Advertisement

ತ್ರಿಪುರ: ಲೆನಿನ್‌ ಪ್ರತಿಮೆ ಧ್ವಂಸ

01:19 AM Mar 07, 2018 | Team Udayavani |

ಅಗರ್ತಲಾ: ದಕ್ಷಿಣ ತ್ರಿಪುರ ಜಿಲ್ಲೆಯ ಬೆಲೋನಿಯಾ ಪಟ್ಟಣದಲ್ಲಿ ತಿಂಗಳ ಹಿಂದಷ್ಟೇ ಪ್ರತಿ ಷ್ಠಾಪಿಸಲಾಗಿದ್ದ ಕಮ್ಯೂನಿಸ್ಟ್‌ ನಾಯಕ ಲೆನಿನ್‌ ಪ್ರತಿಮೆಯನ್ನು ಯುವಕರ ಗುಂಪೊಂದು ಉರುಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

Advertisement

ಸೋಮವಾರ ನಡೆದಿರುವ ಈ ಘಟನೆ, ಮಂಗಳವಾರ ಕಾಳ್ಗಿಚ್ಚಿನಂತೆ ದೇಶವ್ಯಾಪಿ ಆವರಿಸಿದೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಿಪಿಎಂ, ಇದು ಬಿಜೆಪಿಯ ಕೃತ್ಯವೆಂದು ಆರೋಪಿಸಿದೆ. ಆದರೆ ಬಿಜೆಪಿ ನಾಯಕರು ಈ ಆರೋಪವನ್ನು ನೇರ ಸ್ವೀಕ ರಿಸಿಲ್ಲವಾದರೂ ಪ್ರತಿಮೆ ಧ್ವಂಸ ಪ್ರಕರಣವನ್ನು ಸಮರ್ಥಿಸಿಕೊಂಡಿದ್ದಾರೆ. ಇದು ಬಿಜೆಪಿ ಪರ- ವಿರೋಧಿಗಳ ವಾಕ್ಸಮರಕ್ಕೆ ಕಾರಣವಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಜೆಸಿಬಿ ಯಂತ್ರದ ಜತೆ ಬಂದಿದ್ದ ಯುವಕರ ಗುಂಪು ಪ್ರತಿಮೆ ಯನ್ನು ಉರುಳಿಸಿದ ಬಳಿಕ  “ಭಾರತ್‌ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿತು. ತ್ರಿಪುರದಲ್ಲಿ ಬಿಜೆಪಿ ಅಧಿಕಾರಕ್ಕೇರುವ ಮುನ್ನವೇ ಈ ಘಟನೆ ನಡೆದಿರುವುದರಿಂದ ಭಾರೀ ರಾಜಕೀಯ ಮಹತ್ವ ಪಡೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next