Advertisement

ನಾನು ಗೆದ್ದರೆ “ತ್ರಿಬಲ್‌ ಎಂಜಿನ್‌’ ಸರಕಾರದ ಲಾಭ: ಡಾ| ಪ್ರಭಾ ಮಲ್ಲಿಕಾರ್ಜುನ್‌

12:08 AM Apr 08, 2024 | Team Udayavani |

ರಾಜಕೀಯ ಹಿನ್ನೆಲೆಯ ಪ್ರತಿಷ್ಠಿತ ಶಾಮನೂರು ಕುಟುಂಬದ ಸದಸ್ಯೆ. ದಂತ ವೈದ್ಯೆ. ಹಿರಿಯ ಶಾಸಕ ಶಾಮನೂರು ಶಿವಶಂಕಪ್ಪ ಅವರ ಸೊಸೆ ಹಾಗೂ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರ ಪತ್ನಿ. ಇದೇ ಮೊದಲ ಬಾರಿಗೆ ಲೋಕ ಸಭೆೆಗೆ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದು, ಸಂಸದ ಡಾ| ಜಿ.ಎಂ.ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಅವರನ್ನು ಎದುರಿಸುತ್ತಿದ್ದಾರೆ.

Advertisement

ಜೀವನದಲ್ಲೇ ಮೊದಲ ಬಾರಿಗೆ ಚುನಾ ವಣ ಕಣಕ್ಕಿಳಿದಿದ್ದೀರಿ. ಏನನ್ನಿಸುತ್ತಿದೆ?
ನನಗೆ ಸ್ಪರ್ಧೆ ಮಾತ್ರ ಹೊಸದು. ಆದರೆ ಜನಸ್ಪಂದನೆ, ಜನಸೇವೆ ಹಾಗೂ ಚುನಾವಣೆ ಹೊಸದಲ್ಲ. ಈಗ ಅಭ್ಯರ್ಥಿ ಯಾಗಿರುವುದು ಸಂತೋಷ ತಂದಿದೆ. ಜತೆಗೆ ಜವಾ ಬ್ದಾರಿಯೂ ಹೆಚ್ಚಾಗಿದೆ.

ಚುನಾವಣೆಗೆ ಸ್ಪರ್ಧಿಸಬೇಕು ಎಂದು ನಿಮಗೆ ಅನ್ನಿಸಿದ್ದು ಯಾವಾಗ, ಯಾಕೆ ಮತ್ತು ಪ್ರೇರಣೆ ಏನು?
ಎಂದೂ ಚುನಾವಣೆಗೆ ಸ್ಪರ್ಧಿಸು ತ್ತೇನೆಂದು ಅಂದುಕೊಂಡಿರಲಿಲ್ಲ. ಆದರೆ, ಆರೋಗ್ಯ-ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ, ಜನಸ್ಪಂದನೆ, ಸಂಘಟನೆ ಮತ್ತು ನಾಯಕತ್ವ ಗುಣ ಪಕ್ಷ ಗುರುತಿಸಿದ್ದರ ಫಲವಾಗಿ ನಾನಿಂದು ಸ್ಪರ್ಧೆಗಿಳಿದ್ದೇನೆ.

 ರಾಜಕೀಯದಲ್ಲಿ ನಿಮ್ಮ ಗಾಡ್‌ ಫಾದರ್‌ ಯಾರು ಮತ್ತು ಯಾಕೆ?
ನನ್ನದು ಕಕ್ಕರಗೊಳ್ಳದ ಪಟೇಲ್‌ ಗೌಡರ ಕುಟುಂಬ. ನನ್ನ ಅಜ್ಜ ಸಿದ್ಧವೀರಪ್ಪ ಕೂಡ ಕಾಂಗ್ರೆಸ್‌ನಲ್ಲಿದ್ದರು. ದೊಡ್ಡಪ್ಪಾಜಿ ಬಸನಗೌಡ್ರು ಜಿ.ಪಂ. ಅಧ್ಯಕ್ಷರಾಗಿದ್ದವರು. ಅಪ್ಪಾಜಿ(ಮಾವ)ಶಾಮನೂರು ಶಿವಶಂಕರಪ್ಪ, ಪತಿ ಮಲ್ಲಿಕಾರ್ಜುನ್‌ ಇವರೆಲ್ಲರೂ ನನಗೆ ರಾಜಕೀಯದಲ್ಲಿ ಗಾಡ್‌ ಫಾದರ್‌.

