Advertisement

ಟ್ರಂಪ್‌ ಭಾರತ ಭೇಟಿ ವಿರೋಧಿಸಿ ಪ್ರತಿಭಟನೆ

09:04 PM Feb 24, 2020 | Lakshmi GovindaRaj |

ಹಾಸನ: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಭಾರತ ಭೇಟಿ ವಿರೋಧಿಸಿ ಜನಪರ ಮತ್ತು ಪ್ರಜಾಸತ್ತಾತ್ಮಕ ಸಂಘಟನೆ ಕಾರ್ಯಕರ್ತರು ನಗರದ ಹೇಮಾವತಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ಟ್ರಂಪ್‌ ಮತ್ತು ಮೋದಿ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಆಹ್ವಾನಿಸಿ, ಹೈನುಗಾರಿಕೆ ಮತ್ತು ಕುಕ್ಕುಟೋದ್ಯಮದ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿಹಾಕುವುದನ್ನು ಖಂಡನೀಯ.

Advertisement

ಈ ಒಪ್ಪಂದ ಜಾರಿಯಾದರೆ ಭಾರತಕ್ಕೆ ವಾರ್ಷಿಕ ಅಂದಾಜು 42ಸಾವಿರ ಕೋಟಿ ರೂ. ಹೈನು ಉತ್ಪನ್ನಗಳು, ಕೋಳಿ ಉತ್ಪನ್ನಗಳು, ಮತ್ತಿತರ ಕೃಷಿ ಉತ್ಪನ್ನಗಳು ಅಮೇರಿಕದಿಂದ ಭಾರತಕ್ಕೆ ಆಮದಾಗುತ್ತವೆ. ಇದರಿಂದ ಹೈನುಗಾರಿಕೆ ಅವಲಂಬಿಸಿರುವ ಸುಮಾರು ನೂರು ಮಿಲಿಯನ್‌ ರೈತರು, ಅದರಲ್ಲೂ ಮಹಿಳೆ¿ ತೊಂದರೆಗೆ ಒಳಗಾಗುತ್ತಾರೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಹೈನುಗಾರಿಕೆ, ಕುಕ್ಕುಟ ಉದ್ಯಮಕ್ಕೆ ಮಾರಕ: ಹೈನುಗಾರಿಕೆ ಮತ್ತು ಕುಕ್ಕಟ ಉದ್ಯಮದಲ್ಲಿ ತೊಡಗಿರುವ ಕಾರ್ಮಿಕರು ಕೂಡ ತಮ್ಮ ಜೀವನೋಪಾಯದಿಂದ ವಂಚಿತರಾಗುತ್ತಾರೆ. ಸೇಬು, ಚೆರ್ರಿ, ಬಾದಾಮಿ, ಸೋಯಾಬೀನ್‌, ಗೋಧಿ, ಜೋಳ ಮೊದಲಾದ ಹಣ್ಣು ಕಾಳುಗಳ ಮೇಲಿನ ಆಮದು ತೆರಿಗೆಯನ್ನು ಶೇ. 100ರಿಂದ ಶೇ.10ಕ್ಕೆ ಇಳಿಸಿದರೆ ಭಾರತದ ರೈತರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಭಾರತದ ರೈತರ ಪ್ರತಿಭಟನೆಗಳಿಗೆ ಮಣಿದು ಆರ್‌ಸಿಇಪಿ ಒಪ್ಪಂದಕ್ಕೆ ನಾವು ಸಹಿ ಹಾಕಿಲ್ಲ ಎಂದು ಹೇಳಿಕೊಂಡ ಬಿಜೆಪಿ ಸರ್ಕಾರ ಈಗ ಈ ಹೊಸ ಒಪ್ಪಂದದ ಮೂಲಕ ಆರ್‌ಸಿಇಪಿ ಗಿಂತ ಆಘಾತಕಾರಿ ಪರಿಣಾಮವನ್ನು ಉಂಟುಮಾಡುತ್ತಿದೆ ಎಂದು ಆಆರೋಪಿಸಿದರು.

