Advertisement

ಮಧ್ಯಪ್ರದೇಶದ ರತ್ಲಾಮ್‌ನಲ್ಲಿ ಬಸ್ ನಿಲ್ದಾಣದಲ್ಲಿದ್ದ ಜನರ ಮೇಲೆ ಟ್ರಕ್ ಡಿಕ್ಕಿ; 6 ಸಾವು, 12 ಮಂದಿಗೆ ಗಾಯ

08:40 AM Dec 05, 2022 | Team Udayavani |

ಮಧ್ಯಪ್ರದೇಶ: ಬಸ್ ನಿಲ್ದಾಣದಲ್ಲಿ ಜನರ ಮೇಲೆ ಟ್ರಕ್ ಡಿಕ್ಕಿ ಹೊಡೆದು 6 ಮಂದಿ ಮೃತಪಟ್ಟು, 12 ಮಂದಿ ಗಾಯಗೊಂಡ ಘಟನೆ ಇಲ್ಲಿನ ರತ್ಲಾಮ್ ಜಿಲ್ಲೆಯಲ್ಲಿ ಸಂಭವಿಸಿದೆ.

Advertisement

ರತ್ಲಂ ಜಿಲ್ಲೆಯಿಂದ 35 ಕಿ.ಮೀ. ದೂರದಲ್ಲಿರುವ ರತ್ಲಾಮ್-ಲೆಬಾದ್ ರಸ್ತೆಯಲ್ಲಿರುವ ಸತ್ರುಂಡಾ ಗ್ರಾಮದ ಬಳಿಯ ಟ್ರಾಫಿಕ್ ನಲ್ಲಿ ಈ ಅಪಘಾತ ಸಂಭವಿಸಿದೆ.

ರತ್ಲಾಮ್‌ನಿಂದ ಬದ್ನಾವರ್‌ಗೆ ಪ್ರಯಾಣಿಸುತ್ತಿದ್ದಾಗ ಟ್ರಕ್ ನ ಚಕ್ರ ಒಡೆದು ವೇಗವಾಗಿ ಬಂದ ವಾಹನ ಟ್ರಾಫಿಕ್ ಪಕ್ಕದಲ್ಲಿದ್ದ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಜನರ ಗುಂಪಿಗೆ ನುಗ್ಗಿದೆ ಎಂದು ತಿಳಿದು ಬಂದಿದೆ.

ಗಾಯಗೊಂಡವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next