ಮೊದಲ ಪ್ರಯತ್ನದಲ್ಲೇ ನೀವು ಲೋಕಸಭೆಗೆ ಸ್ಪರ್ಧಿಸುತ್ತಿದ್ದೀರಿ, ಕಾರಣವೇನು?
ನಾನು ನೇರವಾಗಿ ಈಗ ಲೋಕಸಭೆಗೆ ಸ್ಪರ್ಧಿಸಿರಬಹುದು. ಆದರೆ ಗ್ರಾಮ ಪಂಚಾಯತ್‌, ನಗರ ಪಾಲಿಕೆ ಆಡಳಿತ, ಅಲ್ಲಿಯ ಚುನಾವಣೆ, ರಾಜಕಾರಣ ಎಲ್ಲವನ್ನೂ ಹತ್ತಿರದಿಂದ ನೋಡಿ ದ್ದೇನೆ. ಜನಸೇವೆ ಇಚ್ಛೆ ಯುಳ್ಳವರು, ಬದ್ಧತೆಯುಳ್ಳವರು ಅಭ್ಯರ್ಥಿ ಯಾಗ ಬೇಕೆಂದು ಪಕ್ಷವೇ ನನ್ನನ್ನು ಕಣಕ್ಕಿಳಿಸಿದೆ.

Advertisement

 ನಿಮ್ಮ ಕ್ಷೇತ್ರದ ಜನ ನಿಮಗೆ ಯಾವ ಕಾರಣಕ್ಕಾಗಿ ಮತ ಹಾಕಬೇಕು?
ಕಳೆದ 25 ವರ್ಷದಿಂದ ಕ್ಷೇತ್ರದಲ್ಲಿ ಸ್ಥಗಿತಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ, ಶಾಮನೂರು ಕುಟುಂಬದ ಜನಸೇವೆ ನೋಡಿ ಜನ ಬೆಂಬಲಿಸಬೇಕು. ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಶಾಮನೂರು ಕುಟುಂಬದವರೇ ಇದ್ದು ನನ್ನನ್ನೂ ಆಯ್ಕೆ ಮಾಡಿದರೆ ಜನರಿಗೆ “ತ್ರಿಬಲ್‌ ಎಂಜಿನ್‌’ ಸರಕಾರದ ಲಾಭ ಸಿಗಲಿದೆ.

ಈ ಚುನಾವಣೆಯನ್ನು ನೀವು ಹೇಗೆ ಗೆಲ್ಲುತ್ತೀರಿ? ಪ್ರಮುಖ ಕಾರಣ ಹೇಳಿ.
ಶಾಮನೂರು ಕುಟುಂಬದವರು ಕ್ಷೇತ್ರ ದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು, ನಾನು ಮಾಡಿದ ಆರೋಗ್ಯ-ಶಿಕ್ಷಣ ಸೇವೆ, ಜನರ ಕಷ್ಟ-ಸುಖಗಳಿಗೆ ಸ್ಪಂದನೆ, ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಗೆಲುವಿಗೆ ನೆರವಾಗಲಿವೆ.

ನಿಮ್ಮ ಕನಸೇನು? ಗೆದ್ದು ದಿಲ್ಲಿಗೆ ಹೋಗಿ ಏನು ಮಾಡಬೇಕು ಅಂತ ಇದ್ದೀರಿ?
ಜನಸೇವೆ ಮಾಡುವುದು ಇಷ್ಟ. ದಾವಣಗೆರೆ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಬೇಕು ಎಂಬ ಕನಸಿದೆ. ಸಂಸತ್ತಿಗೆ ಹೋಗಿ ಕ್ಷೇತ್ರದ ಅಭಿವೃದ್ಧಿಗೆ ಹೊಸ ಯೋಜನೆ, ಹೆಚ್ಚಿನ ಅನುದಾನ ತರಬೇಕು ಎಂಬ ಇಚ್ಛೆ ಇದೆ.