ಅಮೆರಿಕದ ಬೇಡಿಕೆಯಂತೆ ಹೈನುಗಾರಿಕೆ ಉತ್ಪನ್ನಗಳ ಆಮದಿನ ಮೇಲಿನ ಶೇ. 64 ರಷ್ಟು ತೆರಿಗೆಯನ್ನು ಕಡಿತಗೊಳಿಸಿದರೆ ಭಾರತದ ಹಾಲಿನ ಆಂತರಿಕ ಮಾರುಕಟ್ಟೆ ತೀವ್ರವಾಗಿ ನೆಲ ಕಚ್ಚುತ್ತದೆ. ಭಾರತದಲ್ಲಿ ಕುಕ್ಕುಟೋದ್ಯಮವು ಸುಮಾರು 48 ದಶಲಕ್ಷ ಜನರ ಜೀವನೋಪಾಯವಾಗಿದೆ. ಈ ವಲಯದ ಸಂಘಟಿತ ಮತ್ತು ಅಸಂಘಟಿತ ರೂಪದ ಆದಾಯ ಸುಮಾರು 80 ಸಾವಿರ ಕೋಟಿ ರೂ. ಈಗ ಅಮೆರಿಕಾದಿಂದ ಕಡಿಮೆ ದರದ ಕುಕ್ಕುಟ ಉತ್ಪನ್ನಗಳು ಭಾರತವನ್ನು ಪ್ರವೇಶಿಸಿದರೆ ಭಾರತದ ಆಂತರಿಕ ಕುಕ್ಕುಟ ಮಾರುಕಟ್ಟೆಗೆ ಮರಣ ಶಾಸನ ಬರೆದಂತೆ ಎಂದು ಎಚ್ಚರಿಸಿದರು.

ಅಮೆರಿಕದ ತೀವ್ರ ಒತ್ತಡಕ್ಕೆ ಒಳಗಾಗಿ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವುದರಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಶೇ.85ರಷ್ಟು ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಹಾಗೂ ಕೃಷಿ ಕೂಲಿಕಾರರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಆದ್ದರಿಂದ ಅಮೆರಿಕಾದೊಂದಿಗೆ ಭಾರತವು ಕೃಷಿ ವ್ಯಾಪಾರ ಒಪ್ಪಮದ ಮಾಡಿಕೊಳ್ಳಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್‌, ಕೆ.ಪಿ.ಆರ್‌.ಎಸ್‌. ಜಿಲ್ಲಾಧ್ಯಕ್ಷ ಎಚ್‌.ಆರ್‌. ನವೀನ್‌ ಕುಮಾರ್‌, ಮುಖಂಡರುಗಳಾದ ಫ‌ೃಥ್ವಿ, ಅರವಿಂದ್‌, ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಾಶೀರ್‌ ಅಹಮದ್‌ ಮತ್ತಿರರರು ಪ್ರತೀಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

ಶಿವರಾಮೇಗೌಡ ವಿರುದ್ಧ ಬಲಿಜ ಜನಾಂಗದ ಪ್ರತಿಭಟನೆ
ಹಾಸನ: ಬಲಿಜ ಸಮುದಾಯದ ಬಡ ವಿದ್ಯಾರ್ಥಿಗಳ ಏಳಿಗೆಗೆ ಮೀಸಲಾಗಿರುವ ಆನೇಕಲ್‌ ತಿಮ್ಮಯ್ಯ ಚಾರಿಟಬಲ್‌ ಟ್ರಸ್ಟ್‌ ದತ್ತಿ ಆಸ್ತಿಯಲ್ಲಿ ಅಕ್ರಮವಾಗಿ ಸೇರಿಕೊಂಡು ದಬ್ಟಾಳಿಕೆ ಮತ್ತು ತೊಂದರೆ ಕೊಡುತ್ತಿರುವ ಮಾಜಿ ಶಾಸಕ ಎಲ್‌.ಆರ್‌. ಶಿವರಾಮೇಗೌಡ ಅವರ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಲಿಜ ಸಮುದಾಯದವರು ಸೋಮವಾರ ಪ್ರತಿಭಟನೆ ನಡೆಸಿದರು.

