ಸಿಡ್ನಿ: ಬೌನ್ಸರ್ ಏಟು ತಿಂದು ದಾರುಣವಾಗಿ ಸಾವನ್ನಪ್ಪಿದ ಕಾಂಗರೂ ನಾಡಿನ ಆರಂಭಕಾರ ಫಿಲಿಪ್ ಹ್ಯೂಸ್ ಅವರಿಗೆ ಶುಕ್ರವಾರದ ಮೊದಲ ಏಕದಿನ ಪಂದ್ಯದ ವೇಳೆ ಭಾರತ ಹಾಗೂ ಆಸ್ಟ್ರೇಲಿಯ ತಂಡಗಳ ಆಟಗಾರರು ಗೌರವ ಸಲ್ಲಿಸಿದ್ದಾರೆ.
ಸಿಡ್ನಿಯಲ್ಲಿ ನಡೆಯುವ ಈ ಪಂದ್ಯದ ದಿನವೇ (ನ. 27) ಹ್ಯೂಸ್ ಅವರ 6ನೇ ಪುಣ್ಯತಿಥಿ ಆಗಿರುವುದು ಕಾಕತಾಳೀಯ.
2014ರ ನ. 25ರಂದು ಸೌತ್ ಆಸ್ಟ್ರೇಲಿಯ ಪರ ಶೆಫೀಲ್ಡ್ ಶೀಲ್ಡ್ ಪಂದ್ಯ ಆಡುತ್ತಿದ್ದಾಗ ನ್ಯೂ ಸೌತ್ ವೇಲ್ಸ್‌ನ ಸೀನ್ ಅಬೋಟ್ ಅವರ ಬೌನ್ಸರ್ ಎಸೆತವೊಂದು ಹ್ಯೂಸ್ ಅವರ ತಲೆಗೆ ಬಡಿದು ಈ ದುರಂತ ಸಂಭವಿಸಿತ್ತು. ಕೋಮಾಕ್ಕೆ ಜಾರಿದ ಅವರು ಎರಡು ದಿನಗಳ ಜೀವನ್ಮರ ಹೋರಾಟದ ಬಳಿಕ ಸಿಡ್ನಿಯ ಡಾರ್ಲಿಂಗ್ ಹರ್ಸ್ಡ್ನ ಸೇಂಟ್ ವಿನ್ಸೆಂಟ್ಸ್ ಕ್ಲಿನಿಕ್‌ನಲ್ಲಿ ಸಾವನ್ನಪ್ಪಿದ್ದರು. ಕ್ರಿಕೆಟ್ ಜಗತ್ತು ಈ ಆಘಾತದಿಂದ ತತ್ತರಿಸಿತ್ತು.
ಇದನ್ನೂ ಓದಿ:ಏಕದಿನದ ಯಶಸ್ವಿ ಚೇಸಿಂಗ್ ದಾಖಲೆ: ಅಂತಿಮ ಓವರ್‌ನಲ್ಲಿ ಅತ್ಯಧಿಕ ರನ್ ಚೇಸ್
ಪಂದ್ಯಕ್ಕೂ ಉಭಯ ತಂಡದ ಆಟಗಾರರು ಮೌನ ಪ್ರಾರ್ಥನೆ ಸಲ್ಲಿಸಿ ಅಗಲಿದ ಆಟಗಾರನಿಗೆ ಗೌರವ ಸಲ್ಲಿಸಿದರು. ಎರಡೂ ತಂಡದ ಆಟಗಾರರು ಕಪ್ಪುಪಟ್ಟಿ ಧರಿಸಿ ಗೌರವ ಸಲ್ಲಿಸಿದರು.
ಕಾಕತಾಳೀಯವೆಂದರೆ, 2014ರ ಈ ದುರ್ಘಟನೆ ನಡೆದ್ದು ಕೂಡ ಸಿಡ್ನಿ ಅಂಗಳದಲ್ಲೇ. ಆಗಲೂ ಭಾರತ ತಂಡ ಆಸ್ಟ್ರೇಲಿಯ ಪ್ರವಾಸದಲ್ಲಿತ್ತು. ಅಂದಿನ ಬೌಲರ್ ಸೀನ್ ಅಬೋಟ್ ಈಗಿನ ಆಸೀಸ್ ತಂಡದ ಸದಸ್ಯನೂ ಆಗಿದ್ದಾರೆ!