Advertisement
ಸಾಮಾನ್ಯ ದಿನಗಳಲ್ಲಿ ಖಾಸಗಿ ಬಸ್‌ಗಳಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಸುಮಾರು 700 ರೂ. ಇದೆ. ಆದರೆ ಆನ್‌ಲೈನ್ ಮೂಲಕ ಗಣೇಶ ಹಬ್ಬದ ಎರಡು ದಿನ ಹಿಂದೆ ಅಂದರೆ ಶುಕ್ರವಾರ (ಆ. 30) ಬೆಂಗಳೂರಿನಿಂದ ಮಂಗಳೂರಿಗೆ ಬರಲು 1,800 ರೂ. ಗರಿಷ್ಠ ದರ ನೀಡಬೇಕಾಗಿದೆ. ಈ ಬಾರಿ ಚತುರ್ಥಿ ಹಬ್ಬ ಸೆ. 2ರಂದು ಸೋಮವಾರ ಬಂದಿದ್ದು, ರವಿವಾರ ಖಾಸಗಿ ಮತ್ತು ಸರಕಾರಿ ಕಚೇರಿಗಳಿಗೆ ರಜೆ ಇರುತ್ತದೆ. ಆದ್ದರಿಂದ ಹೆಚ್ಚಿನವರು ಶುಕ್ರವಾರವೇ ಪ್ರಯಾಣಿಸುತ್ತಾರೆ.
ಬೆಂಗಳೂರು-ಮಂಗಳೂರು 1,800
ಮಂಗಳೂರು-ಮೈಸೂರು 900
ಮಂಗಳೂರು ಹುಬ್ಬಳ್ಳಿ 1,500
ಮಂಗಳೂರು-ಕೊಪ್ಪಳ 710 ಗಣೇಶ ಚತುರ್ಥಿ ವೇಳೆ ಕೆಎಸ್ಸಾರ್ಟಿಸಿ ಬಸ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಿಶೇಷ ದರ ಪಟ್ಟಿಯೂ ಜಾರಿಯಾಗಿಲ್ಲ.
-ಅಶ್ರಫ್ ಕೆ.ಎಂ., ಕೆಎಸ್ಸಾರ್ಟಿಸಿ ಮಂಗಳೂರು, ವಿ.ಭಾಗ ನಿಯಂತ್ರಣಾಧಿಕಾರಿ