ಕೋಟ್ಯಂತರ ರೂ. ಬಾಕಿ: ಬೆಂಗಳೂರು ಬಲಿಜ ಸಮುದಾಯದ ಆಸ್ತಿಯಲ್ಲಿ ಅಕ್ರಮವಾಗಿ ಸೇರಿಕೊಂಡು ದಬ್ಟಾಳಿಕೆ ಮತ್ತು ಬಲಿಜಗರಿಗೆ ಶಿವರಾಮೇಗೌಡರು ತೊಂದರೆ ಕೊಡುತ್ತಿದ್ದಾರೆ. ಹಲವಾರು ವರ್ಷಗಳಿಂದ ಬಾಡಿಗೆ ಕೊಡದೇ ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡು ದತ್ತಿ ಆಸ್ತಿಯ ಉಳಿದ ಜಾಗವನ್ನು ಕಾನೂನು ಬಾಹಿರವಾಗಿ ಅತಿಕ್ರಮಿಸಿ ಅದನ್ನು ಪ್ರಶ್ನಿಸಿ ಕಾನೂನು ಕ್ರಮ ಕೈಗೊಳ್ಳಲು ಮುಂದಾದ ಬಲಿಜ ಸಂಘದ ಪದಾಧಿಕಾರಿಗಳನ್ನು ಗೂಂಡಾಗಳೆಂದು ಅವಮಾನಿಸಿ, ಸುಳ್ಳು ಪೊಲೀಸ್‌ ದೂರನ್ನು ಸಹ ದಾಖಲಿಸಿ ಬಲಿಜ ಸಮುದಾಯದ ಆತ್ಮಗೌರವಕ್ಕೆ ಧಕ್ಕೆ ಹಾಗೂ ಬಲಿಜರ ಸ್ವಾಭಿಮಾನಕ್ಕೆ ಸವಾಲೆಸದು ಪದಾಧಿಕಾರಿಗಳ ಗೌರವಕ್ಕೆ ಧಕ್ಕೆ ತಂದಿರುವ ಎಲ್‌.ಆರ್‌. ಶಿವರಾಮೇಗೌಡರ ವಿರುದ್ದ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಾನೂನು ಬಾಹಿರ ಒಪ್ಪಂದ: ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆನೇಕಲ್‌ ತಿಮ್ಮಯ್ಯ ಕಟ್ಟಡ ಕರ್ನಾಟಕ ಬಲಿಜ ಜನಾಂಗದವರ ಆಸ್ತಿಯನ್ನು ಕಾರಣಾಂತರದಿಂದ ಸರ್ಕಾರಿ ಆಡಳಿತಕ್ಕೆ ಒಳಪಟ್ಟ ಸಂದರ್ಭದಲ್ಲಿ ಎಲ್‌.ಆರ್‌. ಶಿವರಾಮೇಗೌಡರು ಮತ್ತು ಹಿಂದಿನ ಕರ್ನಾಟಕ ಪ್ರದೇಶ ಬಲಿಜ ಸಂಘದ ಹಂಗಾಮಿ ಅಧ್ಯಕ್ಷರು ಸೇರಿಕೊಂಡು ಸರ್ಕಾರಿ ಅಧಿಕಾರಿಗಳ ಆಡಳಿತದ ಗಮನಕ್ಕೆ ಬಾರದಂತೆ ಒಳ ಒಪ್ಪಂದದ ಮೂಲಕ ಕಾನೂನು ಬಾಹಿರವಾಗಿ 30 ವರ್ಷಗಳಿಗೆ ಕಟ್ಟಡದ ಲೀಸ್‌ ಒಪ್ಪಂದ ಮಾಡಿಕೊಂಡು ಅಕ್ರಮವಾಗಿ ಕಟ್ಟಡವನ್ನು ಅತಿಕ್ರಮಿಸಿಕೊಂಡಿದ್ದಾರೆ. ಶಿವರಾಮೇಗೌಡರು ಇಲ್ಲಿಯವರೆಗೂ ಬಾಕಿ ಇರಿಸಿಕೊಂಡಿರುವ ಕಟ್ಟಡದ ಬಾಡಿಗೆ ಪಾವತಿಸಬೇಕು.

ಕಟ್ಟಡ ಜಾಗವನ್ನು ಖಾಲಿ ಮಾಡಿ ಕಟ್ಟಡದ ಹೊರಗೆ ಹೋಗಬೇಕು. ಮಾಡಿದ ತಪ್ಪಿಗೆ ಕರ್ನಾಟಕ ರಾಜ್ಯದ ಸ್ವಾಭಿಮಾನಿ ಬಲಿಜ ಜನಾಂಗದವರಲ್ಲಿ ಕ್ಷಮೆ ಕೇಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಜಿಲ್ಲಾ ಬಲಿಜ ಜನಾಂಗದ ಅಧ್ಯಕ್ಷ ಧರ್ಮೇಂದ್ರ, ಗೌರವಾಧ್ಯಕ್ಷ ವೆಂಕಟೇಶ್‌, ಖಜಾಂಚಿ ಸತೀಶ್‌, ಆಯೋಜಕರಾದ ರಂಗನಾಥ್‌, ಉಪಾಧ್ಯಕ್ಷ ವಾಸು, ರಮೇಶ್‌, ಕಾರ್ಯದರ್ಶಿ ಶ್ರೀಧರ್‌, ಭಾಸ್ಕರ್‌ ನಾಯ್ಕ, ಹರ್ಷಿತ್‌, ವೇಣುಗೋಪಾಲ್‌, ಚೇತನ್‌, ಗಿರಿಧರ್‌ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next