ಗೆದ್ದರೆ ನಿಮ್ಮ ಲೋಕಸಭಾ ಕ್ಷೇತ್ರಕ್ಕೆ ಮಾಡುವ ಮೊದಲ ಕೆಲಸ ಏನು?
ನನ್ನ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳ ಶಾಸಕ ರಿಂದ ಆಯಾ ಕ್ಷೇತ್ರಗಳಲ್ಲಿ ಮುಖ್ಯವಾಗಿ ಆಗ ಬೇಕಾದ ಕೆಲಸಗಳನ್ನು ಆದ್ಯತೆ ಮೇರೆಗೆ ಈಡೇರಿಸಲು ಕ್ರಮ ಕೈಗೊಳ್ಳುತ್ತೇನೆ.

ಕ್ಷೇತ್ರದ ಭವಿಷ್ಯಕ್ಕೆ ಇರುವ 5 ಕನಸು? ಅವುಗಳನ್ನು ಹೇಗೆ ಈಡೇರಿಸುತ್ತೀರಿ?
ನೀರಿನ ಸಮಸ್ಯೆ ನಿವಾ ರಿಸಲು ಕೆರೆಗಳ ಅಭಿವೃದ್ಧಿ, ಕೆರೆಗಳ ಜೋಡಣೆಗೆ ಯೋಜನೆ, ಮಹಿಳೆಯರಿಗಾಗಿ ಸಣ್ಣ ಕೈಗಾರಿಕೆ ಸ್ಥಾಪನೆ, ಐಟಿ-ಬಿಟಿ ಮೂಲಕ ಯುವಕರಿಗೆ ಉದ್ಯೋಗಾವಕಾಶ, ವಿದ್ಯಾರ್ಥಿಗಳಿಗೆ ವೃತ್ತಿ ಆಧಾರಿತ ಸಾಫ್ಟ್‌ ಸ್ಕಿಲ್‌ ತರಬೇತಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕೋಚಿಂಗ್‌ ಕೇಂದ್ರ, ವಿಮಾನ ನಿಲ್ದಾಣ ಸ್ಥಾಪನೆ, ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿ ಯಾಗಿ ಮೇಲ್ದರ್ಜೆಗೇರಿಸುವ ಕನಸಿದೆ.

ಅನೇಕ ಹಿರಿಯ ನಾಯಕರನ್ನು ನೀವು ಸಂಭಾಳಿಸಬೇಕಾಗುತ್ತದೆ. ಹೇಗೆ ನಿಭಾಯಿಸುತ್ತೀರಿ?
ಅಭ್ಯರ್ಥಿಯಾಗಿ ಮಾತ್ರ ನಾನು ಹೊಸಬಳು. ಆದರೆ, 8-10 ಚುನಾ ವಣೆಗಳಲ್ಲಿ ಕೆಲಸ ಮಾಡಿದ್ದರಿಂದ ಪಕ್ಷದ ಹಿರಿಯ ನಾಯಕರ ಪರಿಚಯವಿದೆ. ಅಪ್ಪಾಜಿ, ಮಲ್ಲಿಕಾರ್ಜುನ್‌ ಜತೆ ಎಲ್ಲ ಹಿರಿಯ ನಾಯಕರೂ ಉತ್ತಮ ಒಡನಾಟ ಹೊಂದಿರುವುದು ಸಹಜವಾಗಿಯೇ ಸಹಕಾರಿಯಾಗಲಿದೆ.

– ಎಚ್‌.ಕೆ. ನಟರಾಜ

 

Advertisement

Udayavani is now on Telegram. Click here to join our channel and stay updated with the latest news.

Next