Advertisement

ಕೈ ಮೂಳೆ ಮುರಿತ: ಆಸೀಸ್ ಸರಣಿಯಿಂದ ಹೊರಬಿದ್ದ ಟ್ರೆಂಟ್ ಬೌಲ್ಟ್

09:47 AM Dec 29, 2019 | Team Udayavani |

ಮೆಲ್ಬೋರ್ನ್: ನ್ಯೂಜಿಲ್ಯಾಂಡ್ ನ ವೇಗಿ ಟ್ರೆಂಟ್ ಬೌಲ್ಟ್ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಬ್ಯಾಟಿಂಗ್ ವೇಳೆ ಕೈ ಮೂಳೆ ಮುರಿತವಾದ ಕಾರಣ ಬೌಲ್ಟ್ ಮೂರನೇ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

Advertisement

ಇತ್ತೀಚೆಗಷ್ಟೇ ಗಾಯದಿಂದ ಚೇತರಿಸಿಕೊಂಡು ಮತ್ತೆ ತಂಡ ಸೇರಿರುವ ಟ್ರೆಂಟ್ ಬೌಲ್ಟ್ ಮತ್ತೆ ಗಾಯಗೊಂಡು ಹೊರಬಿದ್ದಿದ್ದಾರೆ. ಮಿಚೆಲ್ ಸ್ಟಾರ್ಕ್ ಬೌನ್ಸರ್ ತಡೆಯಲು ಮುಂದಾದ ಬೌಲ್ಟ್ ಬಲಗೈಗೆ ಚೆಂಡು ಬಡಿದಿತ್ತು.

ಎಡಗೈ ವೇಗಿಯಾಗಿರುವ ಟ್ರೆಂಟ್ ಬೌಲ್ಟ್ ಬಲಗೈಗೆ ತಾಗಿದರೂ ಎರಡನೇ ಇನ್ನಿಂಗ್ಸ್ ನಲ್ಲಿ ಬೌಲಿಂಗ್ ನಡೆಸಿದರು.

ಈ ಪಂದ್ಯ ಮುಗಿದ ತಕ್ಷಣ ಬೌಲ್ಟ್ ನ್ಯೂಜಿಲ್ಯಾಂಡ್ ಗೆ ಮರಳಲಿದ್ದಾರೆ. ಅವರಿಗೆ ನಾಲ್ಕು ವಾರಗಳ ವಿಶ್ರಾಂತಿ ಬೇಕಾಗಿದೆ ಎಂದು ತಂಡದ ಮಾಧ್ಯಮ ವಕ್ತಾರ ತಿಳಿಸಿದ್ದಾರೆ.

ಹೊರಬಿದ್ದಿರುವ ಟ್ರೆಂಟ್ ಬೌಲ್ಟ್ ಬದಲಿಗೆ ಯಾವುದೇ ಆಟಗಾರನನ್ನು ಕಿವೀಸ್ ಮಂಡಳಿ ಇದವರೆಗೆ ಘೋಷಿಸಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next