Advertisement
ಸುಮಾರು 20 ಕೋಟಿ ಬಡ ಜನ ರಿಗೆ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೇವೆ ಒದಗಿಸುತ್ತಿರುವ “ಒಬಾಮ ಕೇರ್’ ಯೋಜನೆ ರದ್ದುಪಡಿಸುವ ಆದೇಶ ಪತ್ರಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ. ಈ ಯೋಜನೆಯ ಕಾನೂನನ್ನು ರದ್ದುಪಡಿಸುವುದೇ ನಮ್ಮ ಆಡಳಿತ ನೀತಿ ಎಂದು ಒಂದು ಪುಟದ ಆದೇಶ ಪತ್ರದಲ್ಲಿ ತಿಳಿಸಲಾಗಿದೆ. ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಒಬಾಮ ಕೇರ್ ಯೋಜನೆಯನ್ನು ರದ್ದುಪಡಿಸುತ್ತಿರುವುದಾಗಿ ಟ್ರಂಪ್ ಸ್ಪಷ್ಟೀಕರಿಸಿದ್ದಾರೆ ಎಂದು ಶ್ವೇತಭವನ ಮಾಧ್ಯಮ ಕಾರ್ಯದರ್ಶಿ ತಿಳಿಸಿದ್ದಾರೆ.
ವಾಷಿಂಗ್ಟನ್: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ದಂತೆ ಇರುವ ಅಮೆ ರಿಕದ ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್‌ನ ಅಧ್ಯಕ್ಷರಾಗಿ ಬೆಂಗಳೂರು ಮೂಲದ ಅಜಿತ್ ವರದರಾಜ ಪೈ (43) ಅವರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಕ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ. ಸದ್ಯ ಅವರು ಕಮಿಷನ್‌ನ ಆಯುಕ್ತರಾಗಿದ್ದಾರೆ. ಆದರೆ ಈ ಬಗ್ಗೆ ಸರಕಾರದಿಂದ ಅಧಿಕೃತ ಹೇಳಿಕೆ ಬಿಡುಗಡೆ ಮಾಡಲಾಗಿಲ್ಲ.