Advertisement

ತಮಿಳು ನಾಡಿನಲ್ಲಿ ಟ್ರಕ್‌ ಮುಷ್ಕರ: 4.5 ಲಕ್ಷ ಲಾರಿಗಳು ಭಾಗಿ

07:14 PM Jul 20, 2018 | Team Udayavani |

ಚೆನ್ನೈ : ದೇಶಾದ್ಯಂತದ ಅನಿರ್ದಿಷ್ಟಾವಧಿ ಟ್ರಕ್‌ ಮುಷ್ಕರ ಕರೆಗೆ ಅನುಗುಣವಾಗಿ ತಮಿಳು ನಾಡಿನಲ್ಲಿ ಇಂದು ಸುಮಾರು 4.50 ಲಕ್ಷ ಟ್ರಕ್‌ಗಳು ರಸ್ತೆಯಿಂದ ದೂರ ಉಳಿದು ಮುಷ್ಕರದಲ್ಲಿ ಪಾಲ್ಗೊಂಡವು. 

Advertisement

ಮುಷ್ಕರದ ಭಾಗವಾಗಿ ತಮಿಳು ನಾಡಿನಲ್ಲಿ ಅಂತಾರಾಜ್ಯ ಟ್ರಕ್ಕುಗಳು ಕೂಡ ರಸ್ತೆಗೆ ಇಳಿಯಲಿಲ್ಲ ಎಂದು ತಮಿಳು ನಾಡಿನ ಟ್ರಕ್‌ ಮಾಲಕರ ಒಕ್ಕೂಟದ ಕಾರ್ಯದರ್ಶಿ ಸಿ ಧನರಾಜ್‌ ಹೇಳಿದರು. 

ಟ್ರಕ್‌ ಮುಷ್ಕರದಿಂದಾಗಿ ತಮಿಳು ನಾಡು ಸರಕಾರಕ್ಕೆ ದಿನವಹಿ 100 ಕೋಟಿ ರೂ. ಆದಾಯ ನಷ್ಟವಾಗುತ್ತದೆ ಮತ್ತು ಟ್ರಕ್‌ ನಿರ್ವಾಹಕರಿಗೆ ಸುಮಾರು 3ರಿಂದ 4 ಕೋಟಿ ರೂ. ನಷ್ಟವಾಗುತ್ತದೆ ಎಂದು ಧನರಾಜ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next