Advertisement

ಫಿಲೋಮಿನಾದ ತ್ರಿಶೂಲ್‌ ರಾಷ್ಟ್ರೀಯ  ಜೀವ ರಕ್ಷಣಾ ಈಜು ಚಾಂಪಿಯನ್‌

09:38 AM Dec 23, 2017 | Team Udayavani |

ಪುತ್ತೂರು: ಗೋವಾದಲ್ಲಿ ನಡೆದ 2017-18ರ ರಾಷ್ಟ್ರೀಯ ಜೀವ ರಕ್ಷಣಾ ಈಜು ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪ. ಪೂ. ಕಾಲೇಜಿನ ವಿದ್ಯಾರ್ಥಿ ತ್ರಿಶೂಲ್‌ ಅವರು ಕರ್ನಾಟಕ ರಾಜ್ಯದಿಂದ 16 ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಭಾಗವಹಿಸಿ 9 ಚಿನ್ನ ಮತ್ತು 1 ಬೆಳ್ಳಿ ಪದಕವನ್ನು ಜಯಿಸುವ ಮೂಲಕ ರಾಷ್ಟ್ರೀಯ ಚಾಂಪಿಯನ್‌ ಆಗಿ ಮೂಡಿ ಬಂದಿದ್ದಾರೆ. 2018ರಲ್ಲಿ ಆಸ್ಟ್ರೇ ಲಿಯಾದ ಅಡಿಲೇಡ್‌ನ‌ಲ್ಲಿ ಜರಗಲಿರುವ ವಿಶ್ವ ಮಟ್ಟದ ಜೀವ ರಕ್ಷಣಾ ಈಜು ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

Advertisement

ಸ್ಪಧೆಯ  200 ಮೀ. ಸೂಪರ್‌ ಲೈಫ್‌ ಸೇವರ್‌ನಲ್ಲಿ ಪ್ರಥಮ, 200 ಮೀ. ಒಬ್‌ಸ್ಟ್ರಾಕಲ್‌ ಕ್ಯಾರಿಯಲ್ಲಿ ಪ್ರಥಮ, 1 ಕಿ. ಮೀ. ಬೀಚ್‌ ರೇಸ್‌ನಲ್ಲಿ ಪ್ರಥಮ, ಬೀಚ್‌ ಫ್ಲ್ಯಾಗ್‌ನಲ್ಲಿ ಪ್ರಥಮ, ರನ್‌-ಸ್ವಿಮ್‌-ರನ್‌ನಲ್ಲಿ ಪ್ರಥಮ, ಸರ್ಫ್‌ ರೇಸ್‌ನಲ್ಲಿ ಪ್ರಥಮ, ಬೋರ್ಡ್‌ ರೇಸ್‌ನಲ್ಲಿ ಪ್ರಥಮ, ಮ್ಯಾನಿಕಿನ್‌ ಕ್ಯಾರಿಯ 50 ಮತ್ತು 100 ಮೀ. ನಲ್ಲಿ ಪ್ರಥಮ ಹಾಗೂ ಮ್ಯಾನಿಕಿನ್‌ ಟೊ ವಿದ್‌ ಫಿನ್ಸ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಪುತ್ತೂರು ಅಕ್ವಾಟಿಕ್‌ ಕ್ಲಬ್‌ ಸದಸ್ಯರಾಗಿರುವ ಅವರಿಗೆ ಪಾರ್ಥ ವಾರಣಾಸಿ, ನಿರೂಪ್‌ ಜಿ. ಆರ್‌. ಮತ್ತು ವಸಂತ ಗೌಡ ತರಬೇತಿ ನೀಡಿದ್ದಾರೆ. ವಿದ್ಯಾರ್ಥಿಯ ವಿಶಿಷ್ಟ ಸಾಧನೆಗೆ ಸಂತ ಫಿಲೋಮಿನಾ ಪ. ಪೂ. ಕಾಲೇಜಿನ ಪ್ರಾಂಶುಪಾಲ ವಂ| ವಿಜಯ್‌ ಲೋಬೊ, ದೈ.ಶಿ. ನಿರ್ದೇಶಕ ಪ್ರಕಾಶ್‌ ಡಿಸೋಜಾ ಮತ್ತು ಸೌಮ್ಯಲತಾ ಕೆ. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next