Advertisement
ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಹುಣಸೂರು ತಾಲೂಕುಗಳಲ್ಲಿ ಹೆಚ್ಚು ಬುಡಕಟ್ಟು ಸಮುದಾಯಗಳು ವಾಸ ಮಾಡುತ್ತಿದ್ದು, ಬುಡಕಟ್ಟು ಸಮುದಾಯಗಳ ಜೇನುಕುರುಬ, ಯರವ, ಕಾಡುಕುರುಬ ಸೋಲಿಗ, ಹಕ್ಕಿಪಿಕ್ಕಿ, ಡೊಂಗ್ರಿ ಗೆರಾಸಿಯಾ ಜನರು ತಲಾ ತಲಾಂತರಗಳಿಂದ ಅರಣ್ಯದ ಒಳಗಡೆ ವಾಸಿಸುತ್ತಿದ್ದು, ಇವರನ್ನು 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ನುಗು, ತಾರಕ, ಕಬಿನಿ, ಅಣೆಕಟ್ಟುಗಳನ್ನು ಕಟ್ಟುವಾಗ ಸಹ ಇವರಿಗೆೆ ಯಾವುದೇ ಪುನರ್ವಸತಿ ಕಲ್ಪಿಸದೇ ಅತಂತ್ರ ಸ್ಥಿತಿಗೆ ತರಲಾಗಿದೆ ಆದಿವಾಸಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಕೊಡಗು, ಮೈಸೂರಿನಲ್ಲಿ ಸುಮಾರು 15 ಬಡಕಟ್ಟು ಯುವ ಜನರು 10-12 ವರ್ಷಗಳಿಂದ ಕಡಿಮೆ ವೇತನಕ್ಕೆ ಶಿಕ್ಷಕರಾಗಿದ್ದಾರೆ. ಇವರನ್ನು ಕಾಯಂ ಗೊಳಿಸಬೇಕು. ಜತೆಗೆ ಅದಿವಾಸಿ ಯುವಕ ಯುವತಿಯರು ಡಿ.ಎಡ್ ಮತ್ತು ಬಿ.ಎಡ್ ತರಬೇತಿ ಪಡೆದು ಕೂಲಿ ಕೆಲಸಕ್ಕೆ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರನ್ನು ಕೂಡ ಆಶ್ರಮ ಶಾಲೆಗಳಿಗೆ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಲು ನೇಮಕಾತಿಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಇತ್ತೀಚಿಗೆ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 11 ದಿನಗಳ ಧರಣಿ ಸತ್ಯಾಗ್ರಹದ ಪರಿಣಾಮವಾಗಿ ಮೊದಲನೆ ಹಂತದಲ್ಲಿ 10 ಮನೆಗಳನ್ನು ಡಿ.ಬಿ.ಕುಪ್ಪೆ ಮತ್ತು ಎನ್.ಬೆಳತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲು ಸಂಸದರು, ಶಾಸಕರು ಮೈಸೂರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದರು.
ಐಟಿಡಿಪಿ ಇಲಾಖೆ ಇದರ ಬಗ್ಗೆ ನಿರ್ಲಕ್ಷ್ಯತನ ತೋರಿದ್ದು, ಅರಣ್ಯ ಭೂಮಿ ಸರ್ವೆ ಹಾಗೂ ಮನೆ ನಿರ್ಮಾಣದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದರು. ಪ್ರತಿಭಟನೆಯಲ್ಲಿ ಜಾನಕಮ್ಮ, ಕರಿಯಪ್ಪ, ಮಹದೇವ, ಈರಮ್ಮ, ಅಯ್ಯಪ್ಪ, ಮಹದೇವ, ಶಂಕರ್, ಜವರ, ವಾಣಿ, ಸತ್ಯ, ಗೌರಮ್ಮ, ಈಶ್ವರಿ, ಗೀತಾ, ಜಯಮ್ಮ, ಪುಟ್ಟಮ್ಮ ಸೇರಿದಂತೆ ನೂರಾರು ಆದಿವಾಸಿ ಜನರು ಇದ್ದರು.