Advertisement
ಕಸಬಾ ಹೋಬಳಿ ಮೆಳ್ಳೆಕಟ್ಟಿ ಕಂದಾಯ ಗ್ರಾಮದ ಸರ್ವೇ ನಂ.1ರಲ್ಲಿ ಸುಮಾರು 500 ಎಕರೆ ವಿಸ್ತೀರ್ಣ ಹಾಗೂ ನಾರಾಯಣಪುರ ಕಂದಾಯ ಗ್ರಾಮದ 2200 ಎಕರೆ ಜಮೀನುಗಳಲ್ಲಿ ಬೆಳೆದು ನಿಂತಿದ್ದ ಗಿಡ, ಮರಗಳನ್ನು ಕಡಿದು ಹಾಕಿ ಕೆಲವರು ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದಾರೆ. ಅಲ್ಲದೇ ಕೆಲವು ಜನರಿಗೆ ಸರ್ಕಾರ ಪಟ್ಟಾವನ್ನು ನೀಡಿರುತ್ತಾರೆ.
Related Articles
Advertisement
ಇವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು. ಒಂದು ವೇಳೆ ಕಂದಾಯ ಅಧಿಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳದೇ, ಆ ಸ್ಥಳದಲ್ಲಿ ಪುನಃ ಗಿಡ, ಮರಗಳನ್ನು ಬೆಳೆಸದಿದ್ದಲ್ಲಿ ನಮ್ಮ ಜಾನುವಾರುಗಳೊಂದಿಗೆ ಮಿನಿವಿಧಾನಸೌಧ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ತಹಶೀಲ್ದಾರ್ ಕೆ.ಗುರುಬಸವರಾಜ್ ಅವರು, ಕಂದಾಯ ಅಧಿಧಿಕಾರಿಗಳ ಮೂಲಕ ಸ್ಥಳವನ್ನು ಪರೀಶೀಲನೆ ನಡೆಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಅಕ್ರಮವಾಗಿ ಸಾಗುವಳಿ ಮಾಡುತ್ತಿರುವುದು ಕಂಡು ಬಂದಲ್ಲಿ ಅವರನ್ನು ತೆರವುಗೊಳಿಸಿ ಪುನಃ ಗಿಡಗಳನ್ನು ನೆಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಳಿಸಿದರು.
ಗ್ರಾಪಂ ಸದಸ್ಯ ಮುತ್ತಪ್ಪ, ಪಿ.ಚಂದ್ರಯ್ಯ, ಜಗದೀಶ್, ಎಚ್.ಹಾಲೇಶ್, ಬಿ.ಗೋಣೆಪ್ಪ, ಹೊನ್ನಪ್ಪ, ಹನುಮಂತಪ್ಪ, ಕೆಂಚಪ್ಪ, ಪರಶಪ್ಪ, ಮಂಜಪ್ಪ, ತಿರುಪತಿ ಸೇರಿದಂತೆ ಯಲ್ಲಾಪುರ ರೈತರು, ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.