Advertisement

ತ್ರಿಪುರ: ಬಿಜೆಪಿ 33 ಸ್ಥಾನಗಳಲ್ಲಿ ಮುಂದೆ, CPM 26ರಲ್ಲಿ ಮುಂದೆ

10:53 AM Mar 03, 2018 | Team Udayavani |

ಹೊಸದಿಲ್ಲಿ : ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್‌ ವಿಧಾನಸಭೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದ್ದು ಈಗ 10.50ರ ಹೊತ್ತಿಗೆ ದೊರಕಿರುವ ಟ್ರೆಂಡ್‌ ಪ್ರಕಾರ 59 ಸ್ಥಾನಬಲದ ತ್ರಿಪುರದಲ್ಲಿ ಬಿಜೆಪಿ 31 ಸ್ಥಾನಗಳಿಂದ ಮುಂದಿದೆ. 

Advertisement

ಬಿಜೆಪಿಗೆ ಕತ್ತು ಕತ್ತಿನ ಸ್ಪರ್ಧೆ ನೀಡುತ್ತಿರುವ ಸಿಪಿಎಂ 26 ಸ್ಥಾನಗಳಲ್ಲಿ ಮುಂದಿದೆ. ಕಾಂಗ್ರೆಸ್‌ ಕೇವಲ 2 ಸ್ಥಾನಗಳಲ್ಲಿ ಮುಂದಿದೆ. ಸಿಪಿಐ ಮತ್ತು ಇತರರು ಇನ್ನೂ ಖಾತೆ ತೆರೆದಿಲ್ಲ.

59 ಸದಸ್ಯ ಬಲದ ಮೇಘಾಲಯ ವಿಧಾನಸಭೆಯ 48 ಸ್ಥಾನಗಳ ಟ್ರೆಂಡ್‌ ದೊರಕಿದ್ದು ಆ ಪೈಕಿ ಕಾಂಗ್ರೆಸ್‌ 21 ಸ್ಥಾನಗಳಲ್ಲಿ ಮುಂದಿದೆ; ಅನಂತರದ ಸ್ಥಾನದಲ್ಲಿ ಎನ್‌ಪಿಪಿ 14 ಸ್ಥಾನಗಳಲ್ಲಿ ಮುಂದಿದೆ. ಮೂರನೇ ಸ್ಥಾನದಲ್ಲಿರುವ ಬಿಜೆಪಿ ಆರು ಸ್ಥಾನಗಳಲ್ಲಿ ಮುಂದಿದೆ. ಇತರರು 4 ಸ್ಥಾನಗಳಲ್ಲಿ ಮುಂದಿದ್ದಾರೆ. 

 ನಾಗಾಲ್ಯಾಂಡ್‌ನ‌ 60 ಸ್ಥಾನಗಳಲ್ಲಿ 51 ಸ್ಥಾನಗಳ ಟ್ರೆಂಡ್‌ ಗೊತ್ತಾಗಿದ್ದು ಇಲ್ಲಿ ಎನ್‌ಪಿಎಫ್ 26 ಸ್ಥಾನಗಳಲ್ಲಿ ಮುಂದಿದೆ; ಬಿಜೆಪಿ 21 ಸ್ಥಾನಗಳಲ್ಲಿ ಮುಂದಿದೆ; ಕಾಂಗ್ರೆಸ್‌ ಕೇವಲ ಎರಡು ಸ್ಥಾನಗಳಲ್ಲಿ ಮುಂದಿದೆ; ಇತರರು 2 ಸ್ಥಾನಗಳಲ್ಲಿ ಮುಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next