ನು ಹರಿದು ಸುಲಿದಿದೆ’ ಎಂದು ಟ್ರಂಪ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next