Advertisement
ಅಮೆರಿಕ ನಿರ್ಗಮಿತ ಅಧ್ಯಕ್ಷ ಬರಾಕ್ ಒಬಾಮ, ಮಾಜಿ ಅಧ್ಯಕ್ಷರಾದ ಜಾರ್ಜ್ ಡಬ್ಲ್ಯು ಬುಷ್, ಬಿಲ್ ಕ್ಲಿಂಟನ್, ಅಮೆರಿಕದ ಮಾಜಿ ಪ್ರಥಮ ಮಹಿಳೆಯರಾದ ಮಿಶೆಲ್ ಒಬಾಮ, ಲಾರಾ ಬುಷ್, ಹಿಲರಿ ಕ್ಲಿಂಟನ್ ಸೇರಿದಂತೆ ಗಣ್ಯಾತಿಗಣ್ಯರು ಹಾಜರಿದ್ದರು.
Related Articles
Advertisement
ತಟ್ಟದ ಪ್ರತಿಭಟನೆಯ ಬಿಸಿ: ಟ್ರಂಪ್ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಬಂದಿದ್ದ 10 ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ವೇದಿಕೆ ಸಮೀಪದಲ್ಲಿ 20 ಚೆಕ್‌ಪೋಸ್ಟ್ ನಿರ್ಮಿಸಿದ್ದರಿಂದ ಪ್ರತಿಭಟನಾಕಾರರಿಗೆ ಒಳಪ್ರವೇಶಿಸಲು ಸಾಧ್ಯವಾಗಲಿಲ್ಲ. “ಟ್ರಂಪ್ ಅಸಹಜ ಆಯ್ಕೆ, ಜನಾಂಗೀಯ ನಿಂದನೆಯ ಆರೋಪ ಹೊತ್ತವರು, ಮಹಿಳಾ ವಿರೋಧಿ, ವಲಸಿಗರ ದ್ವೇಷಿ’ ಮುಂತಾದ ಫಲಕಗಳು ಎಲ್ಲೆಡೆ ರಾರಾಜಿಸಿದ್ದವು. ಇದರಲ್ಲಿ ಹೆಚ್ಚಿನ ಜನ ಮೆಕ್ಸಿಕೋ ಪ್ರಜೆಗಳೇ ಇದ್ದರು.
ಥ್ಯಾಂಕ್ಯು ಅಮೆರಿಕ: ಒಬಾಮ ಕೊನೆಯ ಪತ್ರವಾಷಿಂಗ್ಟನ್: ಈ ಎಂಟು ವರ್ಷದ ಅಧಿಕಾರಾವಧಿಯಲ್ಲಿ ನನ್ನನ್ನು ಒಳ್ಳೆಯ ಅಧ್ಯಕ್ಷನನ್ನಾಗಿ ಮಾಡಿದ್ದಕ್ಕೆ, ಒಳ್ಳೆಯ ಮನುಷ್ಯನನ್ನಾಗಿ ರೂಪಿಸಿದ್ದಕ್ಕೆ ಒಬಾಮ ಅಮೆರಿಕದ ಪ್ರಜೆಗಳಿಗೆ ಧನ್ಯವಾದ ಸಮರ್ಪಿಸಿದ್ದಾರೆ. 44ನೇ ನಿರ್ಗಮಿತ ಅಧ್ಯಕ್ಷ ಶ್ವೇತ ಭವನ ತೊರೆಯುವ ಮುನ್ನ ದೇಶದ ಪ್ರಜೆಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ. “ನನ್ನ ಪ್ರತಿ ಹೆಜ್ಜೆಯಲ್ಲೂ ನೀವು ಭರವಸೆ ತುಂಬಿದ್ದೀರಿ. ಕೆಲವೊಮ್ಮೆ ನನ್ನ ಸಾಮರ್ಥಯ ಕುಸಿದಾಗ ಬೇಗನೆ ಚೇತರಿಸಿಕೊಳ್ಳಲು ಚೈತನ್ಯ ತುಂಬಿದ್ದೀರಿ’ ಎಂದಿದ್ದಾರೆ. “ನಾನು ನಿಮ್ಮಿಂದ ಹೆಚ್ಚು ಕಲಿತಿದ್ದೇನೆ. ದೇಶದ ಯುವ ಪದವೀಧರರು, ಸೇನಾಧಿಕಾರಿಗಳು ನನಗೆ ಭರವಸೆ ತುಂಬಿದರು. ಒಬಾಮ ಔಟ್, ಮೋದಿ ಸಾಮಾಜಿಕ ತಾಣದ ಕಿಂಗ್!
ನವದೆಹಲಿ: ಶ್ವೇತಭವನದಿಂದ ಬರಾಕ್ ಒಬಾಮ ನಿರ್ಗಮನರಾಗುತ್ತಿದ್ದಂತೆ, ಇತ್ತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದೃಷ್ಟ ಖುಲಾಯಿಸಿದೆ. ಅಧಿಕಾರದ ಚುಕ್ಕಾಣಿ ಹಿಡಿದಿದ್ದ ನಾಯಕರಲ್ಲಿ ಒಬಾಮ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಅನುಯಾಯಿ ಗಳನ್ನು ಹೊಂದಿದ್ದರು. ಒಬಾಮ ಅಧಿಕಾರ ಕಳೆದುಕೊಂಡ ಮೇಲೆ ಮೋದಿ ಈಗ “ಸೋಷಿಯಲ್ ಮೀಡಿಯಾ ಕಿಂಗ್’ ಎನಿಸಿಕೊಂಡಿದ್ದಾರೆ. ಪ್ರಸ್ತುತ ಮೋದಿಗೆ ಟ್ವಿಟ್ಟರಿನಲ್ಲಿ 26.5 ದಶಲಕ್ಷ, ಫೇಸ್‌ಬುಕ್‌ನಲ್ಲಿ 39.2 ದಶಲಕ್ಷ, ಗೂಗಲ್ ಪ್ಲಸ್‌ನಲ್ಲಿ 3.2 ದಶಲಕ್ಷ, ಲಿಂಕಿxನ್‌ನಲ್ಲಿ 1.99 ದಶಲಕ್ಷ, ಇನ್‌ಸ್ಟಗ್ರಾಮ್‌ನಲ್ಲಿ 5.8 ದಶಲಕ್ಷ ಹಾಗೂ ಯೂಟ್ಯೂಬ್‌ನಲ್ಲಿ 5,91,000 ಅನುಯಾಯಿಗಳಿದ್ದಾರೆ.